ಮೆರೆಯುತ್ತಿದ್ದ ಬಾಲಿವುಡ್ ಇದೀಗ KGF ನಂತರ ಎಲ್ಲ ಸಿನೆಮಾಗಳು ಫ್ಲಾಪ್. ಕರ್ಮಾ ರಿಟರ್ನ್ಸ್ ಅಂತಿದ್ದಾರೆ ದೇಶದ ಜನರು.

277

ಬಾಲಿವುಡ್ ದೇಶದ ಚಿತ್ರರಂಗದಲ್ಲಿಯೇ ಒಂದು ಬಹುದೊಡ್ಡ ಚಿತ್ರರಂಗ ಎಂದರೆ ತಪ್ಪಾಗಲಾರದು. ಇದೆ ಕಾರಣಕ್ಕೆ ಹಿಂದಿ ಚಿತ್ರರಂಗವನ್ನು ಕೆಲವರು ಭಾರತೀಯ ಚಿತ್ರರಂಗ ಅಂತ ಕರೆಯಲು ಶುರು ಮಾಡಿದರೆ ಬೇರೆ ಚಿತ್ರರಂಗಗಳಿಗೆ ದಕ್ಷಿಣ ಸಿನೆಮಾ ಅಂತ ಕರೆಯಲು ಶುರು ಮಾಡಿದರು. ಹೀರೋಗೆ ನಟನೆ ಬರದೇ ಇದ್ದರು ಕೂಡ ಅವನಿಗೆ ಸಿಕ್ಕಾಪಟ್ಟೆ ಅವಕಾಶಗಳು ಸಿಗುತಿತ್ತು ಈ ಬಾಲಿವುಡ್ ಅಲ್ಲಿ, ಡಾನ್ಸ್ ಕೂಡ ಏನೇನು ಇಲ್ಲ, ಕೇವಲ ಪಾಶ್ಚಿಮಾತ್ಯ ಸಂಸ್ಕೃತಿ ಬಳಸಿಕೊಂಡು ಜನರ ಮನಸು ಕೆಡಿಸುತ್ತ ಬಂದಿದೆ ಬಾಲಿವುಡ್ ಅಂದರೆ ತಪ್ಪಾಗಲಾರದು.

ತೆಲುಗಿನ RRR ಹಾಗು ಕನ್ನಡ KGF ಚಾಪ್ಟರ್ ೨ ಬಿಡುಗಡೆ ಗೊಂಡು ಸಿಕ್ಕಾಪಟ್ಟೆ ಸುದ್ದಿ ಆಗಿತ್ತು. ಇದು ವಿಶ್ವದಾದ್ಯಂತ ಸುದ್ದಿ ಮಾಡಿದ್ದಲ್ಲದೆ ಎರಡು ಸಿನೆಮಾಗಳು ಕೂಡ ೧೦೦೦ ಕೋಟಿಗೂ ಅಧಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ. ಭಾರತದ ಜನರಿಗೆ ಸಿನೆಮಾ ದ ಮೇಲಿನ ನಿರೀಕ್ಷೆ ಹೆಚ್ಚಾಗಿಸಿದ್ದು ಈ ಸಿನೆಮಾಗಳು. ಪ್ರತಿ ಹಳೆಯ ದಾಖಲೆಗಳನ್ನು ಕೂಡ ಹಿಂದೆ ಸರಿಸಿ ಹೊಸ ಹೊಸ ದಾಖಲೆ ಬರೆಯುತ್ತ ಹೋಯಿತು ಕನ್ನಡದ KGF ಸಿನೆಮಾ. ಉತ್ತಮ ನಿರ್ದೇಶನ, ನಟನೆ, ಸಂಗೀತ, ಸಿನೆಮಾಟೋಗ್ರಫಿ ಮೂಲಕ ಈ ಸಿನೆಮಾ ಪರಿಪೂರ್ಣ ಎನಿಸಿಕೊಂಡಿತು. ಹಾಗೇನೇ ದೇಶದ ಜನತೆಗೆ ಮನೋರಂಜನೆ ಭರ್ಜರಿಯಾಗಿ ನೀಡಿತು.

