ಲಾಭದ ಬಹುಪಾಲು ದಾನ ಮಾಡುವ ರತನ್ ಟಾಟಾ ಅವರ ಬಳಿ ಎಷ್ಟು ಕಂಪನಿಗಳಿವೆ ಗೊತ್ತೇ? ವಾರ್ಷಿಕ ವಹಿವಾಟು ಎಷ್ಟಿದೆ??
ರತನ್ ಟಾಟಾ ಎಂದರೆ ಮೊದಲಿಗೆ ನೆನಪಿಗೆ ಬರುವುದೇ ಆಪತ್ಕಾಲದಲ್ಲಿ ಸಹಾಯ ಹಸ್ತ ಚಾಚುವ ವ್ಯಕ್ತಿ ಎಂದು. ಹೌದು ಭಾರತದ ಪ್ರತಿಯೊಂದು ಸಂಕಷ್ಟದ ಸಮಯದಲ್ಲಿ ಕೂಡ ಭಾರತದ ಜೊತೆಗೆ ನಿಂತ ವ್ಯಕ್ತಿ ಒಬ್ಬರು ಇದ್ದರೆ ಅದು ರತನ್ ಟಾಟ ಮಾತ್ರ. ತಮ್ಮ ಗಳಿಕೆಯ ಶೇಕಡಾ 60 ರಷ್ಟನ್ನು ಸಮಾಜಮುಖಿ ಕೆಲಸ ಗಳಿಗೆ ವಿನಿಯೋಗಿಸುವ ಏಕಮಾತ್ರ ಬ್ಯುಸಿನೆಸ್ ಮಾನ್ ಸರ್ ರತನ್ ಟಾಟಾ ಅವರು. ಹಾಗಾದರೆ ರತನ್ ಟಾಟಾ ಅವರು ಮುನ್ನಡೆಸುವ ಟಾಟಾ ಗ್ರೂಪ್ ನಲ್ಲಿ ಒಟ್ಟು ಎಷ್ಟು ಕಂಪನಿಗಳು ಇವೆ ಎಂದು ಯಾವತ್ತಾದರೂ ತಿಳಿಯಲು ಬಯಸಿದ್ದೀರ ? ಇಲ್ಲವಾದರೆ ಈ ದೇಶ ಪ್ರೇಮಿಯ ಈ ಸಾಮ್ರಾಜ್ಯದ ಬಗ್ಗೆ ನೀವು ತಿಳಿಯಲೇ ಬೇಕು.
ಜಂಶೆಡ್ ಜಿ ಟಾಟಾ ಅವರ ಕೂಸು ಈ ಟಾಟಾ ಗ್ರೂಪ್ ಸಂಸ್ಥೆಗಳು. ಅಂದಿನ ಕಾಲದಲ್ಲಿ ಕೂಡ ಇವರು ತಮ್ಮ ಕೆಲಸಗಾರರ ದೇಶದ ಹಿತ ದೃಷ್ಟಿಯಲ್ಲಿ ಕೆಲಸ ಮಾಡಿದ್ದ ವ್ಯಕ್ತಿ ಅವರು. ಒಂದೊಮ್ಮೆ ಪರಿಸ್ಥಿತಿ ಎಷ್ಟು ಹದಗೆಟ್ಟಿತ್ತು ಎಂದರೆ ಅವರ ಪತ್ನಿ ಅವರ ವಜ್ರದ ನೆಕ್ಲೆಸ್ ಅಡವಿಟ್ಟು ಕೆಲಸದವರಿಗೆ ಸಂಬಳ ಕೊಡುವಂತೆ ಸೂಚಿಸಿದ್ದರು. ಹಾಗಾದರೆ ಈ ಒಂದು ಪರಪಂಪರೆ ತಲೆತಲಾಂತರದಿಂದ ಬಂದಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ಹಾಗಾದರೆ ಅವರು ಕಟ್ಟಿದ ಈ ಸಾಮ್ರಾಜ್ಯದಲ್ಲಿ ಒಟ್ಟು ಎಷ್ಟು ಕಂಪನಿಗಳು ಇವೆ ಮತ್ತು ಅದರ ವಾರ್ಷಿಕ ವಹಿವಾಟು ಎಷ್ಟು ಎಂದು ತಿಳಿಯೋಣ.
ಟಾಟಾ ಗ್ರೂಪ್ ಸಂಸ್ಥೆಯಲ್ಲಿ ಒಟ್ಟು 30 ಕಂಪನಿಗಳು ಇವೆ. ಇದರ ವಾರ್ಷಿಕ ವಹಿವಾಟು 7.7 ಟ್ರಿಲಿಯನ್ ಇದೆ. ಭಾರತೀಯ ರೂಪಾಯಿ ಯಲ್ಲಿ ಎಷ್ಟು ಎಂದು ಕಾಮೆಂಟ್ ನಲ್ಲಿ ತಿಳಿಸಿ. 1 ಟ್ರಿಲಿಯನ್ ಎಂದರೆ 1ಲಕ್ಷ ಕೋಟಿಗೆ ಸಮ. ಹಾಗಾದ್ರೆ ಇವರ ವಹಿವಾಟು ಎಷ್ಟು ಎಂದು ನೀವು ಕೂಡ ಸ್ವಲ್ಪ ತಲೆ ಓಡಿಸಿ ವಿಚಾರಣೆ ಮಾಡಿ . ಈ ಟಾಟಾ ಗ್ರೂಪ್ ನಲ್ಲಿ ಇರುವ ಕೆಲವೊಂದು ಪ್ರಮುಖ ಕಂಪನಿಗಳು ಎಂದರೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸ್, ಟಾಟಾ ಸ್ಟೀಲ್ ಲಿಮಿಟೆಡ್, ಟಾಟಾ ಮೋಟಾರ್ಸ್ ಲಿಮಿಟೆಡ್, ಟೈಟಾನ್ ಕಂಪನಿ ಲಿಮಿಟೆಡ್, ಟಾಟಾ ಕೆಮಿಕಲ್ಸ್ ಲಿಮಿಟೆಡ್, ಟಾಟಾ ಪವರ್ ಕಂಪನಿ ಲಿಮಿಟೆಡ್,ದಿ ಇಂಡಿಯನ್ ಹೋಟೆಲ್ಸ್ ಕಂಪನಿ ಲಿಮಿಟೆಡ್, ಟಾಟಾ ಗ್ಲೋಬಲ್ ಬೇವರಜಸ್ ಲಿಮಿಟೆಡ್, ಟಾಟಾ ಕಮ್ಯುನಿಕೇಶನ್ ಲಿಮಿಟೆಡ್, ವೋಲ್ಟಾಸ್ ಲಿಮಿಟೆಡ್. ಇವು ಟಾಟಾ ಗ್ರೂಪ್ ನ ಕೆಲ ಪ್ರಮುಖ ಕಂಪನಿಗಳು. ನೀವು ಯಾವತ್ತಾದರೂ ಏನಾದರೂ ಖರೀದಿ ಮಾಡುವ ಯೋಜನೆ ಇದ್ದಾರೆ ದೇಶಕ್ಕಾಗಿ ಸೇವೆ ಮಾಡುವ ರತನ್ ಟಾಟಾ ಅವರ ಪ್ರೋಡಕ್ಟ್ ಗಳನ್ನೆ ಖರೀದಿ ಮಾಡಿ , ದೇಶ ಕಟ್ಟುವಲ್ಲಿ ನಾವು ಕೂಡ ಕೈ ಜೋಡಿಸುವ.