ವಿಶ್ವಕಪ್ ಗು ಮುನ್ನ ಸೋಲಿನ ಸುಳಿಯಲ್ಲಿ ಸಿಲುಕಿರುವ ತಂಡದ ಕುರಿತು ಮಾತನಾಡಿ RP ಸಿಂಗ್ ಹೇಳಿದ್ದೇನು ಗೊತ್ತೇ??

107

ವಿಶ್ವಕಪ್ ಗಿಂತ ಮೊದಲು ಶುರುವಾಗುವ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಹೀನಾಯವಾದ ಸೋಲು ಕಂಡಿದೆ. 209 ರನ್ ಗಳ ಬೃಹತ್ ಗುರಿಯನ್ನೇ ನೀಡಿದರು ಸಹ, ಅದನ್ನು ರಕ್ಷಿಸಿಕೊಳ್ಳುವಲ್ಲಿ ಸೋತಿದೆ. ಭುವನೇಶ್ವರ್ ಕುಮಾರ್ ಸೊನ್ನೆ ವಿಕೆಟ್ ವಿಕೆಟ್ 52 ರನ್ ಬಿಟ್ಟುಕೊಟ್ಟರು, ಹರ್ಷಲ್ ಪಟೇಲ್ 0 ವಿಕೆಟ್ ಗೆ 49 ರನ್ ಬಿಟ್ಟುಕೊಟ್ಟರು, ಯುಜವೇಂದ್ರ ಚಾಹಲ್ 1 ವಿಕೆಟ್ ಗೆ 42 ರನ್ ಬಿಟ್ಟುಕೊಟ್ಟರು, ಉಮೇಶ್ ಯಾದವ್ ಎರಡು ಓವರ್ ಗಳಲ್ಲಿ 27 ರನ್ ಬಿಟ್ಟುಕೊಟ್ಟರು. ಈ ರೀತಿ ಹೆಚ್ಚಿನ ರನ್ಸ್ ಬಿಟ್ಟುಕೊಟ್ಟ ಕಾರಣ ದೊಡ್ಡ ಮೊತ್ತವನ್ನೇ ಗಳಿಸಿದ್ದರೂ ಸಹ ಭಾರತ ತಂಡ ಅದನ್ನು ಉಳಿಸಿಕೊಳ್ಳಲು ಸಾಧ್ಯಗಾಲಿಲ್ಲ.

ಭಾರತ ತಂಡದ ಕಳಪೆ ಬೌಲಿಂಗ್ ಬಗ್ಗೆ ಇದೀಗ ಮಾಜಿವೇಗಿ ಆರ್.ಪಿ.ಸಿಂಗ್ ಅವರು ಮಾತನಾಡಿದ್ದಾರೆ.. “ವಿಶ್ವಕಪ್ ಶುರು ಆಗುವುದಕ್ಕಿಂತ ಮೊದಲು ಇದು ಒಳ್ಳೆಯ ಸೂಚನೆ ಅಲ್ಲ, ಏಷ್ಯಾಕಪ್ ನಲ್ಲಿ ಭಾರತ ಸೋತಾಗ, ಹರ್ಷಲ್ ಪಟೇಲ್ ಹಾಗೂ ಬುಮ್ರ ಇರದೇ ಇರುವುದು ಈ ರೀತಿಯ ಕಳಪೆ ಬೌಲಿಂಗ್ ಗೆ ಕಾರಣ ಎಂದು ಭಾವಿಸಿದ್ದೆವು. ಆದರೆ ಈಗ ಹರ್ಷಲ್ ಪಟೇಲ್ ಬಂದಿದ್ದಾರೆ, ಮ್ಯಾಚ್ ನಲ್ಲಿ ಏನು ಮಾಡಿದರು ಈಗಾಗಲೇ ನೋಡಿದ್ದೇವೆ, ಈಗ ಎಲ್ಲರೂ ಬುಮ್ರ ಇರಬೇಕಿತ್ತು ಎಂದು ಹೇಳುತ್ತಿದ್ದಾರೆ, ಜಸ್ಪ್ರೀತ್ ಬುಮ್ರ ಬಂದರೆ ಅವರ ಬೌಲಿಂಗ್ ಸಹ ಆಕ್ರಮಣಕಾರಿಯಾಗಿ ಇರುವುದಿಲ್ಲ…”ಎಂದಿದ್ದಾರೆ ಆರ್.ಪಿ.ಸಿಂಗ್.
“ನಮ್ಮ ಬೌಲರ್ ಗಳು ಗಾಯದಿಂದ ಚೇತರಿಸಿಕೊಂಡು ಹಿಂದಿರುಗಿದ ಬಳಿಕ ಉತ್ತಮವಾದ ಪ್ರದರ್ಶನವನ್ನೇ ನೀಡುತ್ತಾರೆ ಎಂದು ನಿರೀಕ್ಷೆ ಮಾಡಬಾರದು.

