ರೋಹಿತ್ ನೀವು ಸ್ಥಾನ ಬಿಟ್ಟುಕೊಡಿ: ನಿಮ್ಮ ಸ್ಥಾನದಲ್ಲಿ ಯುವ ಆಟಗಾರ ಕಣಕ್ಕೆ ಇಳಿಯಲಿ ಎಂದ ವಾಸ್ಸಿಮ್: ಯಾರು ಯಾವ ಸ್ಥಾನದಲ್ಲಿ ಆಡಬೇಕಂತೆ ಗೊತ್ತೇ??
ಭಾರತ ತಂಡ ಈಗಾಗಲೇ ವಿಶ್ವಕಪ್ ಗೆ ಆಯ್ಕೆಯಾಗಿರುವ ತಂಡದ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಏಷ್ಯಾಕಪ್ ನಲ್ಲಿ ಭಾರತ ತಂಡ ಸೋತಿರುವುದಕ್ಕೆ ಮುಖ್ಯ ಕಾರಣ ತಂಡದಲ್ಲಿ ಮಾಡಲಾದ ಬದಲಾವಣೆಗಳು. ಅದರಲ್ಲು ಬ್ಯಾಟಿಂಗ್ ವಿಚಾರದಲ್ಲಿ, ಓಪನರ್ಸ್, 3ನೇ ಕ್ರಮಾಂಕ ಹಾಗೂ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವವರರಲ್ಲಿ ಬದಲಾವಣೆ ಮಾಡಲಾಗಿತ್ತು, ಆದರೆ ಆ ಪ್ರಯೋಗಗಳು ಉತ್ತಮವಾದ ಫಲಿತಾಂಶ ಕೊಡಲಿಲ್ಲ. ಇದರಿಂದಾಗಿ ಏಷ್ಯಾಕಪ್ ನಲ್ಲಿ ಭಾರತ ತಂಡ ಸೋಲುವ ಹಾಗೆ ಆಯಿತು.
ಪ್ರಸ್ತುತ ಭಾರತ ತಂಡದ ಓಪನರ್ಸ್ ಗಳ ವಿಚಾರಕ್ಕೆ ಬರುವುದಾದರೆ, ಕ್ಯಾಪ್ಟನ್ ರೋಹಿತ್ ಶರ್ಮಾ ಹಾಗೂ ಕೆ.ಎಲ್.ರಾಹುಲ್ ಅವರು ಓಪನರ್ ಗಳಾಗಿ ಕಣಕ್ಕೆ ಇಳಿಯುತ್ತಿದ್ದಾರೆ. ಆದರೆ ಅಫ್ಘಾನಿಸ್ತಾನ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೋಹ್ಲಿ ಅವರು ಆರಂಭಿಕ ಆಟಗಾರನಾಗಿ ಬಂದು, 2ನೇ ಕ್ರಮಾಂಕದಲ್ಲೂ ತಾವು ಉತ್ತಮವಾದ ಪ್ರದರ್ಶನ ನೀಡಬಹುದು ಎಂದು ಸಾಬೀತು ಮಾಡಿದರು. ಹಾಗಾಗಿ ಭಾರತ ತಂಡದ ಮಾಜಿ ಆಟಗಾರ ವಾಸಿಂ ಜಾಫರ್ ಅವರು ಓಪನರ್ ಸ್ಥಾನಕ್ಕೆ ರೋಹಿತ್ ಅವರ ಬದಲಾಗಿ ಮತ್ತೊಬ್ಬ ಆಟಗಾರನನ್ನು ಹೆಸರಿಸಿದ್ದಾರೆ. ಆ ಆಟಗಾರ ಮತ್ಯಾರು ಅಲ್ಲ ರಿಷಬ್ ಪಂತ್ ಅವರು. ಓಡಿಐ ಮತ್ತು ಟೆಸ್ಟ್ ಕ್ರಿಕೆಟ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ರಿಷಬ್ ಪಂತ್ ಅವರು ಟಿ20 ಯಲ್ಲಿ ಇನ್ನು ಬಿಗ್ ಇನ್ನಿಂಗ್ಸ್ ನೀಡಿಲ್ಲ. .
ಆದರೂ ಅವರ ಮೇಲೆ ನಂಬಿಕೆ ಇಟ್ಟು ವಿಶ್ವಕಪ್ ಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ರಿಷಬ್ ಪಂತ್ ಅವರನ್ನು ಸಾಮಾನ್ಯವಾಗಿ 5ನೇ ಕ್ರಮಾಂಕದಲ್ಲಿ ಕ್ರೀಸ್ ಗೆ ಕಳಿಸಲಾಗುತ್ತದೆ. ಆದರೆ ಈ ಬಾರಿ ಅವರನ್ನು ಆರಂಭಿಕ ಆಟಗಾರನಾಗಿ ಕಳಿಸಬೇಕು, ಆಗ ರಿಷಬ್ ಅವರು ಉತ್ತಮ ಪ್ರದರ್ಶನ ನೀಡುತ್ತಾರೆ. ರೋಹಿತ್ ಶರ್ಮಾ ಅವರು ಈ ತ್ಯಾಗ ಮಾಡಬೇಕು, ಆರಂಭಿಕ ಆಟಗಾರನ ಸ್ಥಾನವನ್ನು ರಿಷಬ್ ಪಂತ್ ಅವರಿಗೆ ಬಿಟ್ಟುಕೊಡಬೇಕು ಎಂದು ವಾಸಿಂ ಜಾಫರ್ ಅವರು ಟ್ವೀಟ್ ಮಾಡಿದ್ದಾರೆ. ಈ ಮೂಲಕ ರೋಹಿತ್ ಶರ್ಮಾ ಹಾಗೂ ಬಿಸಿಸಿಐ ಗೆ ಮನವಿ ಮಾಡಿಕೊಂಡಿದ್ದಾರೆ. ಈಗಾಗಲೇ ರಿಷಬ್ ಪಂತ್ ಅವರ ಫಾರ್ಮ್ ಬಗ್ಗೆ ಚರ್ಚೆಯಾಗುತ್ತಿದ್ದು, ನಿಜವಾಗಿಯೂ ರೋಹಿತ್ ಅವರು ತಮ್ಮ ಸ್ಥಾನವನ್ನು ಬಿಟ್ಟುಕೊಡುತ್ತಾರಾ ಎಂದು ಕಾದು ನೋಡಬೇಕಿದೆ.