ಯುವ ದಸರಾಗೆ ಅತಿಥಿಯಾಗಿ ಆಗಮಿಸಿರುವ ಅಶ್ವಿನಿ ಪುನೀತ್ ರವರು ಪಡೆದಿರುವ ಸಂಭಾವನೆ ಎಷ್ಟು ಗೊತ್ತೇ??
ಮೈಸೂರು ದಸರಾ ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳಲ್ಲಿ ಒಂದು ಯುವದಸರಾ ಕಾರ್ಯಕ್ರಮ. ಯುವಸಮೂಹವನ್ನು ರಂಜಿಸುವ ಸಲುವಾಗಿ ಪ್ರತಿ ವರ್ಷ ಈ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಲಾಗುತ್ತದೆ. ಕೋವಿಡ್ ನಂತರ ಈ ವರ್ಷ ದಸರಾ ಹಬ್ಬವನ್ನು ಅದ್ಧೂರಿಯಾಗಿ ನಡೆಸಲಾಗುತ್ತಿದ್ದು, ಯುವದಸರಾಗೆ ಹೆಚ್ಚು ಕಳೆಕಟ್ಟಿದೆ. ಸೆಪ್ಟೆಂಬರ್ 28ರಂದು ಆಗಿರುವ ಈ ದಿನ ಯುವದಸರಾ ಉದ್ಘಾಟನೆ ನಡೆಯಲಿದೆ, ಮೊದಲಿಗೆ ಕಿಚ್ಚ ಸುದೀಪ್ ಅವರು ಕಾರ್ಯಕ್ರಮ ಉದ್ಘಾಟನೆ ಮಾಡುತ್ತಾರೆ ಎಂದು ಹೇಳಲಾಗಿತ್ತು.
ಆದರೆ ಸುದೀಪ್ ಅವರು ಬರಲು ಸಾಧ್ಯವಾಗದೆ ಇರುವ ಕಾರಣ, ಇದೀಗ ಶ್ರೀಮತಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಮತ್ತು ಕರುನಾಡ ಚಕ್ರವರ್ತಿ ಶಿವ ರಾಜ್ ಕುಮಾರ್ ಅವರು ಯುವದಾಸರಾ ಉದ್ಘಾಟನೆ ಮಾಡುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿರವಾದ ಎಸ್.ಟಿ.ಸೋಮಶೇಖರ್ ಅವರು ಪೋಸ್ಟರ್ ಬಿಡುಗಡೆ ಮಾಡಿ ತಿಳಿಸಿದ್ದಾರೆ. ಸೆಪ್ಟೆಂಬರ್ 28ರಂದು ಅಪ್ಪು ನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮ ಮತ್ತು ಯುವದಸರಾ ಉದ್ಘಾಟಣೆಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಆಗಮಿಸಲಾಗಿದ್ದಾರೆ.
ಈ ಕಾರ್ಯಕ್ರಮಕ್ಕೆ ಅಶ್ವಿನಿ ಅವರು ಎಷ್ಟು ಸಂಭಾವನೆ ಪಡೆದಿದ್ದಾರೆ ಎನ್ನುವ ಚರ್ಚೆ ಶುರುವಾಗಿದ್ದು, ಸಿಕ್ಕಿರುವ ಮಾಹಿತಿಯ ಪ್ರಕಾರ ಅಶ್ವಿನಿ ಅವರು ಒಂದು ರೂಪಾಯಿ ಸಂಭಾವನೆಯನ್ನು ಸಹ ಪಡೆದಿಲ್ಲ. ಅಪ್ಪು ಅವರ ಹಾಗೆಯೇ ಸರ್ಕಾರದಿಂದ ಸಿಗುವ ಗೌರವ ಹಣವನ್ನು ಸಹ ಬೇಡ ಎಂದು ಹೇಳಿದ್ದಾರೆ ಶ್ರೀಮತಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು. ಅಶ್ವಿನಿ ಅವರ ಈ ನಡೆಗೆ ಎಲ್ಲೆಡೆ ಮೆಚ್ಚುಗೆ ಮತ್ತು ಪ್ರಶಂಸೆ ವ್ಯಕ್ತವಾಗುತ್ತದೆ, ಅಪ್ಪು ಅವರಂತೆಯೇ ಅಶ್ವಿನಿ ಅವರಲ್ಲೂ ದೊಡ್ಡ ಗುಣ ಕಾಣುವುದು ಬಹಳ ಸಂತೋಷದ ವಿಚಾರ ಎನ್ನುತ್ತಿದ್ದಾರೆ ಅಭಿಮಾನಿಗಳು.