ರಾಮಾಚಾರಿ ಹೀರೋ ಪಾತ್ರಕ್ಕಾಗಿ ಮಾಂಸಾಹಾರವನ್ನೇ ಬಿಟ್ಟಿದ್ದಾರಂತೆ. ಒಳ್ಳೆ ನಟನಾಗುವತ್ತ ಋತ್ವಿಕ್ ಕೃಪಾಕರ್?
ಕರ್ನಾಟಕದ ಪ್ರೇಕ್ಷಕರು ಧಾರಾವಾಹಿಗಳನ್ನು ಹೆಚ್ಚಾಗಿ ನೋಡುತ್ತಾರೆ ಎನ್ನುವುದು ಗೊತ್ತಾಗುವುದು ಯಾವುದೇ ಚಾನೆಲ್ ಅಲ್ಲಿ ಹೊಸ ಹೊಸ ಧಾರಾವಾಹಿಗಳು ಹೆಚ್ಚು ಹೆಚ್ಚು ಬಿಡುಗಡೆ ಆದಾಗ ಮಾತ್ರ. ಕನ್ನಡ ಕಿರುತೆರೆಯಲ್ಲಿ ಇದೀಗ ಈ ಸೀರಿಯಲ್ ಗಳದ್ದೇ ಹವಾ ಜೋರಾಗಿದೆ. ಎಲ್ಲ ಚಾನೆಲ್ ಅಲ್ಲಿಯೂ ಕೂಡ ಉತ್ತಮ ಕಥೆ ಹಾಗು ಮಸಾಲೆ ಹೊಂದಿರುವ ಹಾಗೇನೇ ಫ್ರೆಶ್ ಕಾನ್ಸೆಪ್ಟ್ ಇಟ್ಟುಕೊಂಡು ಹೊಸ ಹೊಸ ಧಾರಾವಾಹಿಗಳು ತೆರೆಗೆ ಬರುತ್ತಲೇ ಇವೆ. ಈ ಫ್ರೆಶ್ ಕಥೆಗೆ ಉದಾಹರಣೆ ನೇ ನಮ್ಮ ಕಲರ್ಸ್ ಅಲ್ಲಿ ಪ್ರಸಾರ ಆಗುತ್ತಿರುವ ರಾಮಾಚಾರಿ ಧಾರಾವಾಹಿ.
ಋತ್ವಿಕ್ ಕೃಪಾಕರ್ ಅನ್ನುವ ನಟ ರಾಮಾಚಾರಿ ಅಲ್ಲಿ ಲೀಡ್ ರೋಲ್ ಅಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿಯಲ್ಲಿ ಈ ಪಾತ್ರ ತುಂಬಾನೇ ಚೆನ್ನಾಗಿದೆ. ಲವಲವಿಕೆ, ಋಣಾತ್ಮಕ ಚಿಂತನೆ, ಸಂಭಾಷಣೆಗಳ ಮಧ್ಯದಲ್ಲಿ ಮಾತ್ರೋಚ್ಚಾರ, ಮನೆಯಲ್ಲಿ ತಂದೆ ತಾಯಿಯ ಮುದ್ದಿನ ಮಗ, ಮನೆಯಲ್ಲಿ ಎಲ್ಲರಿಗು ಅಚ್ಚು ಮೆಚ್ಚಿನ ಹುಡುಗ. ಈ ಒಂದು ಪಾತ್ರ ಕರ್ನಾಟಕದ ಮನೆ ಮನೆಗೂ ತಲುಪಿದೆ ಎನ್ನುವುದಕ್ಕೆ ಇತ್ತೀಚಿಗೆ ಬಿಡುಗಡೆ ಆದಂತಹ TRP ರೇಟಿಂಗ್. ಕಲರ್ಸ್ ಅಲ್ಲಿ ನಂಬರ್ ಒಂದು ಸ್ಥಾನಕ್ಕೂ ಬಂದಿತ್ತು ಈ ಧಾರಾವಾಹಿ. ಇವರ ಬಗೆಗಿನ ಸಂದರ್ಶನ ಒಂದು ಖಾಸಗಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.
