ವಿರಾಟ್ ಕೊಹ್ಲಿ ವಿಕೆಟ್ ಕಿತ್ತ ನಂತರ ಜೇಮ್ಸ್ ಆಂಡರ್ಸನ್ ಗೆ ಅಭಿನಂದನೆ ಕೋರಿ ಅನಿಲ್ ಕುಂಬ್ಳೆ ಟ್ವೀಟ್. ಯಾಕೆ ಈ ಟ್ವೀಟ್?
ಕ್ರಿಕೆಟ್ ಅಂದರೇನೇ ಹಾಗೆ ಯಾರು ಯಾರಿಗೆ ಶ್ಲಾಘಿಸುತ್ತಾರೆ ಎನ್ನುವುದು ಗೊತ್ತಿಲ್ಲ, ಕೆಲವೊಮ್ಮೆ ಮೈದಾನದಲ್ಲಿ ಪರಸ್ಪರ ಕಿ’ತ್ತಾಡುವ ಆಟಗಾರರು ಮಗದೊಮ್ಮೆ ಟ್ವೀಟ್ ಮಾಡುವ ಮೂಲಕ ಕಾ’ಲೆಳೆಯುತ್ತಾರೆ. ಭಾರತ ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಇಂತಹ ಸನ್ನಿವೇಶ ನಡೆದಿದೆ. ವಿರಾಟ್ ಕೊಹ್ಲಿ ವಿಕೆಟ್ ಕಿ’ತ್ತ ನಂತರ ಅನಿಲ್ ಕುಂಬ್ಳೆ ಇಂಗ್ಲೆಂಡ್ ತಂಡದ ವೇಗಿ ಜೇಮ್ಸ್ ಆಂಡರ್ಸನ್ ಗೆ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಅಷ್ಟಕ್ಕೂ ಕುಂಬ್ಳೆ ಈ ರೀತಿ ಮಾಡಿದ್ದರೂ ಏಕೆ?
ಜೇಮ್ಸ್ ಆಂಡರ್ಸನ್ ಶುಕ್ರವಾರ (ಆಗಸ್ಟ್ 6) ಟೆಸ್ಟ್‌ನಲ್ಲಿ ಭಾರತದ ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರ ಅತೀ ಹೆಚ್ಚು ವಿಕೆಟ್ ಗಳಿಸಿದ ಸಾಧನೆಯನ್ನು ಮು’ರಿದರು. ಈ ಮೂಲಕ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಮತ್ತೊಂದು ಮೈಲಿಗಲ್ಲನ್ನು ತಲುಪಿದರು. ಆಂಡರ್ಸನ್ ಅವರ 621 ವಿಕೆಟುಗಳ ಅವರು ಭಾರತೀಯ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರನ್ನು ಮೀರಿಸುವ ಮೂಲಕ ಟೆಸ್ಟ್ ಫಾರ್ಮ್ಯಾಟ್ ನಲ್ಲಿ ಮೂರನೇ ಅತಿ ಹೆಚ್ಚು ವಿಕೆಟ್ ಪಡೆದವರಾಗಿದ್ದಾರೆ. 38 ವರ್ಷದ ಅವರು ಟ್ರೆಂಟ್ ಬ್ರಿಡ್ಜ್‌ನಲ್ಲಿ ಭಾರತದ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್ ಪಡೆದರು, ಅವರ ಒಟ್ಟು ವಿಕೆಟ್ ಪಡೆದ ಸಂಖ್ಯೆ 617 ರಿಂದ 621 ಕ್ಕೆ ಏರಿತು. ಭಾರತದ ನಾಯಕ ವಿರಾಟ್ ಕೊಹ್ಲಿ ಅವರ ವಿಕೆಟ್ ಪಡೆಯುವುದರೊಂದಿಗೆ ಅವರು ಈ ಮೈಲಿಗಲ್ಲನ್ನು ತಲುಪಿದರು.
ಭಾರತದ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ತಮ್ಮ ಟ್ವಿಟ್ಟರ್ ಮೂಲಕ ಅವರ ಈ ಅಮೋಘ ಸಾಧನೆಯನ್ನು ಅಭಿನಂದಿಸಿದರು. ಈಗಾಗಲೇ ಸರಣಿಯ ಮೊದಲನೇ ಪಂದ್ಯದಲ್ಲಿ ಭಾರತದ ಆಟಗಾರರು ಇಂಗ್ಲೆಂಡ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಸಫಲರಾಗಿದ್ದಾರೆ. ಎರಡನೇ ಇನ್ನಿಂಗ್ಸ್ ಅಲ್ಲಿ ಸ್ವಲ್ಪ ಮೊತ್ತದ ಮುನ್ನಡೆ ಕೂಡ ಗಳಿಸಿದ್ದಾರೆ. ಎರಡನೇ ಇನ್ನಿಂಗ್ಸ್ ಅಲ್ಲಿ ಜೋ ರೂಟ್ ಅವ್ವರ ಶತಕದ ಸಹಾಯದಿಂದ ೩೦೦ ದಾಟುವಲ್ಲಿ ಇಂಗ್ಲೆಂಡ್ ಯಶಸ್ವಿ ಆಗಿದೆ. ಭಾರತದ ೫ ನೇ ದಿನದ ಪ್ರದರ್ಶನದ ಮೇಲೆ ಸೋಲು ಗೆಲುವಿನ ಅಂದಾಜು ನಿಂತಿದೆ.