ಮೊದಲ ದಿನವೇ ರಾಕೆಟರಿ, ವಿಕ್ರಮ್ ಹಾಗು ಗಾಡ್ ಪಾದರ್ ಗಿಂತಲೂ ಹೆಚ್ಚು ಕಮಾಯಿ ಮಾಡಿದ ಕಾಂತಾರ.
ಸೆಪ್ಟೆಂಬರ್ ೩೦ ರಂದು ಬಿಡುಗಡೆಯಾದ ಕಾಂತಾರ ಸಿನೆಮಾ ದಕ್ಷಿಣ ಕನ್ನಡದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಇದಾದ ನಂತರ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದು ಜನರಿಂದ ಉತ್ತಮ ವಿಮರ್ಶೆ ಬರತೊಡಗಿತು. ಇದು ಕಾಂತಾರ ಸಿನೆಮಾ ನೋಡಲು ಹೆಚ್ಚು ಜನ ಚಿತ್ರ ಮಂದಿರಕ್ಕೆ ಬರುವಂತೆ ಮಾಡಿತು. ಇದೇ ಕಾರಣದಿಂದ ಕಾಂತಾರ ದೊಡ್ಡ ಬ್ಲಾಕ್‌ಬಸ್ಟರ್ ಸಿನೆಮಾವಾಗಿ ಹೊರಹೊಮ್ಮಿತು. ಅಕ್ಟೋಬರ್ ೧೪ ರಂದು ಹಿಂದಿಯಲ್ಲಿ ಈ ಸಿನಿಮಾ ಬಿಡುಗಡೆ ಹೊಂದಿದೆ.ಇದು ಉತ್ತಮ ಪ್ರತಿಕ್ರಿಯೆ ಕೂಡಾ ಪಡೆದಿದೆ.
ಬಾಕ್ಸ್ ಆಫೀಸ್ ಅಲ್ಲಿ ಪ್ರತಿದಿನವೂ ಹೊಸ ದಾಖಲೆ ನಿರ್ಮಿಸುತ್ತಾ ಇರುವ ಕಾಂತಾರ ಎಲ್ಲಸಿನಿ ಪಂಡಿತರಿಂದ ಕೂಡಾ ಉತ್ತಮ ವಿಮರ್ಶೆ ಬರತೊಡಗಿದೆ. ಇದಕ್ಕೆ ಸಾಕ್ಷಿ ಬಾಕ್ಸ್ ಆಫೀಸ್ ಕಲೆಕ್ಷನ್. ಹಿಂದಿಯಲ್ಲಿ ಬಿಡುಗಡೆ ಆದ ಕಾಂತಾರ ಚಿತ್ರ ಮೊದಲ ದಿನ ೧.೨೦ ಕೋಟಿ ಇಂದ ೧.೫೦ ಕೋಟಿ ವರೆಗೆ ಗಳಿಸಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.ತುಳುನಾಡಿನ ಸಂಸ್ಕೃತಿಯ ಮೇಲೆ ಬಂದ ಚಿತ್ರ ದೇಶದಲ್ಲಿ ಹಿಂದಿ ಭಾಷೆಯಲ್ಲಿ ಇಷ್ಟು ಗಳಿಕೆ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.
ಇದು ತೆಲುಗಿನ ಗಾಡ್ ಪಾದರ್ ಹಾಗು ತಮಿಳಿನ ರಾಕೆಟರಿ ಚಿತ್ರಕ್ಕಿಂತಲೂ ಉತ್ತಮವಾಗಿ ಗಳಿಕೆ ಮಾಡಿದೆ ಎಂದು ಮಾಧ್ಯಮ ವರದಿ ಮಾಡಿದೆ. ಕಾಂತಾರ ವಿಕ್ರಮ ಸಿನೆಮಾಗಿಂತಲೂ ಉತ್ತಮ ಗಳಿಕೆ ಮಾಡಿದೆ ಕಲೆಕ್ಷನ್ ಲೆಕ್ಕದಲ್ಲಿ ಅಲ್ಲದಿದ್ದರೂ ಅದರ ಹತ್ತಿರ ಬಂದಿದೆ. ಶಾರೂಕ್ ಕಾನ್, ಸಲ್ಮಾನ್ ಖಾನ್ ಹಾಗು ಕಮಲ್ ಹಾಸನ್ ರಂತಹ ಬಿಗ್ ಸ್ಟಾರ್ ಗಳ ಮೂವಿಗೆ ಟಕ್ಕರ್ ನೀಡುತ್ತಿರುವ ಕಾಂತಾರ ಎಲ್ಲರ ಪ್ರಶಂಸೆಗೆ ಒಳಗಾಗುತ್ತಿದೆ. ರಿಷಬ್ ಶೆಟ್ಟಿ ಗೆ ಎಲ್ಲರಿಂದೂ ಶಬಾಸ್ ಕೇಳಿಬರುತ್ತಿದೆ.