ಶುರುವಾಯಿತು ಲೆಕ್ಕಾಚಾರ: ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕಕ್ಕೆ ಬೇಡ, ಈತನನ್ನು ಆಡಿಸಿ ಎಂದ ಮಾಜಿ ಕ್ರಿಕೆಟಿಗ. ಯಾರು ಆಡಬೇಕಂತೆ ಗೊತ್ತೇ??

381

ಟಿ20 ವಿಶ್ವಕಪ್ ಭಾರತ ತಂಡ ಅಂತಿಮವಾಗಿದೆ, 15ಸದಸ್ಯರು ಹಾಗೂ 4 ಮೀಸಲು ಪ್ಲೇಯರ್ ಗಳ ಲಿಸ್ಟ್ ಅನ್ನು ಬಿಸಿಸಿಐ ಘೋಷಣೆ ಮಾಡಿದೆ. ಇನ್ನೇನು ಮುಂದಿನ ತಿಂಗಳು 16 ರಿಂದ ವಿಶ್ವಕಪ್ ಶುರುವಾಗಲಿದೆ. ಈ ಸಮಯದಲ್ಲಿ ಯಾವ ಆಟಗಾರ ಯಾವ ಕ್ರಮಾಂಕದಲ್ಲಿ ಆಡಬೇಕು ಎನ್ನುವ ಚರ್ಚೆ ಜೋರಾಗಿಯೇ ನಡೆಯುತ್ತಿದ್ದು, ಇದೀಗ ಭಾರತ ತಂಡದ ಮಾಜಿ ಆಟವಾರ ರೋಹನ್ ಗವಾಸ್ಕರ್ ಅವರು, ತಮ್ಮ ಮೆಚ್ಚಿನ ಆಟಗಾರ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕು ಎಂದು ಹೇಳಿಕೆ ನೀಡಿದ್ದಾರೆ..

ರೋಹನ್ ಅವರು ಹೇಳಿರುವುದು ಸೂರ್ಯಕುಮಾರ್ ಯಾದವ್ ಅವರ ಬಗ್ಗೆ, ವಿರಾಟ್ ಕೋಹ್ಲಿ ಅವರು ಓಪನರ್ ಆಗಿ ಬರಬೇಕು, ಸೂರ್ಯಕುಮಾರ್ ಯಾದವ್ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬರಬೇಕು ಎಂದು ಅಫ್ಘಾನಿಸ್ತಾನ್ ಪಂದ್ಯದಲ್ಲಿ ಕೋಹ್ಲಿ ಅವರು ಓಪನರ್ ಆಗಿ ಬಂದು ಸೆಂಚುರಿ ಭಾರಿಸಿದದ್ದನ್ನು ನೋಡಿರುವ ರೋಹನ್ ಹೇಳಿದ್ದಾರೆ. “ಏಷ್ಯಾಕಪ್ ನ ಕೊನೆಯ ಪಂದ್ಯದಲ್ಲಿ ವಿರಾಟ್ ಕೋಹ್ಲಿ ಅವರು ಓಪನರ್ ಆಗಿ ಬಂದು, 61 ಬಾಲ್ ಗಳಲ್ಲಿ 122 ರನ್ ಭಾರಿಸಿದರು. ಭಾರತ ತಂಡವು ವಿರಾಟ್ ಕೋಹ್ಲಿ ಅವರು ಖಾತೆ ತೆರೆಯಬೇಕು ಎಂದು ಬಯಸಿದರೆ. ವಿರಾಟ್ ಕೋಹ್ಲಿ ಅವರು ಓಪನರ್ ಆಗಿ ಬರಬೇಕು, ಇದು ಸೂರ್ಯಕುಮಾರ್ ಅವರಿಗೆ 3ನೇ ಕ್ರಮಾಂಕದಲ್ಲಿ ಆಡುವ ಅವಕಾಶ ನೀಡುತ್ತದೆ. ಇದು ಹೆಚ್ಚಿನ ಆಯ್ಕೆ ನೀಡುತ್ತದೆ. ವಿರಾಟ್ ಅವರು ಓಪನರ್ ಆಗಿ ಬಂದರೆ ಅದ್ಭುತವಾದ ಪ್ರದರ್ಶನ ನೀಡುತ್ತಾರೆ.

ಇದರ ಅರ್ಥ ಏನೆಂದರೆ ಸೂರ್ಯಕುಮಾರ್ ಯಾದವ್ ಅವರು 3ನೇ ಕ್ರಮಾಂಕದಲ್ಲಿ ಆಡಬೇಕು ಎಂದರೆ, ನನ್ನ ಮೆಚ್ಚಿನ ಮತ್ತೊಬ್ಬ ಆಟಗಾರ ದಾರಿ ಮಾಡಿಕೊಡಬೇಕು. ಅವರು ಕೆ.ಎಲ್.ರಾಹುಲ್. ಅವರು ಅದ್ಭುತವಾದ ಆಟಗಾರ. ಇದು ಬಹಳ ಟ್ರಿಕಿ ಆಗಿರುವ ಸಂದರ್ಭ ಆಗಿದೆ. ಸೂರ್ಯಕುಮಾರ್ ಯಾದವ್ ಅವರು 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕು ಎಂದರೆ, ಕೆ.ಎಲ್.ರಾಹುಲ್ ಅವರ ಸ್ಥಾನ ಹಿಂದಕ್ಕೆ ಹೋಗಬೇಕು ಅಥವಾ ಅವರು ಪ್ಲೇಯಿಂಗ್ 11 ಇಂದ ಹೊರಗುಳಿಯಬೇಕು. ಸೂರ್ಯಕುಮಾರ್ ಯಾದವ್ ಅತ್ಯುತ್ತಮ ಬ್ಯಾಟ್ಸ್ಮನ್ ಗಳಲ್ಲಿ ಒಬ್ಬರು..” ಎಂದು ರೋಹನ್ ಗವಾಸ್ಕರ್ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Leave A Reply

Your email address will not be published.