ವಿಶ್ವಕಪ್ ಭಾರತ ತಂಡದಲ್ಲಿ ಈತ ಒಬ್ಬರ ಇದ್ದಿದ್ದರೆ ಇನ್ನು ಭಲಿಷ್ಟವಾಗುತಿತ್ತು ಎಂದ ಡ್ಯಾನಿಷ್ ಕನೇರಿಯಾ: ಆ ಬಲಾಢ್ಯ ಆಟಗಾರ ಯಾರು ಗೊತ್ತೇ??

360

ನಿನ್ನೆಯಷ್ಟೇ ಬಿಸಿಸಿಐ ಟಿ20 ವಿಶ್ವಕಪ್ ಕಲ್ಲಿ ಆಡುವ 15 ಸದಸ್ಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ರೋಹಿತ್ ಶರ್ಮಾ ನಾಯಕನಾಗಿ, ಕೆ.ಎಲ್.ರಾಹುಲ್ ವೈಸ್ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸಲಿದ್ದಾರೆ. ಏಷ್ಯಾಕಪ್ 2022 ಪಂದ್ಯಗಳಲ್ಲಿ ಇದ್ದ ಬಹುತೇಕ ಆಟಗಾರರೆ ಇಲ್ಲೂ ಕೂಡ ಇರಲಿದ್ದು, ಜಸ್ಪ್ರೀತ್ ಬುಮ್ರ, ಹರ್ಷಲ್ ಪಟೇಲ್ ತಂಡಕ್ಕೆ ವಾಪಸ್ ಬಂದಿದ್ದಾರೆ. ಹಾಗೂ ಮೊಹಮ್ಮದ್ ಶಮಿ ಅವರು ಸ್ಟ್ಯಾಂಡ್ ಬೈ ಆಟಗಾರನಾಗಿ ಆಯ್ಕೆಯಾಗಿದ್ದಾರೆ. ಈ ನಡುವೆ ಭಾರತ ತಂಡ ಸೆಲೆಕ್ಟ್ ಮಾಡಿರುವ ಆಟಗಾರರ ಕೆಲವರಲ್ಲಿ ಅಸಮಾಧಾನ ಇದೆ.

ಭಾರತ ತಂಡದಲ್ಲಿ ಈಗ ಆಯ್ಕೆಯಾಗಿರುವ ಆಟಗಾರರ ತಂಡದಲ್ಲಿ ಮತ್ತೊಬ್ಬ ಆಟಗಾರನನ್ನು ಪರಿಗಣಿಸಬೇಕಿತ್ತು, ಆತ ಇದ್ದರೆ ಭಾರತ ತಂಡ ಇನ್ನು ಸ್ಟ್ರಾಂಗ್ ಆಗಿರುತ್ತಿತ್ತು ಎಂದು ಪಾಕಿಸ್ತಾನದ ಮಾಜಿ ಲೆಗ್ ಸ್ಪಿನ್ನರ್ ಡ್ಯಾನಿಷ್ ಕನೇರಿಯ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಡ್ಯಾನಿಷ್ ಅವರು ಬಿಸಿಸಿಐ 15 ಆಟಗಾರರ ಪಟ್ಟಿ ಬಿಡುಗಡೆ ಮಾಡಿದ ಬಳಿಕ ಈ ರೀತಿಯ ಹೇಳಿಕೆ ನೀಡಿದ್ದಾರೆ. ಡ್ಯಾನಿಷ್ ಅವರು ಮಾತನಾಡಿರುವುದು ಸಂಜು ಸ್ಯಾಮ್ಸನ್ ಅವರ ಬಗ್ಗೆ. “ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ರಿಷಬ್ ಪಂತ್ ಅವರಿಗಿಂತ ಮೊದಲು ಸಂಜು ಸ್ಯಾಮ್ಸನ್ ಅವರು ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಬೇಕಿತ್ತು..” ಎಂದಿದ್ದಾಎಸ್ ಡ್ಯಾನಿಶ್.

ಸಂಜು ಸ್ಯಾಮ್ಸನ್ ಅವರನ್ನು ಸ್ವಲ್ಪ ಮಟ್ಟಿಗೆ ಕಡೆಗಣಿಸಲಾಗುತ್ತಿದೆ. ಏಷ್ಯಾಕಪ್ ಪಂದ್ಯಗಳಲ್ಲಿ ಅವರಿಗೆ ಸ್ಥಾನ ನೀಡಲಿಲ್ಲ. ವಿಶ್ವಕಪ್ ನಲ್ಲಿಯೂ ಸಂಜು ಸ್ಯಾಮ್ಸನ್ ಅವರನ್ನು ಪರಿಗಣಿಸಿಲ್ಲ..ವೈಟ್ ಬಾಲ್ ತಂಡದಿಂದ ಸಂಜು ಸ್ಯಾಮ್ಸನ್ ಹೊರಗಿದ್ದಾರೆ. ಸಂಜು ಸ್ಯಾಮ್ಸನ್ ಅವರಿಗೆ ಅನ್ಯಾಯ ಆಗಿದೆ, ಆಯ್ಕೆ ಮಾಡದೆ ಇರುವಂಥದ್ದು ಅವರು ಏನು ಮಾಡಿದ್ದಾರೆ. ನಾನು ರಿಷಬ್ ಪಂತ್ ಅವರ ಬದಲು ಸಂಜು ಸ್ಯಾಮ್ಸನ್ ಅವರನ್ನು ಆಯ್ಕೆ ಮಾಡುತ್ತೇನೆ..ಎಂದಿದ್ದಾರೆ ಡ್ಯಾನಿಶ್ ಕನೇರಿಯ.

Leave A Reply

Your email address will not be published.