ರತನ್ ಟಾಟಾ ಅವರನ್ನು ಮುಂದಿನ ರಾಷ್ಟ್ರಪತಿಯನ್ನಾಗಿ ಮಾಡುವ ಬೇಡಿಕೆ, ರಾಮನಾಥ್ ಕೊವಿಂದ್ ಅವರ ಅವಧಿ ಯಾವಾಗ ಮುಗಿಯುತ್ತದೆ?
ಭಾರತದ ಪ್ರಥಮ ಪ್ರಜೆ ಆಗಿರುವಂತಹ ರಾಷ್ಟ್ರಪತಿ ಹುದ್ದಗೆ ಉದ್ಯಮಿ ರತನ್ ಟಾಟಾ ಹೆಸರು ಕೇಳಿ ಬರುತ್ತಿದೆ. ಈಗಾಗಲೇ ರಾಷ್ಟ್ರಪತಿ ಹುದ್ದೆಯಲ್ಲಿರುವಂತಹ ರಾಮನಾಥ್ ಕೊವಿಂದ್ ಅವರ ಅವಧಿ ರಾಷ್ಟ್ರಪತಿಯಾಗಿ ಅವಧಿ ಜೂಲೈ ೨೦೨೨ ಗೆ ಮುಗಿಯುತ್ತದೆ. ಈಗ ಜನರು ಸಾಮಾಜಿಕ ಜಾಲತಾಣದ ಮುಖಾಂತರ #Ratantata4President ಹ್ಯಾಶ್ಟ್ಯಾಗ್ ಬಳಸುವ ಮೂಲಕ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಇದಕ್ಕೆ ತಮಿಳಿನ/ತೆಲುಗಿನ ದೊಡ್ಡ ನಿರ್ಮಾಪಕ ನಾಗ ಬಾಬು ಬೆಂಬಲ ಕೂಡ ಸೂಚಿಸಿದ್ದಾರೆ. ರತನ್ ಟಾಟಾ ಅವರಿಗೆ ಒಳ್ಳೆಯ ಹೆಸರಿದೆ ಆದ್ದರಿಂದ ಅವರು ಈ ಹುದ್ದೆಗೆ ಅರ್ಹರು ಎಂದು ಹೇಳಲಾಗುತ್ತಿದೆ. ಈ ಬಗ್ಗೆರತನ್ ಟಾಟಾ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ದೇಶದ ಮುಂದಿನ ರಾಷ್ಟ್ರಪತಿಗಳು ಯಾರು? ಆಡಳಿತ ಪಕ್ಷ ಅಲ್ಲದೆ ವಿರೋಧ ಪಕ್ಷಗಳು ಕೂಡ ಮುಂದಿನ ರಾಷ್ಟ್ರಪತಿ ಆರಿಸಲು ತಯಾರಿ ನಡೆಸುತ್ತಿದೆ. ಒಬ್ಬ ವ್ಯಕ್ತಿಯು ಸತತ ಎರಡನೇ ಬಾರಿಗೆ ರಾಷ್ಟ್ರಪತಿ ಆಗಲು ಸಾಧ್ಯವಿಲ್ಲ, ಪ್ರತಿ ೫ ವರ್ಷಗಳಿಗೊಮ್ಮೆ ರಾಷ್ಟ್ರಪತಿ ಆಯ್ಕೆ ಮಾಡುವ ಸಂಪ್ರದಾಯವಿದೆ. ದೇಶದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ಸತತ ೨ ನೇ ಬಾರಿಗೆ ರಾಷ್ಟ್ರಪತಿಗಳಾದರು ಅವರ ನಂತರ ಬೇರೆ ಯಾರಿಗೂ ಅಂತಹ ಅವಕಾಶಗಳು ಸಿಗಲಿಲ್ಲ.
ವಿರೋಧ ಪಕ್ಷಗಳ ಲಿಸ್ಟ್ ಅಲ್ಲಿ ಶರದ್ ಪವಾರ್ ಅವರ ಹೆಸರು ಕೇಳಿ ಬರುತ್ತಿದೆ. ಆದರೆ ಪವಾರ್ ಅದನ್ನು ನಿರಾಕರಿಸಿದ್ದಾರೆ. NDA ಪರವಾಗಿ ವೆಂಕಯ್ಯ ನಾಯ್ಡು ಹೆಸರು ರೇಸ್ ನಲ್ಲಿದೆ ಅವರಲ್ಲದೆ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಹೆಸರು ಕೂಡ ಕೇಳಿ ಬರುತ್ತಿದೆ. ಇದಲ್ಲದೆ ಬಿಹಾರ ಮುಖ್ಯಮಂತಿ ನಿತೀಶ್ ಕುಮಾರ್ ಹೆಸರು ಕೂಡ ಕೇಳಿ ಬರುತ್ತಿದೆ. ಇದೆಲ್ಲದಕ್ಕೂ ಉತ್ತರ ಪ್ರದೇಶ ಚುನಾವಣೆ ಫಲಿತಾಂಶ ಬಹು ಮುಖ್ಯವಾದದ್ದು.
ಪ್ರಸ್ತುತ ಪರಿಸ್ಥಿತಿಯಲ್ಲಿ, ಎನ್‌ಡಿಎ ಮುಂದಿದೆ, ಆದರೆ ಯುಪಿಎ ಕೂಡ ಹಿಂದುಳಿದಿಲ್ಲ. ಚುನಾವಣಾ ಆಯೋಗದ ವೆಬ್‌ಸೈಟ್‌ನ ಪ್ರಕಾರ, ಎಂಪಿ ಮತ್ತು ಶಾಸಕರ ಪ್ರಸ್ತುತ ಶೇಕಡಾವಾರು ಮತ ಎಣಿಕೆಯನ್ನು ನೋಡಿದರೆ ಎನ್‌ಡಿಎ 49.9% ಆಗಿದೆ. ಯುಪಿಎ 25.3% ಮತಗಳನ್ನು ಹೊಂದಿದ್ದರೆ ಇತರರು 24.8% ಮತಗಳನ್ನು ಹೊಂದಿದ್ದಾರೆ. ಪ್ರಸ್ತುತ, ಚುನಾವಣಾ ಲೆಕ್ಕಾಚಾರ ಪ್ರಕಾರ ಯುಪಿಯಲ್ಲಿ ಬಿಜೆಪಿ ಅತಿದೊಡ್ಡ ಪಾಲನ್ನು ಹೊಂದಿದೆ. ಅತಿದೊಡ್ಡ ರಾಜ್ಯವಾಗಿರುವುದರಿಂದ, ಯುಪಿಯ ಶಾಸಕರ ಒಟ್ಟು ಮತ ಶೇಕಡಾವಾರು 15.26 ಶೇಕಡಾ ದೇಶದಲ್ಲಿ ಅತಿ ಹೆಚ್ಚು. ಆದ್ದರಿಂದ ಉತ್ತರ ಪ್ರದೇಶ ಚುನಾವಣಾ ಫಲಿತಾಂಶ ಮುಂದಿನ ರಾಷ್ಟ್ರಪತಿಯನ್ನು ಯಾವ ಪಕ್ಷ ಆರಿಸುತ್ತದೆ ಎನ್ನುವುದನ್ನು ನಿರ್ಧರಿಸುತ್ತದೆ.