ಹೀಗೆ ನಿರೀಕ್ಷೆ ಮಾಡಿದ ಎಲ್ಲಾ ಮ್ಯಾಚ್ ಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಈಗ ತಂಡದಲ್ಲಿರುವ ಪ್ಲೇಯರ್ ಗಳ ಮೇಲೆ ಗಮನ ಹರಿಸಿ, ಅವರನ್ನು ಸರಿಯಾಗಿ ಬಳಸಿಕೊಳ್ಳಬೇಕು. ವಿಶ್ವಕಪ್ ಹತ್ತಿರ ಆಗುತ್ತಿರುವ ಹಾಗೆ, ಭಾರತ ತಂಡದ ಪ್ರದರ್ಶನ ನೀರಸವಾಗುತ್ತಿದೆ. ಬೌಲರ್ ಗಳಿಂದ ಪಂದ್ಯ ನಿಯಂತ್ರಣ ಮಾಡಲು ಸಾಧ್ಯವಾಗುತ್ತಿಲ್ಲ. ಆಸ್ಟ್ರೇಲಿಯಾ ತಂಡ ರನ್ ಚೇಸ್ ಮಾಡುವಾಗ ಭಾರತದ ಬೌಲಿಂಗ್ ಯಾವುದೇ ಹಂತದಲ್ಲು ಪರಿಣಾಮಕಾರಿಯಾಗಿ ಇರಲಿಲ್ಲ. ಅಸ್ಟ್ರೇಲಿಯಾ ತಂಡ ಬೌಂಡರಿ ಗಳನ್ನು ಹೊಡೆಯುತ್ತಾ, ಸಿಂಗಲ್ಸ್ ತೆಗೆದುಕೊಳ್ಳುತ್ತಾ ಸ್ಟ್ರೈಕ್ ಬದಲಾಯಿಸುತ್ತಿದ್ದರು. ಆದರೆ ನಮ್ಮ ಬೌಲರ್ ಗಳಿಂದ ಆಕ್ರಮಣಕಾರಿ ಬೌಲಿಂಗ್ ಪ್ರದರ್ಶನ ಬರಲಿಲ್ಲ. ಭಾರತದ ಬೌಲರ್ ಗಳು ಯೋಜನೆಗಳನ್ನು ಸರಿಯಾಗಿ ಕಾರ್ಯರೂಪಕ್ಕೆ ತರಲಿಲ್ಲ..” ಎಂದಿದ್ದಾರೆ ಆರ್.ಪಿ.ಸಿಂಗ್.

ಪದೇ ಪದೇ ಮ್ಯಾಚ್ ಗಳಲ್ಲಿ ಹೀಗೆ ಆಗುತ್ತಿದ್ದಾಗ, ಬೌಲಿಂಗ್ ಘಟಕ ಟೀಕೆಗೆ ಗುರಿಯಾಗಿದೆ. ಮುಂದಿನ ಪಂದ್ಯಗಳಲ್ಲಿ ಯಶಸ್ವಿಯಾಗಲು ಮ್ಯಾನೇಜ್ಮೆಂಟ್ ಕೆಲವು ಬದಲಾವಣೆ ಮಾಡಬೇಕು. ಬೌಲರ್ ಗಳು ವೈಡ್ ಯಾರ್ಕರ್ ಬೌಲಿಂಗ್ ಮಾಡುವ, ಥರ್ಡ್ ಮ್ಯಾನ್ ಅನ್ನು ಪಾಯಿಂಟ್ ಅಥವಾ ಸರ್ಕಲ್ ಒಳಗೆ ಹಾಕಬಾರದು, ಆ ಪ್ಲಾನ್ ಸರಿಯಲ್ಲ ಎಂದು ಆರ್.ಪಿ.ಸಿಂಗ್ ಸಲಹೆ ನೀಡಿದ್ದಾರೆ. ಫೀಲ್ಡಿಂಗ್ ನಲ್ಲಿಯೂ ದೊಡ್ಡ ಬದಲಾವಣೆ ತರದೆ ಹೋದರೆ, ಭಾರತ ತಂಡ ಗೆಲ್ಲುವುದು ಕಷ್ಟವಾಗುತ್ತದೆ ಎಂದಿದ್ದಾರೆ ಮಾಜಿ ವೇಗಿ ಆರ್.ಪಿ.ಸಿಂಗ್.

Leave A Reply

Your email address will not be published.