ಇನ್ನು ಈ ನಟನ ಬಗ್ಗೆ ಹೇಳಬೇಕೆಂದರೆ ರಂಗಭೂಮಿಯಿಂದ ಬಂದಂತಹ ವ್ಯಕ್ತಿ. ನಟನೆ, ಹಾಡು, ವಾದ್ಯ ಇವೆಲ್ಲದರಲ್ಲಿ ಪರಿಣಿತಿ ಹೊಂದಿದ್ದಾರೆ. ಇವರನ್ನು ನಾವು ಬಹುಮುಖ ಪ್ರತಿಭೆ ಎಂದರು ತಪ್ಪಾಗಲಾರದು. ಇನ್ನು ಇವರು ಕಲಿಕೆಯಲ್ಲಿ ಹಿಂದೆ ಇದ್ದಾರೆ ಅಂತ ಆಲೋಚಿಸಿದರೆ ಅದು ನಮ್ಮ ತಪ್ಪಾಗುತ್ತದೆ. ಮಾಸ್ಟರ್ ಡಿಗ್ರಿ ಹೊಂದಿದ್ದಾರೆ ಈ ಋತ್ವಿಕ್ ಕೃಪಾಕರ್. ನಟನ ಜೀವನವೇ ಒಂದು ಸ್ಫೂರ್ತಿ ಆಗಿದೆ. ನೂರಕ್ಕಿಂತಲೂ ಜಾಸ್ತಿ ತೂಕ ಇದ್ದ ಇವರು ತಮ್ಮ ತೂಕವನ್ನು ೮೦ ರ ಆಸುಪಾಸಿಗೆ ಇಳಿಸಿದ್ದಾರೆ. ಇದು ಇವರಿಗೆ ಸುಲಭದ ಮಾತಾಗಿರಲಿಲ್ಲ.
ಈ ರಾಮಾಚಾರಿ ಪಾತ್ರಕ್ಕೆ ಬೇಕಾಗಿದುದ್ದು ಒಬ್ಬ ಉತ್ತಮ ನಟ, ಮಂತ್ರೋಚ್ಚಾರಣೆಯಲ್ಲಿ ಸ್ಪಷ್ಟತೆ ಇರುವವರು. ಅದೇ ರೀತಿ ಆಚಾರ ವಿಚಾರ, ಸಂಪ್ರದಾಯಗಳ ಬಗ್ಗೆ ಮಾಹಿತಿ ಇರುವವರು. ಇದು ಕೂಡ ಇವರಿಗೆ ಒಂದು ಚಾಲೆಂಜ್ ಆಗಿತ್ತು. ಅದಕ್ಕಾಗಿ ಈ ಸವಾಲು ಸ್ವೀಕರಿಸಿ ಮಂತ್ರ ಗಳನ್ನೂ ಪೂರಕವಾಗಿ ತಯಾರಿ ನಡೆಸುತ್ತಿದ್ದರು. ಶ್ಲೋಕಗಳನ್ನು ಪ್ರಾಕ್ಟಿಸ್ ಮಾಡಲು ಕೂಡ ಶುರು ಮಾಡಿದರು. ಇಷ್ಟು ಮಾತ್ರ ಅಲ್ಲದೆ ಈ ಪಾತ್ರಕ್ಕಾಗಿ ಇವರು ತಮ್ಮ ಜೀವನ ಶೈಲಿಯನ್ನೇ ಬದಲಾಯಿಸಿಕೊಂಡಿದ್ದರಂತೆ. ಅತಿ ಕೋಪಿಷ್ಠರಾಗಿದ್ದ ಇವರಿಗೆ ಈ ರಾಮಾಚಾರಿ ಪಾತ್ರ ಸಮಾಧಾನವನ್ನು ಹೇಳಿಕೊಟ್ಟಿದೆ ಅಂತೇ. ಮಾಂಸಾಹಾರವನ್ನು ಕೂಡ ಬಿಟ್ಟಿದ್ದಾರಂತೆ ಈ ರಿತ್ವಿಕ್ ಕೃಪಾಕರ್.