ಶುಕ್ರ ದೆಸೆ ಆರಂಭಕ್ಕೆ ಶುರುವಾಗಿದೆ ದಿನ ಗಣನೆ: ಮೂರು ರಾಶಿಗಳಿಗೆ ಶುಕ್ರ ದೆಸೆ. ಯಾವಾಗ ಮತ್ತು ಯಾವ ರಾಶಿಗಳಿಗೆ ಗೊತ್ತೆ??

ಗ್ರಹಗಳ ಸ್ಥಾನ ಬದಲಾವಣೆ ರಾಶಿ ಬದಲಾವಣೆಯು ಜೀವರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಕೆಲವು ರಾಶಿಗಳಿಗೆ ಶುಭಫಲ ಇನ್ನು ಕೆಲವು ರಾಶಿಗಳಿಗೆ ಅಶುಭಫಲ ಉಂಟಾಗಬಹುದು. ಇದೇ ತಿಂಗಳು ಅಕ್ಟೋಬರ್ 18ರಂದು, ಸಂಪತ್ತು, ಸಂತೋಷ ಮತ್ತು ವೈಭವವನ್ನು ನೀಡುವ ಶುಕ್ರ ಗ್ರಹವು ಸ್ಥಾನ ಬದಲಾವಣೆ ಮಾಡಿ ತುಲಾ ರಾಶಿಗೆ ಪ್ರವೇಶ ಮಾಡಲಿದ್ದಾನೆ, ದೀಪಾವಳಿ ಹಬ್ಬಕ್ಕಿಂತ ಮೊದಲು ನಡೆಯುವ ಈ ಸ್ಥಾನ ಬದಲಾವಣೆಯಿಂದ 3 ರಾಶಿಗಳಿಗೆ ಶುಭಫಲ ಸಿಗುತ್ತದೆ, ಮೂರು ರಾಶಿಯವರಿಗೆ ಸಂತೋಷ, ಸಂಪತ್ತು ಲಕ್ಷ್ಮೀದೇವಿಯಿಂದ ಪ್ರಾಪ್ತಿಯಾಗುತ್ತದೆ. ಲಕ್ಷ್ಮೀದೇವಿಯ ಕೃಪೆ ಪಡೆಯುವ ಆ ಮೂರು ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಕನ್ಯಾ ರಾಶಿ :- ತುಲಾ ರಾಶಿಗೆ ಶುಕ್ರನ ಆಗಮನ ಆಗುವುದರಿಂದ ಕನ್ಯಾ ರಾಶಿಯವರಿಗೆ ಹೆಚ್ಚಿನ ಲಾಭ ಉಂಟಾಗುತ್ತದೆ, ವೃತ್ತಿಜೀವನದಲ್ಲಿ ಮತ್ತು ಬ್ಯುಸಿನೆಸ್ ನಲ್ಲಿ ಲಾಭ ಆಗುವುದರಿಂದ ಇವರ ಆದಾಯ ಹೆಚ್ಚಾಗುತ್ತದೆ. ನೀವು ನಿರೀಕ್ಷೆ ಮಾಡದೆಯೇ ಬರುವ ಹಣ ನಿಮಗೆ ಅಚ್ಚರಿಗೊಳಿಸಬಹುದು. ಮಾರ್ಕೆಟಿಂಗ್, ಟೀಚಿಂಗ್, ನಿರೂಪಣೆ, ರಾಜಕೀಯ ಇಂತಹ ಕ್ಷೇತ್ರಗಳಲ್ಲಿ ಇರುವವರಿಗೆ ಹೆಚ್ಚು ಪ್ರಯೋಜನ ಸಿಗುತ್ತದೆ. ಈ ರಾಶಿಯವರಿಗೆ ವಿಶೇಷವಾದ ಪ್ರಯೋಜನಗಳೇ ಸಿಗುತ್ತದೆ.

ಧನು ರಾಶಿ :- ಶುಕ್ರನ ಸ್ಥಾನ ಬದಲಾವಣೆ ತುಲಾ ರಾಶಿಯವರಿಗೆ ಆದಾಯ ಹೆಚ್ಚಳ ಆಗುವ ಹಾಗೆ ಮಾಡುತ್ತದೆ. ವಿತ್ತೀಯ ಲಾಭದಿಂದ ಇವರ ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ. ಗ್ಲಾಮರ್, ಮೀಡಿಯಾ, ಫ್ಯಾಶನ್ ಡಿಸೈನಿಂಗ್ ಈ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಒಳ್ಳೆಯ ಪ್ರಯೋಜನ ಆಗುತ್ತದೆ, ಯಶಸ್ಸು ಸಿಗುತ್ತದೆ. ಹೂಡಿಕೆ ಮಾಡುವವರಿಗೆ ಇದು ಒಳ್ಳೆಯ ಸಮಯ ಆಗಿದೆ. ಈ ಸಮಯದಲ್ಲಿ ಅದೃಷ್ಟ ನಿಮ್ಮ ಜೊತೆಗಿರಲಿದೆ.

ಮಕರ ರಾಶಿ :- ತುಲಾ ರಾಶಿಗೆ ಶುಕ್ರನ ಆಗಮನದಿಂದ ಮಕರ ರಾಶಿಯವರಿಗೆ ಒಳ್ಳೆಯದಾಗುತ್ತದೆ. ಈ ರಾಶಿಯ ಜನರು ಜೀವನದಲ್ಲಿ ಎಲ್ಲಾ ಕೆಲಸಗಳಲ್ಲೂ ಯಶಸ್ಸು ಪಡೆಯುತ್ತಾರೆ. ಅದೃಷ್ಟದ ಪೂರ್ತಿ ಬೆಂಬಲ ನಿಮಗೆ ಸಿಗುತ್ತದೆ. ನಿಮಗೆ ಹೊಸ ಕೆಲಸ ಸಿಗಬಹುದು, ಈಗಾಗಲೇ ಕೆಲಸಕ್ಕೆ ಸೇರಿಕೊಂಡಿರುವವರಿಗೆ ಸಂಬಳ ಹೆಚ್ಚಾಗಬಹುದು. ಮನೆ ಅಥವಾ ಕಾರ್ ಖರೀದಿ ಮಾಡುವ ಯೋಗ ಇದೆ, ಹೂಡಿಕೆ ಮಾಡಲು ಇದು ಒಳ್ಳೆಯ ಸಮಯ ಆಗಿರಲಿದೆ. ಆಸ್ತಿಯ ವಿಚಾರದಲ್ಲಿ ದೊಡ್ಡ ಮಟ್ಟದಲ್ಲಿ ಲಾಭವಾಗುತ್ತದೆ.

Comments (0)
Add Comment