ಮುಂಬರುವ newzland ಪ್ರವಾಸಕ್ಕೆ ಟೀಮ್ ಇಂಡಿಯಾ ತಂಡ ಪ್ರಕಟ , ಯಾರು ತಂಡದ ನಾಯಕ ??
ಐಸಿಸಿ ವರ್ಲ್ಡ್ ಟಿ ಟ್ವೆಂಟಿ ಕಪ್ ನ ಲೀಗ್ ಹಂತದಲ್ಲೇ ನೀರಸ ಪ್ರದರ್ಶನ ತೋರಿ ಹೊರ ಬಂದಿರುವ ಭಾರತ ತಂಡ, ಮುಂಬರುವ newzland ಎದುರಿನ ಟೂರ್ನಿ ಗೆ ತನ್ನ ತಂಡವನ್ನು ಪ್ರಕಟಿಸಿದೆ. ಈ ಬಾರಿ ಹಲವಾರು ಬದಲಾವಣೆ ಮಾಡಲಾಗಿದ್ದು ಬಿಸಿಸಿಐ ಹೊಸ ತಂಡವನ್ನೇ ಕಟ್ಟುವ ಮುನ್ಸೂಚನೆ ನೀಡಿದೆ. ಹಾಗಾದರೆ ಈ ಹೊಸ ತಂಡವನ್ನು ಮುನ್ನಡೆಸುವುದು ಯಾರು ಎಂಬುದು ಎಲ್ಲರ ಪ್ರಶ್ನೆ ?
ಹೌದು ಈ ಬಾರಿ ಹೊಸ ಮುಖಗಳಿಗೆ ತಂಡದಲ್ಲಿ ಸ್ಥಾನ ಕೊಟ್ಟಿದ್ದು ಹೊಸ ಪ್ರತಿಭೆಗಳಿಗೆ ಮಣೆ ಹಾಕಿದೆ. ಕೊಲ್ಕತ್ತಾ ತಂಡದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ವೆಂಕಟೇಶ್ ಅಯ್ಯರ್ ತಂಡದಲ್ಲಿ ಸ್ಥಾನ ಗಿಟ್ಟಿಸುವಲ್ಲಿ ಯಶಸ್ವಿ ಆಗಿದ್ದಾರೆ. ಇನ್ನುಳಿದಂತೆ ಚೆನ್ನೈ ತಂಡದ ಸ್ಫೋಟಕ ಆಟಗಾರ ರಿತುರಾಜ್ ಗೈಕ್ವಾಡ್, ಸೂರ್ಯ ಕುಮಾರ್ ಯಾದವ್, ಇಶಾನ್ ಕಿಶನ್, ರಿಷಬ್ ಪಂತ್, ಆವೇಶ್ ಖಾನ್, ಆಕ್ಷರ್ ಪಟೇಲ್, ದೀಪಕ್ ಚಹರ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್ ಗೆ ಮಣೆ ಹಾಕಿದೆ.
ಇನ್ನು ಅನುಭವಿ ಆಟಗಾರರು ಎಂದರೆ ರೋಹಿತ್ ಶರ್ಮಾ , ಕೆ ಎಲ್ ರಾಹುಲ್, ಅರ್ ಅಶ್ವಿನ್, ಯಜುವೆಂದ್ರ ಚಹಲ್, ಭುವನೇಶ್ವರ್ ಕುಮಾರ್ ತಂಡದಲ್ಲಿ ಇದ್ದಾರೆ.
ಈ ಬಾರಿ ಎಲ್ಲರ ನಿರೀಕ್ಷೆಯಂತೆ ಕ್ಯಾಪ್ಟನ್ ಸ್ಥಾನದಿಂದ ಕೊಹ್ಲಿ ಯನ್ನು ಬಿಟ್ಟು ರೋಹಿತ್ ಗೆ ಕ್ಯಾಪ್ಟನ್ ಸ್ಥಾನ ನೀಡಲಾಗಿದೆ. ಈ ಟೂರ್ನಿ ಇಂದ ಕೊಹ್ಲಿ ಅವರನ್ನು ಕೈ ಬಿಡಲಾಗಿದೆ. ವಿಶ್ರಾಂತಿ ನೀಡಿ ಮುಂಬರುವ ಪಂದ್ಯಗಳಿಗೆ ಸಜ್ಜಾಗುವಂತೆ ಸೂಚಿಸಲಾಗಿದೆ. ಈ ಹೊಸ ಯುವ ತಂಡ ಭಾರತದ ಕೀರ್ತಿ ಪತಾಕೆ ಬಾನೆತ್ತರಕ್ಕೆ ಹಾರಿಸಲಿ ಎಂಬುದು ಎಲ್ಲರ ಆಶಯ