ವಿರಾಟ್ ಕೊಹ್ಲಿ ಭಾರತದ ಕ್ರಿಕೆಟ್ ತಂಡದ ಅತ್ಯಂತ ಯಶಸ್ವಿ ಆಟಗಾರ. ಸಚಿನ್ ತೆಂಡೂಲ್ಕರ್ ದಾಖಲೆ ಸರಿದೂಗಿಸಬಲ್ಲ ಆಟಗಾರ ಎಂದು ಅನೇಕರು ಹೇಳಿದ್ದರು. ಇದು ನಿಜ ಎಂಬಂತೆ ಇತ್ತು ವಿರಾಟ್ ಕೊಹ್ಲಿ ಆಟ. ಆಡಿದ ಪಂದ್ಯಗಳಲ್ಲಿ ೭೦ ಶತಕಗಳನ್ನು ಗಳಿಸಿದ್ದಲ್ಲದೆ. ಉತ್ತಮ ರನ್ ರೇಟ್ ಹಾಗು ಉತ್ತಮ ನಾಯಕತ್ವ ಗುಣಗಳನ್ನು ಹೊಂದಿದ್ದ ಆಟಗಾರ ಎಂದರೆ ತಪ್ಪಾಗಲಾರದು. ಪ್ರತಿಯೊಬ್ಬರ ಜೀವನದಲ್ಲಿ ಆ ಒಂದು ಕಹಿ ಗಳಿಗೆ ಬರುತ್ತದೆ ಎನ್ನುತ್ತಾರೆ. ಇದೀಗ ವಿರಾಟ್ ಕೊಹ್ಲಿ ಗು ಅದೇ ಸಮಸ್ಯೆ ಕಾಡುತ್ತಿದೆ. ವೃತ್ತಿ ಬದುಕಿನ ಅತ್ಯಂತ ಹೀನಾಯ ಲಯದಲ್ಲಿ ಇದ್ದಾರೆ ವಿರಾಟ್ ಕೊಹ್ಲಿ.
ಐಪಿಎಲ್ ೨೦೨೨ ಇದೆ ಮೇ ೨೯ ಕೆ ಮುಗಿಯಲಿದೆ. ಭಾರತ ಹಾಗು ದಕ್ಷಿಣ ಆಫ್ರಿಕಾ ನಡುವೆ ೫ ಪಂದ್ಯಗಳ ಟಿ-೨೦ ಪಂದ್ಯಗಳು ಜೂನ್ ೯ ರಿಂದ ೧೯ ರವರೆಗೆ ನಡೆಯಲಿದೆ. ಈ ಸರಣಿ ಭಾರತದಲ್ಲೇ ನಡೆಯಲಿದೆ. ಆದರೆ ಈಗಾಗಲೇ ಲಯ ಕಳೆದುಕೊಂಡಿರುವ ಹಾಗೇನೇ ಐಪಿಎಲ್ ಅಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದೆ ಇರುವ ವಿರಾಟ್ ಕೊಹ್ಲಿ ಗೆ ಬಿಸಿಸಿಐ ವಿಶ್ರಾಂತಿ ನೀಡುವ ಸಾಧ್ಯತೆ ಇದೆ ಎಂದು ವರದಿಗಳು ಹೇಳುತ್ತಿದೆ. ಈ ಸರಣಿಗೆ ಕೊಹ್ಲಿ ವಿಶ್ರಾಂತಿ ಪಡೆದುಕೊಳ್ಳುವುದು ಬಹುತೇಕ ಖಚಿತವಾಗಿದೆ.
ಈ ದಕ್ಷಿಣ ಆಫ್ರಿಕಾ ನಡುವಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಅಲ್ಲದೆ ಇನ್ನು ಕೆಲವು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಅಲ್ಲದೆ ಈ ಸರಣಿಗೆ ಹೊಸ ತಂಡ ಆಡಲಿದೆ ಅಂದರೆ ತಪ್ಪಾಗಲಾರದು. ವಿಶ್ರಾಂತಿ ನೀಡಲು ಇನೊಂದು ಕಾರಣ ಕೂಡ ಇದೆ. ಅದೇ ಬಯೋ ಬಬಲ್. ವಿರಾಟ್ ಕೊಹ್ಲಿ ಹಾಗು ಇತರ ಆಟಗಾರರು ತಮ್ಮ ಅನೇಕ ಸಮಯ ಈ ಬಯೋ ಬಬಲ್ ಅಲ್ಲೇ ಕಳೆದಿದ್ದಾರೆ. ಹೀಗಾಗಿ ಹಿರಿಯ ಆಟಗಾರರಿಗೆ ಆಗಾಗ ವಿಶ್ರಾಂತಿ ನೀಡುವ ಹೊಸ ನಿಯಮ ಜಾರಿಗೆ ತಂದಿದ್ದೇವೆ ಎಂದು ಬಿಸಿಸಿಐ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಇನ್ನು ಐಪಿಎಲ್ ಅಲ್ಲದೆ ಅಂತಾರಾಷ್ಟ್ರೀಯ ಕ್ರಿಕೆಟ್ ಅಲ್ಲೂ ಯಾವುದೇ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದೆ ಇರುವ ವಿರಾಟ್ ಕೊಹ್ಲಿಗೆ ವಿಶ್ರಾಂತಿ ಯಾ ಅಗತ್ಯ ಇದೆ ಎಂದು ಅನೇಕ ಹಿರಿಯ ಆಟಗಾರರು ಹೇಳಿದ್ದಾರೆ. ಮಾಜಿ ತರಬೇತುದಾರರಾದ ರವಿ ಶಾಸ್ತ್ರೀ ಕೂಡ ಮುಂದಿನ ಯಾವುದೇ ಪಂದ್ಯ ಆಡದೆ ಕೊಹ್ಲಿ ವಿಶ್ರಾಂತಿ ಪಡೆಯಬೇಕೆಂದು. ಇನ್ನು ಐಪಿಎಲ್ ಇಂದ ಈಗಾಗಲೇ ಹೊರಬಿದ್ದಿರುವ ಸೂರ್ಯಕುಮಾರ್ ಯಾದವ್ ಕೂಡ ದಕ್ಷಿಣ ಆಫ್ರಿಕಾ ಸರಣಿಗೆ ಅಲಭ್ಯರಾಗಲಿದ್ದಾರೆ ಎಂದು ವರದಿಗಳು ಬರುತ್ತಿದೆ. ಸೂರ್ಯಕುಮಾರ್ ಯಾದವ್ ಒಬ್ಬ ಉತ್ತಮ ಮಾಧ್ಯಮ ಕ್ರಮಾಂಕದಲ್ಲಿ ಆಡುವ ಆಟಗಾರರಾಗಿದ್ದು ಮುಂಬರುವ ಸರಣಿಗೆ ಬೇರೆ ಯಾರು ಇವರ ಬದಲಿಗೆ ಬರಲಿದ್ದಾರೆ ಎಂದು ಕಾದು ನೋಡಬೇಕಿದೆ.