ಶುರುವಾಯಿತು ನಿಮ್ಮ ಅದೃಷ್ಟ: ಗುರುವಿನ ಸ್ಥಾನ ಪಲ್ಲಟ: ಪಂಚ ಮಹಾಪುರುಷ ಯೋಗದಿಂದ ಅದೃಷ್ಟ ಪಡೆಯುವ ರಾಶಿಗಳು ಯಾವ್ಯಾವು ಗೊತ್ತೇ??
ದೈವ ಗುರು ಎಂದೇ ಕರೆಯಲ್ಪಡುವ ಗುರುಗ್ರಹವು ಶೀಘ್ರದಲ್ಲೇ ಸ್ಥಾನ ಬದಲಾವಣೆ ಮಾಡಲಿದ್ದು, ಇದರಿಂದಾಗಿ ಗುರುದೇವನ ಕೃಪೆ ಕೆಲವು ರಾಶಿಗಳಿಗೆ ದೊರೆಯಲಿದೆ, ಆ ರಾಶಿಗಳು ಅದೃಷ್ಟವಂತರಾಗುತ್ತಾರೆ. ಗುರುದೇವನ ಕೃಪೆ ಪಡೆಯುವ ರಾಶಿಗಳು ಉದ್ಯೋಗದಲ್ಲಿ ಯಶಸ್ಸು ಮತ್ತು ಹೆಚ್ಚಿನ ಸಂಪತ್ತನ್ನು ಗಳಿಸುತ್ತಾರೆ. ಗುರುದೇವರ ಈ ಸ್ಥಾನ ಬದಲಾವಣೆ ಇಂದ ಮೂರು ರಾಶಿಗಳಿಗೆ ಬಂಪರ್ ಅದೃಷ್ಟ ಒಲಿದು ಬರುತ್ತದೆ. ಆ ಅದೃಷ್ಟ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ವೃಷಭ ರಾಶಿ :- ಗುರುದೇವನ ಸ್ಥಾನ ಬದಲಾವಣೆ ಇಂದ ವೃಷಭ ರಾಶಿಯವರಿಗೆ ಭಾರಿ ಲಾಭವಾಗುತ್ತದೆ, ಈ ರಾಶಿಯವರಿಗೆ ಆದಾಯದ ಹೆಚ್ಚು ಮೂಲಗಳು ತೆರೆದುಕೊಳ್ಳುತ್ತದೆ., ಇವರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಜೊತೆಗೆ ಆಸ್ತಿ ಮತ್ತು ವಾಹನ ಖರೀದಿ ಮಾಡುವ ಯೋಗ ಇದೆ. ಬ್ಯುಸಿನೆಸ್ ಮಾಡುತ್ತಿರುವವರು ಈ ಸಮಯದಲ್ಲಿ ಉತ್ತಮವಾದ ಲಾಭ ಗಳಿಸುತ್ತಾರೆ.
ಮಿಥುನ ರಾಶಿ :- ಗುರುದೇವನ ಸ್ಥಾನ ಬದಲಾವಣೆ ಇಂದ ಮಿಥುನ ರಾಶಿಯವರಿಗೆ ಹೊಸ ಕೆಲಸಕ್ಕೆ ಅವಕಾಶ ಸಿಗಬಹುದು, ಅದಾಗಲೇ ಕೆಲಸ ಮಾಡುತ್ತಿರುವವರಿಗೆ ಹೊಸ ಜವಾಬ್ದಾರಿ ಶುರುವಾಗುವ ಸೂಚನೆ ಇದೆ, ಜೊತೆಗೆ ಇನ್ಕ್ರಿಮೆಂಟ್ ಮತ್ತು ಬೋನಸ್ ಪಡೆಯುವ ಸಾಧ್ಯತೆ ಸಹ ಇದೆ. ಬ್ಯುಸಿನೆಸ್ ನಲ್ಲಿ ಲಾಭ ಆಗುವುದರಿಂದ ನೀವು ಹೊಸ ಬ್ಯುಸಿನೆಸ್ ಶುರು ಮಾಡಬಹುದು. ಕುಟುಂಬದಲ್ಲಿ ಒಗ್ಗಟ್ಟು ಇರುತ್ತದೆ. ನಿಮಗೆ ಮಾನಸಿಕ ಶಾಂತಿ ಸಿಗುತ್ತದೆ.
ಕರ್ಕಾಟಕ ರಾಶಿ :- ಗುರುವಿನ ಸಂಚಾರ ಈ ರಾಶಿಯವರಿಗೆ ಸಂಪೂರ್ಣವಾಗಿ ಅದೃಷ್ಟ ತಂದುಕೊಡುತ್ತದೆ. ಬ್ಯುಸಿನೆಸ್ ವಿಚಾರಕ್ಕೆ ಸಂಬಂಧಿಸಿದ ಹಾಗೆ, ಪ್ರಯಾಣ ಮಾಡಬೇಕಾಗಿ ಬರಬಹುದು, ಇದರಿಂದ ಲಾಭವಾಗುತ್ತದೆ. ಸ್ಫರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುತ್ತಿರುವವರಿಗೆ ಯಶಸ್ಸು ಸಿಗುತ್ತದೆ.