ಶ್ರೀ ಕೃಷ್ಣ ಮಾನವ ಜನ್ಮದಲ್ಲಿ ಹುಟ್ಟಿ ಇಂದಿಗೆ ಎಷ್ಟು ವರ್ಷ ಆಗಿದೆ? ಈ ಕುತೂಹಲಕಾರಿ ವಿಷಯ ಪ್ರತಿಯೊಬ್ಬ ಹಿಂದೂ ತಿಳಿಯಲೇ ಬೇಕು?
यदा यदा हि धर्मस्य ग्लानिर्भवति भारत।
अभ्युत्थानमधर्मस्य तदात्मानं सृजाम्यहम् ॥४-७॥
परित्राणाय साधूनां विनाशाय च दुष्कृताम् ।
धर्मसंस्थापनार्थाय सम्भवामि युगे युगे ॥४-८॥
ಯಾವಗೆಲ್ಲ ಭೂಮಿಯಲ್ಲಿ ಅಧರ್ಮ ತಾಂಡವ ಆಡಿ ಧರ್ಮ ಸಂಕಟದಲ್ಲಿ ಸಿಲುಕುತ್ತದೋ ಆಗೆಲ್ಲ ಪರಮಾತ್ಮ ರೂಪ ಧರಿಸಿ ಬಂದು ಧರ್ಮವನ್ನು ಕಾಪಾಡುತ್ತಾನೆ ಎಂದು ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳುತ್ತಾನೆ.
ಮಹರ್ಷಿ ವೇದವ್ಯಾಸರಿಂದ ಶ್ರೀಮದ್ ಭಾಗವತದಲ್ಲಿ ಉಲ್ಲೇಖಿಸಲಾಗಿರುವಂತೆ ಜನ್ಮ ದಿನಾಂಕ ಮತ್ತು ಸಮಯ, ಹುಟ್ಟಿದ ದಿನಾಂಕ: ಜುಲೈ 17/18 3228 (ಕ್ರಿ.ಪೂ.) ದಿನ: ಬುಧವಾರ ಸಮಯ : ಮಧ್ಯರಾತ್ರಿ 00:00 ಘಂಟೆ. ಭಾದ್ರಪದ ಮಾಸದ, ಕೃಷ್ಣ ಪಕ್ಷ ಅಷ್ಟಮಿ ಜನ್ಮ ನಕ್ಷತ್ರ ದಲ್ಲಿ ಮಥುರನಲ್ಲಿ ಜನಿಸಿದರು. ಶ್ರೀ ಕೃಷ್ಣ ಪರಮಾತ್ಮ ಜನಿಸಿದಾಗ, ತಂದೆ ತಾಯಿಯರಿಬ್ಬರೂ ಜೈಲಿನಲ್ಲಿ ತನ್ನ ಮಾವ ಕಂಸನಿಂದ ಬಂಧಿಸಲ್ಪತ್ತಿದ್ದರು. ಕಂಸನು ಮಥುರಾದಲ್ಲಿ ನಿರಂಕುಶ ಆಡಳಿತ ನಡೆಸುತ್ತಾ ತನ್ನ ಅಳಿಯನಿಂದಲೇ ತನ್ನ ಮರಣ ಎಂದು ತಿಳಿದಾಗ ತನ್ನ ತಂಗಿಯನ್ನು ಸೆರೆಮನೆಯಲ್ಲಿ ಬಂಧಿ ಮಾಡಿದ್ದ.
ಶ್ರೀ ಕೃಷ್ಣನು ದ್ವಾಪರಯುಗದ ಅಂತ್ಯದಲ್ಲಿ ಜನಿಸಿದನು ತನ್ನ ಮಾನವ ದೇಹದಲ್ಲಿ 126 ವರ್ಷಗಳು, 8 ತಿಂಗಳು ಮತ್ತು 7 ದಿನಗಳವರೆಗೆ ಜೀವಿಸಿದ್ದರು. ಅವರು ಸುಮಾರು 5250 ವರ್ಷಗಳ ಹಿಂದೆ ಮಾನವ ರೂಪದಲ್ಲಿ ಜನಿಸಿ ಧರ್ಮ ರಕ್ಷಣೆಯ ಕಾರ್ಯ ಮಾಡಿದ್ದರು ಎಂಬುವುದು ನಮಗೆಲ್ಲಾ ತಿಳಿದ ವಿಷಯ. ಇಂದು ನಾವೆಲ್ಲರೂ ಶ್ರೀ ಕೃಷ್ಣ ಪರಮಾತ್ಮನ ಬಗ್ಗೆ ಇಷ್ಟೆಲ್ಲ ತಿಳಿದುಕೊಂಡೆವು. ನಮ್ಮ ಎಲ್ಲಾ ಹಿಂದೂ ಬಾಂಧವರಿಗೂ ಇದನ್ನು ತಿಳಿಸೋಣ. ನಿಮ್ಮ ಪರಿಚಯದ ಒಬ್ಬರಿಗೆ ಇದನ್ನು ಶೇರ್ ಮಾಡಿ ಹಿಂದೂ ಧರ್ಮದ ಅರಿವಿಕೆಯ ಕಾರ್ಯ ಮಾಡಿ. ಎಲ್ಲರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು.
*ವಸುದೇವ ಸುತಂ ದೇವಂ ಕಂಸ ಚಾರೂಣ ಮರ್ದನಂ..
*ದೇವಕಿ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ..🌟