ರಾಹುಲ್ ರವರನ್ನು ಮರೆತರೇ?? ರೋಹಿತ್ ಜೊತೆ ಹೊಸ ಆರಂಭಿಕನನ್ನು ಆಯ್ಕೆ ಮಾಡಿದ ಸಂಜಯ್. ಯಾರು ಅಂತೇ ಗೊತ್ತೇ?

161

ನಮಸ್ಕಾರ ಸ್ನೇಹಿತರೇ ಭಾರತ ಕ್ರಿಕೆಟ್ ತಂಡದಲ್ಲಿ ದಿನಪೂರ್ತಿ ಚರ್ಚಿಸಿದರೂ ಮುಗಿಯಲಾರದಷ್ಟು ವಿಷಯಗಳಿವೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಪ್ರತಿ ಸರಣಿಯಲ್ಲಿಯೂ ಭಾರತ ತಂಡ ಒಬ್ಬೊಬ್ಬ ನಾಯಕನನ್ನು ನೋಡಿದೆ. ತಂಡದ ಆಡುವ ಹನ್ನೊಂದರ ಬಳಗದಲ್ಲಿಯೂ ಸಹ ಹಲವಾರು ಬದಲಾವಣೆಗಳಾಗಿವೆ. ಒಂದು ಸರಣಿಯಲ್ಲಿ ಆರಂಭಿಕರಾಗಿ ಆಡುವ ಆಟಗಾರ, ಮತ್ತೊಂದು ಸರಣಿಯಲ್ಲಿ ಮಧ್ಯಮ ಕ್ರಮಾಂಕ ಹಾಗೂ ಇನ್ನೊಂದು ಸರಣಿಯಲ್ಲಿ ಫೀನಿಶರ್ ರೋಲ್ ನಲ್ಲಿ ತನ್ನ ಜವಾಬ್ದಾರಿ ನಿರ್ವಹಿಸಿದನ್ನು ನಾವು ಗಮನಿಸಬಹುದಾಗಿದೆ.

ಈಗ ಸದ್ಯದಲ್ಲೇ ವೆಸ್ಟ್ಇಂಡೀಸ್ ವಿರುದ್ಧ ಮೊದಲು ಐದು ಪಂದ್ಯಗಳ ಟಿ 20 ಸರಣಿ ಆರಂಭವಾಗಲಿದೆ. ಈ ತಂಡದ ನಾಯಕರಾಗಿ ರೋಹಿತ್ ಶರ್ಮಾ ಇರಲಿದ್ದಾರೆ. ಈ ಸರಣಿಯಲ್ಲಿ ರೋಹಿತ್ ಶರ್ಮಾ ಜೊತೆ ಯಾರು ಇನ್ನಿಂಗ್ಸ್ ಆರಂಭಿಸಬೇಕು ಎಂಬುದರ ಬಗ್ಗೆ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ವೀಕ್ಷಕ ವಿವರಣೆಗಾರ ಸಂಜಯ್ ಮಾಂಜ್ರೇಕರ್ ಒಂದು ಹೊಸ ಸಲಹೆ ನೀಡಿದ್ದಾರೆ. ರೋಹಿತ್ ಜೊತೆ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಇಶಾನ್ ಕಿಶನ್ ಇನ್ನಿಂಗ್ಸ್ ಆರಂಭಿಸಿದ್ದರು. ಇನ್ನು ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ವಿಕೆಟ್ ಕೀಪರ್ ಬ್ಯಾಟ್ಸಮನ್ ರಿಷಭ್ ಪಂತ್ ಇನ್ನಿಂಗ್ಸ್ ಆರಂಭಿಸಿದ್ದರು.

ಹೀಗಾಗಿ ವಿಂಡೀಸ್ ಸರಣಿಯಲ್ಲಿ ರೋಹಿತ್ ಶರ್ಮಾ ರವರು ಇಶಾನ್ ಕಿಶನ್ ಜೊತೆ ಇನ್ನಿಂಗ್ಸ್ ಆರಂಭಿಸುವುದು ಉತ್ತಮ. ರಿಷಭ್ ಪಂತ್ ಹಾಗೂ ಹಾರ್ದಿಕ್ ಪಾಂಡ್ಯ ತಾವೆಂತಹ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಎಂದು ನಿರೂಪಿಸಿದ್ದಾರೆ. ಅವರು ಜವಾಬ್ದಾರಿಯುತ ಇನ್ನಿಂಗ್ಸ್ ಆಡುತ್ತಿದ್ದಾರೆ. ಹಾಗಾಗಿ ಹಲವಾರು ವರ್ಷಗಳಿಂದ ಟೀಂ ಇಂಡಿಯಾಗೆ ಕಾಡುತ್ತಿದ್ದ ನಾಲ್ಕು ಮತ್ತು ಐದನೇ ಕ್ರಮಾಂಕದ ಸಮಸ್ಯೆ ಬಗೆಹರಿದಿದೆ ಎಂದು ಹೇಳಬಹುದು. ಆದಷ್ಟು ಬೇಗ ಟೀಂ ಇಂಡಿಯಾ ತನ್ನ ಅಂತಿಮ ಇಲೆವೆನ್ ಬಗ್ಗೆ ಗಮನಹರಿಸಬೇಕು. ಕೆ.ಎಲ್.ರಾಹುಲ್, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್ ಗೆ ತಮ್ಮ ಜವಾಬ್ದಾರಿ ಬಗ್ಗೆ ತಿಳಿಸಬೇಕು. ಫೀನಿಶರ್ ಗಳಾಗಿ ದಿನೇಶ್ ಕಾರ್ತಿಕ್ ಹಾಗೂ ರವೀಂದ್ರ ಜಡೇಜಾ ಇದ್ದಾರೆ. ಇವರನ್ನೇ ವಿಶ್ವಕಪ್ ವರೆಗೂ ಮುಂದುವರೆಸುವುದು ಉತ್ತಮ ಎಂದು ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.

Leave A Reply

Your email address will not be published.