ಶೂ ಪೋಲಿಷ್ ಮಾಡುವಾತ ದುಡಿಯುತ್ತಿದ್ದಾನೆ ನಮಗಿಂತ ಹೆಚ್ಚು. ಈತನ ಆದಾಯ ಎಷ್ಟು ಗೊತ್ತೇ?

422

ಜೀವನದಲ್ಲಿ ಎಲ್ಲರೂ ಬದುಕಲು ಒಂದು ಕೆಲಸವನ್ನು ಮಾಡಿಯೇ ಮಾಡುತ್ತಾರೆ. ಒಳ್ಳೆಯ ಕೆಲಸ ಸಿಗಬೇಕು ಎಂದು ಹಗಲು ರಾತ್ರಿ ಓದಿ ಉತ್ತಮ ಕೆಲಸ ಹುಡುಕುವ ಜನರು ಇದ್ದಾರೆ. ಅದೇ ರೀತಿಯಲ್ಲಿ ಜೀವನದಲ್ಲಿ ಬಂದದ್ದು ಎದುರಿಸಿ ಸಿಕ್ಕಿದ ಕೆಲಸ ಮಾಡಿ ಜೀವನ ನಡೆಸುವ ಜನರು ಕೂಡ ಇದ್ದಾರೆ. ಜೀವನದಲ್ಲಿ ಯಾವುದೇ ಕೆಲಸ ಆಗಲಿ ಸಣ್ಣದು ಅಥವಾ ದೊಡ್ಡದು ಎಂದಿಲ್ಲ. ಹಾಗೇನಾದರೂ ಇದ್ದರೆ ಅದು ನಮ್ಮ ಮನಸ್ಸು ಮಾತ್ರ. ಹೌದು ಯಾಕಂದರೆ ಅಂತಹ ಸಂಕುಚಿತ ಮನೋಭಾವ ಇಂತಹ ವಿಚಾರಗಳನ್ನು ಮನಸಿಗೆ ಕೊಡುತ್ತದೆ. ಮಾಡುವ ಕೆಲಸ ಯಾವುದೇ ಆಗಲಿ ಅದಕ್ಕೆ ಬೆಲೆ ಇದೆ. ಒಂದು ಚಕ್ರದಲ್ಲಿ ಅವನ ಕೆಲಸಕ್ಕೂ ಮಹತ್ವ ಇದ್ದೆ ಇದೆ. ಹೀಗೆ ಒಬ್ಬ ವ್ಯಕ್ತಿಯ ಬಗೆಗೆ ನಾವಿಂದು ತಿಳಿಯೋಣ.

ಇವರ ಹೆಸರು ಡಾನ್ ವಾರ್ಡ್ ಇವರು ಅಮೆರಿಕಾದಲ್ಲಿ ಬೆಳೆಸುತ್ತಿದ್ದಾರೆ. ಇವರು ಎಲ್ಲಾ ರೀತಿಯಲ್ಲೂ ಪ್ರಯತ್ನಗಳನ್ನು ಮಾಡಿ ಕೊನೆಗೆ ಯಾವುದೇ ದಾರಿ ತೋಚದೇ ಬ ಶೂ ಪಾಲಿಶ್ ಮಾಡುವ ಕೆಲಸ ಆರಂಭಿಸಿದರು. ಇವರು ಎಷ್ಟು ದೊಡ್ಡ ವಾಗ್ಮಿ ಎಂದರೆ ಉತ್ತಮವಾಗಿ ಮಾತನಾಡುತ್ತಾರೆ ಮತ್ತು ಅಷ್ಟೇ ಉತ್ತಮವಾಗಿ ಕಾಮಿಡಿ ಕೂಡ ಮಾಡುತ್ತಾರೆ. ಎಲ್ಲಾ ಜನರು ಇವರನ್ನು ಹುಡುಕಿ ಕೊಂಡು ಬರುತ್ತಾರೆ.

ಹೌದು ಯಾಕಂದರೆ ಅವರ ವ್ಯಕ್ತಿತ್ವ ಮತ್ತು ಅವರು ನೀಡುವ ಸೇವೆ ಅಂತಹುದು. ಇವರು ಶೂ ಪಾಲಿಶ್ ಮಾಡಿಯೇ ಪ್ರತಿ ತಿಂಗಳು 18 ಲಕ್ಷಕ್ಕೂ ಹೆಚ್ಚು ಹಣ ಸಂಪಾದಿಸುತ್ತಾರೆ. ಅಚ್ಚರಿ ಎನಿಸಿದರೂ ಸತ್ಯ . ಇವರನ್ನು ಹುಡುಕಿ ಕೊಂಡು ಬರುವ ಜನರೇ ಅತೀ ಹೆಚ್ಚು. ಖುಷಿಯಿಂದ ಅವರ ದರಕ್ಕಿಂತ ಹೆಚ್ಚಿನ ಕೊಟ್ಟು ಹೋಗುತ್ತಾರೆ. ಇಷ್ಟೊಂದು ದೊಡ್ಡ ಸಂಬಳ ಕೆಲವರಿಗೆ ಒಂದು ವರ್ಷದ ಒಟ್ಟು ಕೂಡ ಸಿಗುವುದಿಲ್ಲ ಅಂತಹದರಲ್ಲಿ ಒಂದು ತಿಂಗಳಲ್ಲಿ ಇಷ್ಟು ಸಂಪಾದಿಸುತ್ತಾರೆ ಎಂದರೆ ಕೆಲಸ ಯಾವುದೇ ಇರಲಿ ಭೇದಭಾವ ಮಾಡಬಾರದು ಎಂಬುದಕ್ಕೆ ನೈಜ ನಿದರ್ಶನ ಇದು.

Leave A Reply

Your email address will not be published.