ಯಾವುದೇ ತಪ್ಪಿಲ್ಲದೇ ಆಟೋ ಚಲಾಯಿಸುತ್ತಿದ್ದ ವ್ಯಕ್ತಿಗೆ ಬಂತು ಟ್ರಾಫಿಕ್ ಪೋಲಿಸರಿಂದ ನೋಟಿಸ್. ಕಾರಣ ಕೇಳಿ ಶಾಕ್ ಆದ ಅಟೋ ಚಾಲಕ.

318

ನೀವು ಇಲ್ಲಿಯವರೆಗೂ ಒಂದಲ್ಲ ಒಂದು ನಿಯಮ ಪಾಲನೆ ಮಾಡದೇ ಇದ್ದಿದ್ದಕ್ಕೆ ಚಲಾನ್ ಪಡೆದಿರಬಹುದು. ಪ್ರತಿ ತಪ್ಪಿಗೂ ಪೋಲಿಸರು ನೋಟಿಸ್ ಹಾಗು ಚಲಾನ್ ಕಳಿಸುತ್ತಾರೆ. ಅದರ ಪ್ರಕಾರ ನಾವು ಪೈನ್ ಕಟ್ಟಲೇ ಬೇಕು. ಆದರೆ ಮಹಾರಾಷ್ಟ್ರದ ಈ ಆಟೋ ಡ್ರೈವರ್ ಯಾವುದೇ‌ ತಪ್ಪು ಮಾಡದೇ ಇದ್ದರೂ ಕೂಡಾ ಮನೆಗೆ ನೋಟಿಸ್ ಬಂದಿದೆ ಕಾರಣ ಕೇಳಿದರೆ ನಿಮಗೂ ಶಾಕ್ ಆಗುತ್ತದೆ. ಈ ಆಟೋ ಡ್ರೈವರ್ ಗೆ ಹೆಲ್ಮೆಟ್ ಹಾಕದೇ ಇದ್ದಿದ್ದಕ್ಕೆ ಚಲಾನ್ ನೋಟಿಸು ಸಿಕ್ಕಿದೆ. ಆದರೆ ಅಲ್ಲಿ ಒಬ್ಬ ಬೈಕ್ ಸವಾರ ಹೆಲ್ಮೆಟ್ ಹಾಕದೇ ಹೋಗುತ್ತಿದ್ದಾಗ ಅವನಿಗೆ ಪೈನ್ ಹಾಕುವ ಬದಲು ಈ ಆಟೋ ಚಾಲಕನಿಗೆ ತಪ್ಪಿ ಹಾಕಲಾಗಿದೆ ಎನ್ನಲಾಗುತ್ತಿದೆ.

ಈ ಆಟೋ ಡ್ರೈವರ್ ಹೆಸರು ಗುರುನಾಥ್. ಈ ಚಲನ್ ಅಲ್ಲಿ ಪೋಟೋ ಹಾಗು ದ್ವಿಚಕವಾಹನದ ಪೋಟೋ ಬೈಕ್ ಸವಾರನದ್ದಾಗಿದ್ದರೆ, ಅದರಲ್ಲಿ ಹೆಸರು ಹಾಗು ಮೊಬೈಲ್ ನಂಬರ್ ಹಾಗು ವಿಳಾಸ ಆಟೋ ಚಾಲಕನದ್ದಾಗಿತ್ತು. ಈ ನೋಟಿಸ್ ನೋಡಿ ಈ ಆಟೋ ಡ್ರೈವರ್ ಆಟೋ ಒಳಗೆ ಹೆಲ್ಮೆಟ್ ಯಾರು ಹಾಕುತ್ತಾರೆ ಎನ್ನುತ್ತಾ ಪೋಲಿಸರ ಬಳಿ ಪ್ರಶ್ನೆ ಮಾಡಿದ್ದಕ್ಕೆ ಸ್ಟೇಶನ್ ಬರಲು ಹೇಳಿದ್ದಾರೆ.

ಅಟೋ ಡ್ರೈವರ್ ಪೋಲಿಸರು ಈ ತಪ್ಪನ್ನು ತಾವೇ ಸುದಾರಿಸಿಕೊಳ್ಳಬೇಕು. ಇದು ಸಾಮಾನ್ಯ ಜನರಿಗೆ ತೊಂದರೆ ಅಲ್ಲದೇ ಮತ್ತೇನಿಲ್ಲ ಎಂದಿದ್ದಾರೆ. ಈ ಪೈನ್ ಕೂಡಲೇ ಕ್ಯಾನ್ಸಲ್ ಮಾಡಬೇಕು ಎಂದು ಕೂಡಾ ಆಗ್ರಹಿಸಿದ್ದಾರೆ. ಈ e-challan ವ್ಯವಸ್ಥೆ ಕಲ್ಯಾಣ್ ಅಲ್ಲಿ ಇತ್ತೀಚಿಗೆ ಜಾರಿ ಆಗಿದ್ದು ಇದರಲ್ಲಿ ಬಹಳಷ್ಟು ಕೊರತೆಗಳಿವೆ. ಇದರ ಸುದಾರಣೆ ಆಗಬೇಕು ಎನ್ನುವುದು ಈ ಘಟನೆ ಇಂದಾನೆ ಗೊತ್ತಾಗಿತ್ತದೆ.

Leave A Reply

Your email address will not be published.