ಶನಿ ದೇವನು ಎಂದಿಗೂ ಕೂಡ ಈ ಎರಡು ರಾಶಿಗಳಿಗೆ ಯಾವುದೇ ಕಾರಣಕ್ಕೂ ಕಷ್ಟ ಕೊಡುವುದಿಲ್ಲ, ಆ ಅದೃಷ್ಟವಂತ ರಾಶಿಗಳು ಯಾವ್ಯಾವು ಗೊತ್ತೇ??

159

ಶನಿದೇವರನ್ನು ನ್ಯಾಯದ ದೇವರು ಎಂದು ಕರೆಯುತ್ತಾರೆ. ಶನಿದೇವರು ಪ್ರತಿಯೊಬ್ಬ ಮನುಷ್ಯನ ಕರ್ಮದ ಅನುಸಾರ ಅವರಿಗೆ ಫಲ ನೀಡುತ್ತಾನೆ, ಒಬ್ಬ ವ್ಯಕ್ತಿ ಮಾಡುವ ಒಳ್ಳೆಯ ಕೆಟ್ಟ ಕಾರ್ಯಗಳ ಅನುಸಾರ ಅವರಿಗೆ ಫಲ ನಿರ್ಧಾರ ಮಾಡುತ್ತಾನೆ ಶನಿದೇವ. ಶನಿದೇವರು ಎಲ್ಲರಿಗೂ ಕಷ್ಟ ಕೊಡುವುದಿಲ್ಲ. ಸಾಡೇ ಸಾತಿ ಅಥವಾ ಧೈಯಾ ಸಮಯದಲ್ಲಿ ಕೆಲವರ ಮೇಲೆ ದಯೆ ಸಹ ತೋರಿಸುತ್ತಾನೆ ಶನಿದೇವ. ಶನಿದೇವರನ್ನು ಕ್ರೂರಿ ಎಂದು ಸಹ ಹೇಳುತ್ತಾರೆ, ಆದರೆ ಶನಿ ತಾನು ನೀಡುವ ಶಿಕ್ಷೆಯನ್ನು ಒಬ್ಬ ಮನುಷ್ಯನು ಮಾಡಿರುವ ಕೆಟ್ಟ ಕೆಲಸಗಳ ಮೇಲೆಯೇ ನಿರ್ಧಾರವಾಗುತ್ತದೆ. ಭೂಮಿಯಲ್ಲಿರುವ ಪ್ರತಿಯೊಬ್ಬ ಮನುಷ್ಯನು ಮಾಡುವ ಒಳ್ಳೆಯ ಕೆಟ್ಟ ಕಾರ್ಯಗಳನ್ನು ಲೆಕ್ಕ ಹಾಕಿ ಶನಿದೇವರು ಫಲ ಕೊಡುವುದರಿಂದ ಆತನನ್ನು ನ್ಯಾಯದೇವರು ಎನ್ನುತ್ತಾರೆ.

ಭೂಮಿಯಲ್ಲಿ ಅನೇಕರು ಶನಿಯ ಧೈಯಾ ಸಮಯವನ್ನು ಕೆಟ್ಟ ಸಮಯ ಎಂದುಕೊಳ್ಳುತ್ತಾರೆ. ಆದರೆ ಅದು ತಪ್ಪು, ಸಾಡೇಸಾತಿ ಹಾಗೂ ಧೈಯಾ ಸಮಯದಲ್ಲಿ ಶನಿದೇವರು ಕೆಲವು ಜನರ ಮೇಲೆ ಕರುಣೆಯನ್ನು ಸಹ ತೋರಿಸುತ್ತಾನೆ, ಶುಭಫಲಗಳನ್ನು ಸಹ ನೀಡುತ್ತಾನೆ. ಶನಿದೇವರು ಮಕರ ಹಾಗೂ ಕುಂಭ ರಾಶಿಯ ಅಧಿಪತಿ ಆಗಿದ್ದು, ಶನಿದೇವರು ಪ್ರಸ್ತುತ ಮಕರ ರಾಶಿಯ ಸಂಕ್ರಾಂತಿಯಲ್ಲಿ ಸಾಗುತ್ತಿದ್ದು, ಶನಿದೇವರು ತನ್ನದೇ ರಾಶಿಯಲ್ಲಿ ಈಗ ಕುಳಿತಿದ್ದಾನೆ. ಶನಿಯ ಹಿಮ್ಮುಖ ಶುರುವಾಗಿದ್ದು, ಇದು ಅಷ್ಟೇನು ಒಳ್ಳೆಯ ಫಲಗಳನ್ನು ನೀಡದ ಕಾರಣ ಮಕರ ಮತ್ತು ಕುಂಭ ರಾಶಿಯವರು ಈ ಸಮಯದಲ್ಲಿ ಜಾಗರೂಕವಾಗಿರುವುದು ಒಳ್ಳೆಯದು ಎನ್ನುತ್ತಾರೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿದುಬಂದಿರುವ ಪ್ರಕಾರ, ಧನು ರಾಶಿ ಹಾಗೂ ಮೀನ ರಾಶಿಯವರಿಗೆ ಶನಿದೇವರು ತೊಂದರೆ ಕೊಡುವುದಿಲ್ಲ, ಬದಲಾಗಿ ಇವರಿಗೆ ಒಳ್ಳೆಯದಾಗುವವರೆಗೂ ಶನಿದೇವರು ಒಳ್ಳೆಯ ಫಲಿತಾಂಶವನ್ನೇ ನೀಡುತ್ತಾನೆ. ಜೊತೆಗೆ ಈ ಎರಡು ರಾಶಿಯವರು ಶನಿದೇವರ ನಿಯಮಗಳನ್ನು ಎಲ್ಲಾ ಅನುಸರಿಸಿ ಪೂಜಿಸುತ್ತಾ ಬಂದರೆ, ಶನಿದೇವರ ಕೃಪೆಗೆ ಪಾತ್ರರಾಗುತ್ತಾರೆ. ಇವರಿಗೆ ಶನಿಯು ಸಂಪತ್ತು ಮತ್ತು ಸಂತೋಷ. ನೀಡುತ್ತಾನೆ. ಶನಿ ದೇವರಿಗೆ ತುಲಾ ರಾಶಿ ಎಂದರೆ ಹೆಚ್ಚಿನ ಪ್ರೀತಿ ಎಂದು ಹೇಳುತ್ತಾರೆ, ಈ ರಾಶಿಯವರು ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಬಂದರೆ ಏಳಿಗೆ ಕಾಣುತ್ತಾರೆ. ಮೀನಾ ರಾಶಿಯವರು ಒಳ್ಳೆಯ ಕೆಲಸಗಳನ್ನು ಮಾಡುತ್ತಾ, ವ್ಯವಹಾರಗಳನ್ನು ಚೆನ್ನಾಗಿ ಇಟ್ಟುಕೊಂಡರೆ, ಶನಿದೇವರಿಂದ ಅನಿರೀಕ್ಷಿತ ಫಲಿತಾಂಶ ಪಡೆಯುತ್ತಾರೆ. ಜೀವನಕ್ಕೆ ಉನ್ನತ ಸ್ಥಾನ ತಲುಪುತ್ತಾರೆ.

Leave A Reply

Your email address will not be published.