ರಿಷಬ್ ಪಂತ್ ಮಾಡಿದ ಈ ಒಂದು ತಪ್ಪಿನಿಂದಾಗಿ ಡೆಲ್ಲಿ ಪ್ಲೇ ಆಫ್ ಇಂದ ಹೊರಕ್ಕೆ, RCB ಪ್ಲೇ ಆಫ್ ಗೆ ಅರ್ಹತೆ.

296

ಇಂಡಿಯನ್ ಪ್ರೀಮಿಯರ್ ಲೀಗ್ ನ ೬೯ ನೇ ಪಂದ್ಯದಲ್ಲಿ ಡೆಲ್ಲಿ ಹಾಗು ಮುಂಬೈ ನಡುವಿನ ಪಂದ್ಯದಲ್ಲಿ ಡೆಲ್ಲಿ ತಂಡದ ನಾಯಕ ಮಾಡಿದ ಒಂದು ತಪ್ಪಿಂದ ಪ್ಲೇ ಆಫ್ ಹಂತಕ್ಕೆ ತಲುಪದೇ ಮುಂಬೈ ಗೆಲುವಿನ ಮೂಲಕ ಲೀಗ್ ಹಂತದಲ್ಲೇ ಹೊರಹೋಗಿದೆ. ಮುಂಬೈ ಇಂಡಿಯನ್ಸ್ ತಂಡದ ಆಟಗಾರ ಟೈಮ್ ಡೇವಿಡ್ ಅವರಿಗೆ ಡಿ ಅರ ಎಸ್ ತಗೊಳದೆ ಮಾಡಿದ ತಪ್ಪಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ಹಂತಕ್ಕೆ ತಲುಪಿದೆ. ರಿಷಬ್ ಪಂತ್ ಮಾಡಿದ ಒಂದು ತಪ್ಪಿನಿಂದಾಗಿ ಅದರ ಪರಿಣಾಮ ಇಡೀ ತಂಡವೇ ಹೊರುವಂತಾಯಿತು.

ಮುಂಬೈ ಆಟಗಾರ ಟೈಮ್ ಡೇವಿಡ್ ವಿರುದ್ಧ ರಿವ್ಯೂ ತೆಗೆದುಕೊಳ್ಳಲು ರಿಷಬ್ ಪಂತ್ ಒಪ್ಪಿಕೊಳ್ಳಲಿಲ್ಲ, ಈ ತಪ್ಪು ಮಾಡಿದ ಬಳಿಕ ಟೈಮ್ ಡೇವಿಡ್ ೧೧ ಬಾಲ್ ಗಳಲ್ಲಿ ೩೪ ರನ್ ಗಳನ್ನೂ ಮಾಡಿದರು ಇದು ಮುಂಬೈ ತಂಡ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಒಂದು ವೇಳೆ DRS ರಿಷಬ್ ಪಂತ್ ತೆಗೆದುಕೊಂಡಿದ್ದರೆ ಪಂದ್ಯದ ಚಿತ್ರಣ ಸಂಪೂರ್ಣ ಬದಲಾಗುತ್ತಿತ್ತು. ಮುಂಬೈ ಗೆಲುವಿನ ಜೊತೆಗೆ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇ ಆಫ್ ಹೋಗದೆ ಮನೆಗೆ ಹೋಗಿದೆ.

ಇನೊಂದೆಡೆ ಡೆಲ್ಲಿ ತಂಡದ ನಾಯಕ ರಿಷಬ್ ಪಂತ್ ದಕ್ಷಿಣ ಆಫ್ರಿಕಾ ಮೂಲದ ಯುವ ಬ್ಯಾಟ್ಸಮನ್ ದೇವಲ್ಟ್ ಬ್ರೆವಿಸ್ ಅವರ ಸರಳ ಕ್ಯಾಚ್ ಅನ್ನು ಕೂಡ ಕೈಬಿಡುವ ಮೂಲಕ ತಮ್ಮ ತಂಡ ಪ್ಲೇ ಆಫ್ ದಾರಿ ಕಠಿಣಗೊಳಿಸಿದರು. ಆದರೆ ಡೆಲ್ಲಿ ತಂಡದ ಶಾರ್ದುಲ್ ಠಾಕೂರ್ ಅವರು ಬ್ರೆವಿಸ್ ಅವರನ್ನು ಪೆವಿಲಿಯನ್ ತಲುಪಿಸಲು ಹೆಚ್ಚು ಸಮಯ ತಗೋಳಲಿಲ್ಲ. ರಿಷಬ್ ಪಂತ್ ಅವರ ಇನ್ನೊಂದು ತಪ್ಪು DRS ಈ ಆಯ್ಕೆ ತಗೊಳದೆ ಪಂದ್ಯದ ಅಂತೇ ಕಂತೆಗಳ ಲೆಕ್ಕಾಚಾರಗಳನ್ನು ಉಲ್ಟಾ ಪಲ್ಟಾ ಮಾಡಿದ್ದಾರೆ.

Leave A Reply

Your email address will not be published.