ಇದಾದ ನಂತರ ದೊಡ್ಡ ದೊಡ್ಡ ಸ್ಟಾರ್ ಗಳ ಸಿನೆಮಾ ಬಾಲಿವುಡ್ ಸಿನೆಮಾ ಬಿಡುಗಡೆ ಆಯಿತು, ಅವುಗಳಲ್ಲಿ ಮುಖ್ಯವಾದುದು ಅಜಯ್ ದೇವ್ಗನ್ ಅವರ runway ಟೈಗರ್ ಶ್ರೋಫ್ ಅವರ ಹೇರೊಪಂತಿ ೨ ಸಿನೆಮಾಗಳು. ಇವು ಗಳು ಹೇಗೆ ಬಡಿಯುಗದೆ ಆದವೋ ಹಾಗೇನೇ ಸೋತು OTT ಅಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಇನ್ನು ಅದಾದ ನಂತರ ಬಾಲಿವುಡ್ ಗೆ ಬೆನ್ನುಲಬಾಗಿದ್ದು ಕಾರ್ತಿಕ್ ಆರ್ಯನ್ ನಟನೆಯ ಬೂಲ್ ಬಲಯ್ಯ ೨ ಮಾತ್ರ ಸದ್ಯಕ್ಕೆ ೧೦೦ ಕೋಟಿ ದಾಟಿದೆ. ಒಂದು ಸಮಯದಲ್ಲಿ ದೊಡ್ಡಣ್ಣ ಆಗಿ ಮೆರೆದಿದ್ದ ಬಾಲಿವುಡ್ ಇದೀಗ ಎಲ್ಲ ಸಿನೆಮಾಗಳು ಕೂಡ ಉತ್ತಮವಾಗಿ ಪ್ರದರ್ಶನ ಕಾಣುತ್ತಿಲ್ಲ. ಜನರು ಕರ್ಮಾ ರಿಟರ್ನ್ ಅಂತಿದ್ದಾರೆ.

ಇನ್ನು ನಟಿ ಕಂಗನಾ ಅಭಿನಯದ ದಾಕಡ್ ಬರೋಬ್ಬರಿ ೧೦೦ ಕೋಟಿ ಬಜೆಟ್ ಅಲ್ಲಿ ನಿರ್ಮಾಣವಾದ ಸಿನೆಮಾ, ಆದರೆ ಈ ಸಿನೆಮದಷ್ಟು ಸುಣ್ಣವಾದ ಸಿನೆಮಾ ಇತಿಹಾಸದಲ್ಲಿ ಬೇರೊಂದಿಲ್ಲ ಅನ್ನಬಹುದು. ಈಗ ಸದ್ಯಕ್ಕೆ ಬಾಲಿವುಡ್ ನ ಪ್ರತಿಭಾನ್ವಿತ ನಟ ಅಯುಷ್ಮಾನ್ ಕುರಾನ ಅವರ ಸಿನೆಮಾ ಬಿಡುಗಡೆ ಆಗಿದೆ. ಆದರೆ ಇವರ ಈ ಸಿನೆಮಾಗೆ ಕೂಡ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ದಿನದಲ್ಲಿ ಗಳಿಸಿದ್ದು ಕೇವಲ ೧.೭೫ ಕೋಟಿ. ಈ ಸಿನೆಮಾ ಕೂಡ ದಾಕಡ್ ಸಿನೆಮಾದ ರೀತಿಯಲ್ಲೇ ಯಾರೊಬ್ಬರೂ ಕೂಡ ಟಿಕೆಟ್ ಖರೀದಿ ಮಾಡದೇ ಇದ್ದ ಕರಣ ಎತ್ತಂಗಡಿ ಮಾಡಲಾಗಿದೆ. ಭೂಲ್ ಬುಲಯ್ಯ ೨ ಸಿನೆಮಾಗೆ ಹೆಚ್ಚಿನ ಸ್ಕ್ರೀನ್ ನೀಡಲಾಗಿದೆ ಎನ್ನುತ್ತಿದೆ ವರದಿಗಳು.

Leave A Reply

Your email address will not be published.