ವಿನ್ನರ್, ವಿನ್ನರ್ ಈಗ ನಿರೂಪಕಿ; ಮಿಂಚುತ್ತಿರುವ ವಂಶಿಕ ರವರ ವಿದ್ಯಾಭ್ಯಾಸದ ಬಗ್ಗೆ ತಂದೆ ಮಾಸ್ಟರ್ ಆನಂದ್ ದೊಡ್ಡ ನಿರ್ಧಾರ. ಏನು ಗೊತ್ತೇ??
ಖ್ಯಾತ ನಟ ಹಾಗೂ ನಿರೂಪಕ ಮಾಸ್ಟರ್ ಆನಂದ್ ಅವರ ಮಗಳು ವಂಶಿಕಾ ಈಗ ಕನ್ನಡ ಕಿರುತೆರೆಯಲ್ಲಿ ಬಹಳ ಫೇಮಸ್ ಆಗಿದ್ದಾಳೆ. ಎರಡು ರಿಯಾಲಿಟಿ ಶೋಗಳನ್ನು ಗೆದ್ದಿರುವ ವಂಶಿ, ಈಗ ನಿರೂಪಣೆ ಸಹ ಮಾಡಲಿದ್ದಾಳೆ, ಹಾಗು ಸಿನಿಮಾದಲ್ಲಿ ಸಹ ಬ್ಯುಸಿ ಆಗಿದ್ದಾಳೆ. ವಂಶಿಕಾ ಅದ್ಭುತ ನಟನೆಯಿಂದ ಎಲ್ಲರ ಮನಸ್ಸು ಗೆದ್ದಿದ್ದಾಳೆ, ಆದರೆ ಕೆಲವರು ಮಾತ್ರ ವಂಶಿಕಾ ಬಗ್ಗೆ ಮತ್ತು ಮಗುವಿನ ವಿದ್ಯಾಭ್ಯಾಸದ ಕೆಲವು ಮಾತುಗಳನ್ನು ಆಡಿದ್ದರು. ಇದೀಗ ವಂಶಿಕಾ ತಂದೆ ಮಾಸ್ಟರ್ ಆನಂದ್ ಅವರು ತಮ್ಮ ಮಗಳ ವಿದ್ಯಾಭ್ಯಾಸದ ಬಗ್ಗೆ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಮಾತನಾಡಿದ್ದಾರೆ.
ಆನಂದ್ ಅವರು ಹೇಳುವ ಹಾಗೆ.. “ವಂಶಿಕಾ ಈಗಷ್ಟೇ ಶಾಲೆಗೆ ಹೋಗಲು ಶುರುಮಾಡಿದ್ದಾಳೆ, ಯುಕೆಜಿ ಓದುತ್ತಿದ್ದಾಳೆ. ವಂಶಿ ಚೆನ್ನಾಗಿ ಡ್ಯಾನ್ಸ್ ಮಾಡ್ತಾಳೆ ಅಂತ ನನಗೆ ಗೊತ್ತಿತ್ತು, ಆಕ್ಟ್ ಮಾಡ್ತಾಳೆ ಅಂತ ಆಡಿಷನ್ ನಲ್ಲೇ ಗೊತ್ತಾಗಿದ್ದು. ವಂಶಿ ವಿದ್ಯಾಭ್ಯಾಸಕ್ಕೆ ಏನು ತೊಂದರೆ ಆಗಲ್ಲ, ಅವಳು ಎಳ್ಳಿಯವರೆಗೂ ಏನು ಓದುತ್ತೀನಿ ಅಂತ ಹೇಳ್ತಾಳೋ ಅಲ್ಲಿಯವರೆಗೂ ಓದಿಸುವ ಕೆಪಾಸಿಟಿ ನನಗೆ ಇದೆ. ಆಕ್ಟಿಂಗ್ ಜೊತೆಗೆ ಓದೋದನ್ನು ಚೆನ್ನಾಗಿ ನಿಭಾಯಿಸುತ್ತಾಳೆ. ವಂಶಿಕಾ ನನ್ನ ವೈಫ್ ಥರಾನೇ ಇರೋದು, ಚಿಕ್ಕ ವಯಸ್ಸಿನಲ್ಲಿ ಅವರು ಹಾಗೆ ಇದ್ರು. ಅವರು ಚೆನ್ನಾಗಿ ಡ್ಯಾನ್ಸ್ ಮಾಡ್ತಾರೆ, ಡ್ಯಾನ್ಸ್ ಅವರಿಂದ ಬಂದಿದೆ, ಮಾತಾಡೋ ಕಲೆ ನನ್ನಿಂದ ಬಂದಿದೆ.
ವಂಶಿ ನಟನೆ ಮತ್ತು ಮಾತನ್ನ ಎಲ್ಲರೂ ಮೆಚ್ಚಿಕೊಂಡಿದ್ದೀರಾ. ನನ್ನ ಮಗನಿಗೆ ಆಕ್ಟಿಂಗ್ ನಲ್ಲಿ ಅಷ್ಟು ಆಸಕ್ತಿ ಇಲ್ಲ, ವಂಶಿಗೆ ಇದೆ. ಅವರಿಬ್ಬರು ಏನು ಮಾಡಬೇಕು ಅಂದುಕೊಂಡಿದ್ದಾರೋ ಅದನ್ನ ಮಾಡಲಿ, ನಾನು ಪ್ರೋತ್ಸಾಹ ಕೊಡ್ತೀನಿ. ನನಗೆ ಒಂದು ಆಸೆ ಇದೆ, ನನ್ನ ಮಗಳನ್ನ ಡಾಕ್ಟರ್ ಮಾಡಬೇಕು ಅಂತ. ಸಾಯಿಪಲ್ಲವಿ ಅವರನ್ನ ನೋಡಿ, ಆಕೆ ವೃತ್ತಿಯಲ್ಲಿ ಡಾಕ್ಟರ್ ಆಗಿದ್ರು, ಅದ್ಭುತವಾಗಿ ನಟಿಸುತ್ತಾರೆ ಮತ್ತು ಡ್ಯಾನ್ಸ್ ಮಾಡ್ತಾರೆ. ವಂಶಿಕಾ ಕೂಡ ಅದೇ ರೀತಿ ಆಗಬೇಕು ಅಂತ ನನ್ನ ಆಸೆ. ವಂಶಿಕಾ ಕೂಡ ನನಗೆ ಪ್ರಾಮಿಸ್ ಮಾಡಿದ್ದಾಳೆ ಚೆನ್ನಾಗಿ ಓದುತ್ತಿನಿ ಅಂತ..” ಎಂದು ಮಗಳ ವಿದ್ಯಾಭ್ಯಾಸದ ಬಗ್ಗೆ ಹೇಳಿದ್ದಾರೆ ನಟ ಮಾಸ್ಟರ್ ಆನಂದ್.