ರಾಜ್ಯದ ನಾಲ್ವರು ಸಚಿವರು ಮೋದಿ ಸಂಪುಟದಲ್ಲಿ ಸಚಿವರಾಗ್ತಾರೆ.ಭವಿಷ್ಯ ನುಡಿದ ಬಿಜೆಪಿ ಹಿರಿಯ ನಾಯಕ. ಯಾರು ಆ ನಾಲ್ಕು ಮಂದಿ?

710

ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರಕಾರ ಎರಡನೇ ಅವಧಿಗೂ ಆಯ್ಕೆ ಆಗಿದೆ. ಹಿಂದಿನ ಚುನಾವಣೆಯಲ್ಲಿ ಗೆದ್ದ ಸೀಟುಗಳಿಗಿಂತ ಎರಡನೇ ಭಾರಿ ಭರ್ಜರಿ ಸೀಟುಗಳನ್ನು ಪಡೆದು ಅಧಿಕಾರಕ್ಕೆ ಏರಿದೆ. ರಾಜ್ಯವಾಗಲಿ ಕೇಂದ್ರವಾಗಲಿ ಯಾರದೇ ಸರಕಾರ ಬರಲಿ ಆಯಾ ಸಮಯಗಳಿಗನುವಾಗಿ ಸಚಿವ ಸಂಪುಟ ವಿಸ್ತರಣೆ ಮಾಡುತ್ತಾರೆ. ರಾಜ್ಯದಲ್ಲೂ ಇತ್ತೀಚಿಗೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದಲ್ಲಿ ನಡೆದಿತ್ತು. ಇದೀಗ ಕೇಂದ್ರ ಸರಕಾರ ಕೂಡ ಸಂಪುಟ ವಿಸ್ತರಣೆಗೆ ತಯಾರಾಗಿದೆ. ಈ ಸಂಪುಟ ವಿಸ್ತರಣೆಯಲ್ಲಿ ಕರ್ನಾಟಕದ ೪ ಸಂಸದರಿಗೆ ಕೇಂದ್ರ ಸಚಿವ ಸ್ಥಾನ ಸಿಗಬಹುದು ಎಂದು ಬಿಜೆಪಿ ಹಿರಿಯ ನಾಯಕ ಭವಿಷ್ಯ ನುಡಿದಿದ್ದಾರೆ.

ರಾಜ್ಯದ ನಾಲ್ವರು ಸಂಸದರು ಸಚಿವರಾಗಲಿ. ಅಧಿವೇಶನಕ್ಕೂ ಮುನ್ನ ಸಂಪುಟ ವಿಸ್ತರಣೆ ಆದರೆ ಉತ್ತಮ. ನನಗೆ ಅನಾರೋಗ್ಯದ ಹಿನ್ನೆಲೆ ಸಚಿವನಾಗಲು ಆಗಲ್ಲ ಆದರೆ ಉಳಿದವರು ಸಚಿವರಾಗಲಿ. ರಾಜ್ಯದಲ್ಲಿ ನಾಲ್ಕು ಸಂಸದರ ಹೆಸರು ಕೇಳಿ ಬರುತ್ತಿದೆ. ಈ ಪೈಕಿ ಸಂಸದ ಉಮೇಶ್ ಜಾದವ್ ಅವರ ಹೆಸರು ಕೇಳಿ ಬರುತ್ತಿದೆ. ಅವರಿಗೆ ಸಚಿವ ಸ್ಥಾನ ನೀಡಬೇಕು. ಅದರಂತೆ ರಾಜ್ಯದಲ್ಲಿ ಶಿವಕುಮಾರ್ ಉದಾಸಿ, ಶೋಭಾ ಕರಂದ್ಲಾಜೆ ಅವರುಗಳಿಗೆ ಸಚಿವ ಸ್ಥಾನ ನೀಡಲಿ ಎಂದು ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ಮಾದ್ಯಮಕ್ಕೆ ತಿಳಿಸಿದ್ದಾರೆ.

ಮೋದಿ ಸರಕಾರ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ನಂತರ ಮೊದಲನೇ ಬಾರಿ ಸಂಪುಟ ವಿಸ್ತರಣೆ ಮಾಡುತ್ತಿದ್ದು ಮುಂಬರುವ ಪಂಚ ರಾಜ್ಯಗಳ ಚುನಾವಣೆಯ ದೃಷ್ಟಿ ಇಂದ ವಿಸ್ತರಣೆ ನಡೆಸಲು ಮೋದಿ ಸರಕಾರ ಚಿಂತನೆ ನಡೆಸಿದೆ. ನೋಡೋಣ ಕರ್ನಾಟಕದ ಎಷ್ಟು ಸಂಸದರು ಸಚಿವರಾಗಲಿದ್ದಾರೆ ಎಂದು.

Leave A Reply

Your email address will not be published.