ರಾತ್ರೋ ರಾತ್ರಿ 25 ಕೋಟಿ ಗೆದ್ದ ಬಡವನ ಪಾಡು ಈಗ ಏನಾಗಿದೆ ಗೊತ್ತೆ?? ನನಗೆ ದುಡ್ಡು ಬರಬಾರದಿತ್ತು ಎಂದದ್ದು ಯಾಕೆ ಗೊತ್ತೇ??

135

ಜೀವನದಲ್ಲಿ ಅದೃಷ್ಟ ಎನ್ನುವುದು ಯಾರಿಗೆ ಯಾವಾಗ ಒಲಿಯುತ್ತದೆ ಎನ್ನುವುದನ್ನು ಹೇಳಲು ಆಗುವುದಿಲ್ಲ. ಆ ರೀತಿ ಅದೃಷ್ಟ ಒಲಿದಾಗ ಜನರ ಜೀವನವೆ ಬದಲಾಗಿ ಹೋಗುತ್ತದೆ. ಕೇರಳದಲ್ಲಿ ಇಂಥದ್ದೇ ಒಂದು ಘಟನೆ ನಡೆದಿದೆ. ಲಾಟರಿ ಟಿಕೆಟ್ ಗಳಲ್ಲಿ ಹಣ ಗೆಲ್ಲುವ ಘಟನೆಗಳನ್ನು ನಾವು ಈಗಾಗಲೇ ಹಲವು ಬಾರಿ ಕೇರಳದಲ್ಲಿ ನಡೆಯುವುದನ್ನು ಕೇಳಿದ್ದೇವೆ ಹಾಗೂ ನೋಡಿದ್ದೇವೆ. ಇತ್ತೀಚೆಗೆ ಓಣಂ ಸಮಯದಲ್ಲಿ ನಡೆದ ಲಾಟರಿ ಡ್ರಾ ನಲ್ಲಿ ಆಟೋ ಚಾಲಕನಿಗೆ ಬರೋಬ್ಬರಿ 25ಕೋಟಿ ರೂಪಾಯಿ ಪ್ರೈಜ್ ಮನಿ ಬದಿತು.

ರಾತ್ರೋರಾತ್ರಿ ಆತನಿಗೆ ಹಣ ಸಿಕ್ಕಿ, ಕೋಟ್ಯಾಧೀಶ್ವರನಾದ. ಆಟೋ ಚಾಲಕನ ಹೆಸರು ಅನೂಪ್. ಈತನ ಸಂತೋಷಕ್ಕೆ ಪಾರವೇ ಇರಲಿಲ್ಲ. ಅನೂಪ್ ಅವರ ಇಡೀ ಕುಟುಂಬ ಹಾಗೂ ಸ್ನೇಹಿತರ ಬಳಗ ಸಹ ಬಹಳ ಸಂತೋಷ ಪಟ್ಟಿದ್ದರು. ಒಂದೇ ದಿನದಲ್ಲಿ ಇಷ್ಟು ಕೋಟಿ ರೂಪಾಯಿ ಗೆದ್ದು, ಸೋಷಿಯಲ್ ಮೀಡಿಯಾದಲ್ಲಿ ಕೂಡ ಅನುಪ್ ಬಗ್ಗೆ ಭಾರಿ ಸುದ್ದಿಯಾಗಿತ್ತು. 25 ಕೋಟಿ ರೂಪಾಯಿಯನ್ನು ಅನೂಪ್ ಅವರು ಗೆದ್ದಿದ್ದು, ಟ್ಯಾಕ್ಸ್ ಎಲ್ಲವನ್ನು ಕಳೆದು 15 ಕೋಟಿ ರೂಪಾಯಿ ಅನೂಪ್ ಅವರ ಕೈಗೆ ಸಿಗಲಿದೆ. ಆದರೆ ಈ ರೀತಿ ಆದ ಒಂದೇ ವಾರಕ್ಕೆ ಅನೂಪ್ ಪರಿಸ್ಥಿತಿ ಯಾರು ಊಹಿಸದ ಸ್ಥಿತಿಗೆ ಬಂದು ತಲುಪಿದೆ. ಬಹಳ ಬೇಸರ ಮಾಡಿಕೊಂಡು ಕೆಲವು ಮಾತುಗಳನ್ನಾಡಿದ್ದಾರೆ.

ಹಣ ಬಂದಮೇಲೆ ತಮ್ಮ ಪರಿಸ್ಥಿತಿ ಬಗ್ಗೆ ಮಾತನಾಡಿರುವ ಅನೂಪ್ ಅವರು, ನನಗೆ ಇಷ್ಟು ಹಣ ಬರಲೇಬಾರದಿತ್ತು ಎಂದಿದ್ದಾರೆ. ಕಾರಣ ಏನೆಂದರೆ, ಅನೂಪ್ ಅವರು ಎಲ್ಲಿಯೇ ಹೊರಗಡೆ ಹೋದರು ಕೂಡ, ಅಕ್ಕಪಕ್ಕದ ಜನರು ಸ್ಥಳೀಯರು ಎಲ್ಲರೂ ಅನೂಪ್ ಅವರನ್ನು ಮುತ್ತಿಗೆ ಹಾಕಿ, ಸಹಾಯ ಮಾಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರಂತೆ. ಮಾಸ್ಕ್ ಧರಿಸಿ ಹೋದರು ಸಹ ಜನರು ಬಂದು ಸಹಾಯ ಕೇಳುವುದು ಕಡಿಮೆ ಮಾಡುತ್ತಿಲ್ಲ, ಇದರಿಂದ ಇಷ್ಟು ಹಣ ನನಗೆ ಯಾಕೆ ಬಂತು, ನನಗೆ ಕಡಿಮೆ ಹಣ ಸಿಗಬೇಕಿತ್ತು ಎಂದು ಬೇಸರ ಮಾಡಿಕೊಂಡಿದ್ದಾರೆ ಅನೂಪ್. ಅಷ್ಟೇ ಅಲ್ಲದೆ, ತಮಗೆ ಸಿಕ್ಕಿರುವ ಹಣವನ್ನು 2 ವರ್ಷಗಳ ಕಾಲ ಬ್ಯಾಂಕ್ ನಲ್ಲಿ ಠೇವಣಿ ಇಡುತ್ತೇನೆ ಎಂದು ಹೇಳಿದ್ದಾರೆ.

Leave A Reply

Your email address will not be published.