ಮೊದಲ ಸಿನೆಮನೆ ಸೂಪರ್ ಹಿಟ್, KGF ಬೆಡಗಿ ಶ್ರೀನಿಧಿ ಶೆಟ್ಟಿ ಬಳಿ ಮುಂದೆ ಇರುವ ಸಿನೆಮಾ ಸಂಖ್ಯೆ ಎಷ್ಟು ಗೊತ್ತೇ?

670

ಕೆಜಿಎಫ್ ಎರಡು ಚಾಪ್ಟರ್ ಗಳು ಕೂಡ ಅತ್ಯುತ್ತಮ ಯಶಸ್ಸು ಕಂಡಿದೆ. ಇದನ್ನು ಕನ್ನಡದ ಹೆಮ್ಮೆ ಎಂದರು ತಪ್ಪಾಗಲ್ಲ. ಭಾರತ ಸಿನಿಮಾರಂಗ ಕನ್ನಡ ದತ್ತ ತಿರುಗಿ ನೋಡುವ ರೀತಿ ಮಾಡಿದ್ದೂ ಇದೆ ಕೆಜಿಎಫ್. ಪ್ರಶಾಂತ್ ನೀಲ್ ರಂತಹ ಅದ್ಬುತ ಡೈರೆಕ್ಟರ್, ಹಾಗೇನೇ ಯಶ್ ರಂತಹ ನಟ, ಭುವನ್ ರಂತಹ ಉತ್ತಮ ಸಿನಿಮಾಟೋಗ್ರಫಿ ಹಾಗೇನೇ ಮಾಸ್ ಬಿಜಿಎಂ ತಯಾರಕ ರವಿ ಬಸರೂರು. ಇವರ ಎಲ್ಲರ ಉತ್ತಮ ಕೆಲಸ ಹಾಗು ಪ್ರತಿಭೆ ಇಂದ ಇಂದು ಕನ್ನಡ ದ ಈ ಸಿನೆಮಾ ಉತ್ತಮ ಹೆಸರು ಮಾಡಿದೆ ಅಲ್ಲದೆ ಅಷ್ಟೇ ಉತ್ತಮವಾಗಿ ಕಲೆಕ್ಷನ್ ಕೂಡ ಮಾಡಿದೆ.

ಎರಡು ವಾರ ಕಳೆದರು ಕೂಡ ಇನ್ನು ಕಲೆಕ್ಷನ್ ಭರ್ಜರಿ ಆಗೇ ಮಾಡ್ತಿದೆ ಕೆಜಿಎಫ್ ಸಿನೆಮಾ. ಈ ಸಿನೆಮಾ ರಾಕಿ ಭಾಯ್ ಮೇಲೆ ಪೂರ್ತಿಯಾಗಿ ಇರುವದರಿಂದ ಇವರಿಗೆ ಸಾಥ್ ನೀಡಿದ್ದು ರೀನಾ (ನಾಯಕಿ ಪಾತ್ರ ) ಇದನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ ನಮ್ಮ ಶ್ರೀನಿಧಿ ಶೆಟ್ಟಿ. ಇವರ ಹಾಗು ಯಶ್ ರ ಮೆಹಬೂಬ ಹಾಡು ಇದೀಗ ಎಲ್ಲೆಡೆ ಸಡ್ಡು ಮಾಡುತ್ತಿದೆ. ಮೆಲೋಡಿ ಹಾಗು ಶ್ರೀ ನಿಧಿ ಅವರ ನಟನೆ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಉತ್ತಮ ಪ್ರಶಂಸೆ ಕೂಡ ವ್ಯಕ್ತವಾಗುತ್ತಿದೆ.

ಶ್ರೀನಿಧಿ ಅವರ ಮೊದಲ ಸಿನೆಮಾ ಸೂಪರ್ ಹಿಟ್ ಆಗಿದ್ದು ಇವರಿಗೆ ಮುಂದೆ ಯಾವೆಲ್ಲ ಚಿತ್ರಗಳಿಗೆ ಆಫರ್ ಬಂದಿದೆ ಎನ್ನುವ ಕುತೂಹಲ ನಿಮ್ಮಲ್ಲೂ ಇರಬಹುದು. ಕೆಜಿಎಫ್ ಗಾಗಿ ಯಾವುದೇ ಹೊಸ ಸಿನೆಮಾ ಒಪ್ಪಿಕೊಳ್ಳಲಿಲ್ಲ ಎನ್ನುವ ವಿಷಯ ಎಲ್ಲರಿಗು ಗೊತ್ತಿದೆ. ಅದೇ ರೀತಿ ಶ್ರೀನಿಧಿ ಶೆಟ್ಟಿ ಕೂಡ ಈ ಸಿನೆಮಾ ಮುಗಿಯುವ ತನಕ ಯಾವುದೇ ಹೊಸ ಚಿತ್ರದ ಆಫರ್ ಸ್ವೀಕಾರ ಮಾಡಿಲ್ಲ ಎನ್ನುವ ವಿಷಯ ಚರ್ಚೆ ಆಗುತ್ತಿದೆ. ಅದಕ್ಕಾಗಿಯೇ ಇವರ ಬಳಿ ಯಾವುದೇ ಮುಂದಿನ ಸಿನೆಮಾಗಳಿಲ್ಲ ಇಲ್ಲಿಯವರೆಗೂ ಎಂದು ಕನ್ನಡ ಖಾಸಗಿ ಮಧ್ಯವಮವೊಂದು ವರದಿ ಮಾಡಿದೆ.

ಸುಮಾರು ೮ ವರ್ಷಗಳ ಕಾಲ ಈ ಸಿನೆಮಾ ತಗೊಂಡಿದ್ದು ಶ್ರೀನಿಧಿ ಶೆಟ್ಟಿ ಅವರು ಕೇವಲ ಒಂದೇ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದು ಬೇಸರವಾಗಿದೆ. ಅಲ್ಲದೆ ಕೆಜಿಎಫ್ ಅಲ್ಲೂ ಕೂಡ ಅಷ್ಟೇನೂ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ ಶ್ರೀನಿಧಿ ಶೆಟ್ಟಿ ಅವರು. ಇದರಿಂದ ಅವರ ಅಭಿನಯಕ್ಕೂ ಅಷ್ಟೊಂದು ಅವಕಾಶ ಸಿಕ್ಕಿರಲಿಲ್ಲ. ಇದು ಕೂಡ ಒಂದು ಕಾರಣ ಇರಬಹುದು ಇನ್ನು ಯಾರು ಇವರ ಬಳಿ ಸಿನೆಮಾ ಮಾತಾಡಲು ಬರದೇ ಇರಲು. ಏನೇ ಇರಲಿ ಮೊದಲ ಚಿತ್ರವೇ ಸೂಪರ್ ಹಿಟ್ ಅದ ಕಾರಣ ಮುಂದೆ ಉತ್ತಮ ಸಿನೆಮಾ ಅವಕಾಶಗಳು ಶ್ರೀನಿಧಿ ಶೆಟ್ಟಿ ಅವರ ಬಳಿ ಖಂಡಿತ ಬರಲಿದೆ.

Leave A Reply

Your email address will not be published.