ಲಕ್ಕಿಮನ್ ಚಿತ್ರದಲ್ಲಿ ಅಪ್ಪು ಕೂತಿದ್ದ ಕುರ್ಚಿ ಪದೇ ಪದೇ ಕೇಳಿದ್ದ ರಾಘಣ್ಣ. ಆದರೆ ಆ ಕುರ್ಚಿ ಎಲ್ಲಿದೆ ಅಂತೇ ಗೊತ್ತೇ?? ನಟ ಕೃಷ್ಣ ಹೇಳಿದ್ದೇನು ಗೊತ್ತೇ??

169

ಲಕ್ಕಿ ಮ್ಯಾನ್ ಇದು ಎಲ್ಲರ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಟಿಸಿರುವ ಕೊನೆಯ ಕಮರ್ಷಿಯಲ್ ಸಿನಿಮಾ ಆಗಿದೆ. ಲಕ್ಕಿ ಮ್ಯಾನ್ ಸಿನಿಮಾದಲ್ಲಿ ಅಪ್ಪು ಅವರು ಕೊನೆಯ ಬಾರಿಗೆ ಪ್ರಭುದೇವ ಅವರೊಡನೆ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದಾರೆ. ಹಾಗಾಗಿ ಸಿನಿಮಾ ಬಿಡುಗಡೆ ಆಗುವಾಗ ಎಲ್ಲ ಅಭಿಮಾನಿಗಳು ಅಪ್ಪು ಅವರನ್ನು ಕಣ್ತುಂಬಿಕೊಳ್ಳಲು ಥಿಯೇಟರ್ ಗೆ ಬಂದಿದ್ದರು, ಸಿನಿಮಾ ಬಿಡುಗಡೆ ಹಿಂದಿನ ದಿನ ಪ್ರೀಮಿಯರ್ ಶೋ ಸಹ ಹೌಸ್ ಫುಲ್ ಆಗಿತ್ತು. ಅಪ್ಪು ಅವರ ಕೊನೆಯ ಕಮರ್ಷಿಯಲ್ ಸಿನಿಮಾ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು.

ಇನ್ನು ಬೆಂಗಳೂರಿನಲ್ಲಿ ಅಪ್ಪು ಅವರ ಮೆಚ್ಚಿನ ಚಿತ್ರಮಂದಿರ, ನರ್ತಕಿ ಸಹ ರೀಓಪನ್ ಆಗಿ, ಲಕ್ಕಿ ಮ್ಯಾನ್ ಸಿನಿಮಾ ಪ್ರದರ್ಶನಗೊಂಡಿದೆ. ವಿಶೇಷವಾಗಿ ನರ್ತಕಿ ಥಿಯೇಟರ್ ನಲ್ಲಿ ಲಕ್ಕಿ ಮ್ಯಾನ್ ಸಿನಿಮಾ ನೋಡಲು ಅಭಿಮಾನಿಗಳು ಬಂದಿದ್ದರು, ಹಾಗೆಯೇ ಸಿನಿಮಾ ಬಿಡುಗಡೆಯಾದ ಮೊದಲ ದಿನ ರಾಘಣ್ಣ ಸಹ ನರ್ತಕಿ ಥಿಯೇಟರ್ ಗೆ ಬಂದು ಸಿನಿಮಾ ನೋಡಿ, ಅಪ್ಪು ಅವರ ಎಂಟ್ರಿಗೆ ಶಿಳ್ಳೆ ಹೊಡೆದು, ಚಪ್ಪಾಳೆ ತಟ್ಟಿ ಎಂಜಾಯ್ ಮಾಡಿದರು ರಾಘಣ್ಣ. ಹಾಗೆಯೇ ಸಿನಿಮಾ ಮುಗಿದ ಬಳಿಕ ಮಾಧ್ಯಮದ ಎದುರು ಮಾತನಾಡಿ,, ಸಿನಿಮಾದಲ್ಲಿ ಅಪ್ಪು ಕುಳಿತಿದ್ದ ಕುರ್ಚಿಯನ್ನು ನನಗೆ ಕೊಟ್ಟುಬಿಡಿ, ನಾನು ಅದನ್ನು ಪೂಜೆ ಮಾಡುತ್ತೇನೆ ಎಂದಿದ್ದರು ರಾಘಣ್ಣ.

ಸಿನಿಮಾ ಬಿಡುಗಡೆ ಆದ ಬಳಿಕ ಪ್ರೆಸ್ ಮೀಟ್ ನಲ್ಲಿ ಪಾಲ್ಗೊಂಡಿತ್ತು, ಆಗ ಡಾರ್ಲಿಂಗ್ ಕೃಷ್ಣ ಅವರಿಗೆ ರಾಘಣ್ಣ ಅವರು ಚೇರ್ ಕೇಳಿದ್ರಲ್ಲ ಅವರಿಗೆ ಕೊಟ್ರ ಎಂದು ಪ್ರಶ್ನೆ ಕೇಳಲಾಯಿತು, ಅದಕ್ಕೆ ಉತ್ತರಿಸಿದ ಡಾರ್ಲಿಂಗ್ ಕೃಷ್ಣ, ಅದು ಖರೀದಿ ಮಾಡಿದ ಕುರ್ಚಿ ಅಲ್ಲ, ಆರ್ಟ್ ಡಿಪಾರ್ಟ್ಮೆಂಟ್ ಅವರು ಮಾಡಿದ್ದು, ಸಿನಿಮಾ ಚಿತ್ರೀಕರಣ ಮುಗಿದು ತುಂಬಾ ದಿನ ಆಗಿದೆ, ರಾಘಣ್ಣ ಅವರ ವಿಡಿಯೋ ನೋಡಿದ ತಕ್ಷಣವೇ ಆ ಕುರ್ಚಿ ಹುಡುಕಿ ಕೊಡಿ ಅಂತ ಹೇಳಿದ್ದೀನಿ..ಎಂದಿದ್ದಾರೆ ಕೃಷ್ಣ. ಈ ಮೂಲಕ ರಾಘಣ್ಣ ಅವರ ಆಸೆಯನ್ನು ಬೇಗ ಈಡೇರಿಸುವುದಾಗಿ ಹೇಳಿದ್ದಾರೆ. ಇನ್ನು ಲಕ್ಕಿ ಮ್ಯಾನ್ ಸಿನಿಮಾ ಕಲೆಕ್ಷನ್ ಸಹ ಭರ್ಜರಿಯಾಗಿದೆ ಎಂದು ಡಾರ್ಲಿಂಗ್ ಕೃಷ್ಣ ಹೇಳಿದ್ದು, ಒಟ್ಟು ಎಷ್ಟು ಕಲೆಕ್ಷನ್ ಆಗಿದೆ ಎಂದು ಮಾತ್ರ ಹೇಳಿಲ್ಲ

Leave A Reply

Your email address will not be published.