ವಿರಾಟ್ ಕೊಹ್ಲಿ ಯವರ ಈ ಒಂದು ರೆಕಾರ್ಡ್ ಮುರಿಯುವ ಬಹಳ ಹತ್ತಿರ ಇದ್ದಾರೆ ಸೂರ್ಯ ಕುಮಾರ್ ಯಾದವ್.

200

ಟಿ-೨೦ ವಿಶ್ವಕಪ್ ಸೋಲಿನ ಬಳಿಕ ಭಾರತ ಹಾಗು ನ್ಯೂಜಿಲ್ಯಾಂಡ್ ಎರಡು ತಂಡಗಳು ಕೂಡ ಸೀಮಿತ ಓವರ್ ಗಳ ಪಂದ್ಯಗಳಲ್ಲಿ ಮುಖಾಮುಖಿ ಆಗಲಿದ್ದಾರೆ. ಸರಣಿ ಶುರುವಾಗಿದ್ದರು ಕೂಡ ಮೊದಲ ಪಂದ್ಯ ಮಳೆ ಇಂದ ನಿಂತೇ ಹೋಯಿತು. ಮೂರೂ ಟಿ-೨೦ ಪಂದ್ಯ ಮಾತ್ರವಲ್ಲದೆ ಅಷ್ಟೇ ಏಕದಿನ ಪಂದ್ಯ ಕೂಡ ಆಡಲಿದೆ ಭಾರತ.

ಎರಡು ತಂಡಗಳು ಕೂಡ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿದೆ. ನ್ಯೂಜಿಲ್ಯಾಂಡ್ ಮಾರ್ಟಿನ್ ಗಪ್ಟಿಲ್ ಹಾಗು ಟ್ರೆಂಟ್ ಬೌಲ್ಟ್ ಗೆ ವಿಶ್ರಾಂತಿ ನೀಡಿದೆ. ಹಾಗೇನೇ ಭಾರತದಲ್ಲಿ ವಿರಾಟ್ ಕೊಹ್ಲಿ,ರೋಹಿತ್ ಶರ್ಮ ರಾಹುಲ್ ಅವರಿಗೆ ವಿಶ್ರಾಂತಿ ನೀಡಿದೆ. ಟಿ-೨೦ ಗೆ ಹಾರ್ದಿಕ್ ಪಂದ್ಯ ಹಾಗು ಏಕದಿನ ಪಂದ್ಯಕ್ಕೆ ಶಿಖರ್ ಧವನ್ ಗೆ ನಾಯಕತ್ವ ನೀಡಿದೆ ಬಿಸಿಸಿಐ. ಈ ಸರಣಿಯಲ್ಲಿ ವಿರಾಟ್ ಕೊಹ್ಲಿ ಇಲ್ಲದೆ ಇರುವುದರಿಂದ ಸೂರ್ಯ ಕುಮಾರ್ ಯಾದವ್ ಮೇಲೆ ಹೆಚ್ಚಿದೆ ಜವಾಬ್ದಾರಿ. ಹಾಗೇನೇ ಸೂರ್ಯ ಕುಮಾರ್ ಇದೀಗ ಉತ್ತಮ ಫಾರ್ಮ್ ಅಲ್ಲಿ ಕೂಡ ಇದ್ದಾರೆ.

SKY ಅವರ ಈಗಿನ ಫಾರ್ಮ್ ನೋಡುತ್ತಿದ್ದರೆ, ಇವರು ಶೀಘ್ರದಲ್ಲಿಯೇ ವಿರಾಟ್ ಕೊಹ್ಲಿ ಅವರ ಈ ರೆಕಾರ್ಡ್ ಮುರಿಯುವುದರಲ್ಲಿ ಅನುಮಾನವಿಲ್ಲ. ಪೂರ್ವ ಭಾರತೀಯ ನಾಯಕ ವಿರಾಟ್ ಕೊಹ್ಲಿ31 ಪಂದ್ಯದಲ್ಲಿ, 89.66 ರ ಸರಾಸರಿಯಲ್ಲಿ, 147.14 ರ ಸ್ಟ್ರೈಕ್ ರೇಟ್ ಅಲ್ಲಿ 1614 ರನ್ ಗಳಿಸಿದ್ದರು. ಐಪಿಎಲ್ ನ ಒಂದು ಆವೃತ್ತಿಯಲ್ಲಿ ಸರ್ವಾಧಿಕ ರನ್ ಗಳಿಸಿದ ದಾಖಲೆ ಕೂಡ ಮಾಡಿದ್ದರು. 16 ಪಂದ್ಯಗಳಲ್ಲಿ 973 ರನ್ ಗಳಿಸಿದ್ದರು. ಇದರಲ್ಲಿ ನಾಲ್ಕು ನಾಲ್ಕು ಶತಕ ಕೂಡ ಸೇರಿದೆ. 1614 ರನ್ ಗಳಿಸಿದ್ದು ಟಿ-೨೦ ಪದ್ಯದಲ್ಲಿ ಒಂದು ವರ್ಷದಲ್ಲಿ ಒಬ್ಬ ಭಾರತೀಯ ಗಳಿಸಿದ ಅತ್ಯಧಿಕ ರನ್ ಆಗಿದೆ.

ಸೂರ್ಯ ಕುಮಾರ್ ಯಾದವ್ ಈ ದಾಖಲೆ ಮುರಿಯುವತ್ತ ಹೊರಟಿದ್ದಾರೆ. ಇನ್ನು ನ್ಯೂಜಿಲ್ಯಾಂಡ್ ವಿರುದ್ಧ ಉಳಿದಿರವ ಎರಡು ಪಂದ್ಯಗಳಲ್ಲಿ 236 ರನ್ ಮಾಡಿದರೆ ವಿರಾಟ್ ಕೊಹ್ಲಿ ಅವರ ದಾಖಲೆ ಸರಿಗಟ್ಟುತ್ತಾರೆ ಸ್ಕೈ. ಇದು ಕಷ್ಟ ಸಾದ್ಯವಾದರೂ ಕೂಡ ಮುಂದಿನ ದಿನಗಳಲ್ಲಿ ಸೂರ್ಯ ಕುಮಾರ್ ಯಾದವ್ ಇದನ್ನು ಮಾಡುವ ಎಲ್ಲ ಲಕ್ಷಣಗಳು ಕಾಣುತ್ತಿದೆ. ಯಾದವ್ ಈ ವರ್ಷ 39 ಟಿ-೨೦ ಪಂದ್ಯ ಆಡಿದ್ದು, ೪೩.೦೯ ಸರಾಸರಿಯಲ್ಲಿ ಹಾಗು 173.89 ರ ಸ್ಟ್ರೈಕ್ ರೇಟ್ ಅಲ್ಲಿ 1379 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗು 12 ಅರ್ಧ ಶತಕ ಸೇರಿದೆ. ದಾಖಲೆ ಮುರಿಯುತ್ತಾರೋ ಇಲ್ಲವೋ ಎಂದು ಕಾದು ನೋಡಬೇಕಿದೆ.

Leave A Reply

Your email address will not be published.