ರೈತರ ಗೌರವಕ್ಕಾಗಿ ಈ ಇಲ್ಲೊಬ್ಬ ಲಕ್ಷ ಲಕ್ಷ ಖರ್ಚು ಮಾಡಿ ಮಾಡಿರುವ ಕೆಲಸ ಏನು ಗೊತ್ತೇ? ಓದಿದರೆ ನೀವೇ ಬೆರಗಾಗುವಿರಿ?
ರೈತ ಈ ದೇಶದ ಬೆನ್ನೆಲುಬು ಎಂದು ಎಲ್ಲರಿಗೂ ಗೊತ್ತಿದೆ. ದೇಶದಲ್ಲಿ ರೈತ ಮತ್ತು ಸೈನಿಕ ಒಂದು ದಿನ ಮಲಗಿದರು ಎಲ್ಲವೂ ಅಲ್ಲೋಲ ಕಲ್ಲೋಲ ಆಗುತ್ತದೆ. ಅದಕ್ಕೆ ಇವರನ್ನು ದೇಶದ ಬೆನ್ನೆಲುಬು ಎಂದು ಕರೆಯಲಾಗುತ್ತದೆ. ಹೀಗೆ ರೈತರ ಕುಟುಂಬದಲ್ಲಿ ಬೆಳೆದ ಈ ವ್ಯಕ್ತಿ ಕೆಲಸ ಮಾಡುತ್ತಿರುವುದು ವಿದೇಶದಲ್ಲಿ ಆದರೂ ರೈತರ ಬಗೆಗಿನ ಕಾಳಜಿ, ಗೌರವ ಎಂದು ಕಡಿಮೆ ಆಗಲಿಲ್ಲ. ಭಾರತಕ್ಕೆ ಬಂದಾಗಲೆಲ್ಲ ತಂದೆಯ ಜೊತೆಗೆ ಇದೆ ಕೆಲಸದಲ್ಲಿ ಇರುತ್ತಾರೆ. ಹೀಗೆ ರೈತರಿಗೆ ಗೌರವ ಸೂಚಿಸುವ ನೆಲೆಯಲ್ಲಿ ಏನಾದರೂ ಮಾಡಬೇಕು ಎಂದು ನಿರ್ಧರಿಸಿ ಮಾಡಿದ ಕೆಲಸ ಇದು ಹಾಗಾದರೆ ಏನಿದು ಬನ್ನಿ ತಿಳಿಯೋಣ.
ಎಲ್ಲರಿಗೂ ಮನೆ ಕಟ್ಟಬೇಕು ಎಂಬ ಆಸೆ ಇದ್ದೇ ಇರುತ್ತದೆ. ಜೀವನದ ದೊಡ್ಡ ಸಾಧನೆಗಳಲ್ಲಿ ಅದು ಕೂಡ ಒಂದು. ಹೀಗೆ ಮನೆ ಕಟ್ಟಿ ಅದಕ್ಕೆ ತರ ತರಹದ ಡಿಸೈನ್ ಮಾಡುವ ಮಂದಿಯೇ ಹೆಚ್ಚು. ಮನೆಯ ಮೇಲ್ಭಾಗದಲ್ಲಿ ಬಾಗೆ ಬಗೆಯ ನಮೂನೆಯಲ್ಲಿ ಟ್ಯಾಂಕ್ ನಿರ್ಮಾಣ ಮಾಡುತ್ತಾರೆ. ಹೀಗೆ ಪಂಜಾಬ್ ಮೂಲದ ಈ ರೈತನ ಮಗ ಕೂಡ ಒಂದು ದೊಡ್ಡ ಮನೆ ಕಟ್ಟಿದ್ದರು. 3 ಅಂತಸ್ತಿನ ಮನೆ ಅದು ಇವರು ಮನೆಯ ಮೇಲ್ಭಾಗದಲ್ಲಿ ಯಾವುದೇ ಟ್ಯಾಂಕ್ ಕಟ್ಟಿಲ್ಲ design ಮಾಡಿಲ್ಲ ಬದಲಾಗಿ ರೈತರಿಗೆ ಗೌರವ ಸೂಚಕವಾಗಿ, ತಮ್ಮ ಮನೆಯ 33 ವರ್ಷದ ಹಳೆಯ ಟ್ರಾಕ್ಟರ್ ಒಂದನ್ನು ಮೇಲೆ ಇರಿಸಿದ್ದಾರೆ.
ಅದಕ್ಕೆ 6 ಲಕ್ಷ ರೂಪಾಯಿ ಖರ್ಚು ಮಾಡಿ ಪೈಂಟಿಂಗ್ ದೆಂಟಿಂಗ್ ಕೆಲಸ ಮಾಡಿಸಿ ಕ್ರೇನ್ ಮುಖಾಂತರ ತಮ್ಮ ಮನೆಯ ಮೂರನೆ ಅಂತಸ್ತಿನಲ್ಲಿ ಇರಿಸಿದ್ದಾರೆ. ಇದರ alteration ಮಾಡಲು 6 ಲಕ್ಷ ರೂಪಾಯಿ ವರೆಗೆ ಖರ್ಚು ಮಾಡಿದ್ದಾರೆ. ಮನೆಯ ಮೂರನೆ ಅಂತಸ್ತಿನಲ್ಲಿ ಇಡಲು ಘಂಟೆಗಳ ಕಾಲ ಶ್ರಮ ಪಡಬೇಕಾಯಿತು. ಆದರೂ ಅವರು ಹೇಳುತ್ತಾರೆ ರೈತರಿಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ಇದನ್ನು ಮಾಡಿದ್ದೇನೆ ಹೊರತು ಯಾವುದೇ ಶೋಕಿಗಲ್ಲ ಎಂದು.