ಶ್ರೇಷ್ಠ ಭಕ್ತನ ನಡುವಳಿಕೆ ಬಗ್ಗೆ ಭಗವಂತನ ಮಾತುಗಳು. ಪ್ರತಿಯೊಬ್ಬರೂ ಓದಲೇಬೇಕಾದ ಲೇಖನ.
ಅರ್ಜುನ ಭಯ, ಆಸಕ್ತಿ, ಕೋಪಗಳಿಂದ ಮುಕ್ತರಾಗಿ ಅನೇಕರು ನನ್ನಲ್ಲಿ ಸಂಪೂರ್ಣವಾಗಿ ಆಶ್ರಯಪಡೆದು ಜ್ಞಾನದ ತಪಸ್ಸಿನಿಂದ ಪರಿಶುದ್ಧರಾಗಿ ನನ್ನಲ್ಲಿ ದಿವ್ಯ ಪ್ರೇಮವನ್ನು ಪಡೆದಿದ್ದಾರೆ.ಆಸಕ್ತಿ,ಭಯ,ಕೋಧಗಳಿಂದ ಪಾರಾಗಿ,ನನ್ನಲ್ಲಿ ಮನಸ್ಸುಳ್ಳವರಾಗಿ,ನನ್ನನ್ನೇ ಆಶ್ರಯಿಸಿ ಅನೇಕರು ಜ್ಞಾನರೂಪವಾದ ತಪಸ್ಸಿನಿಂದ ಪವಿತ್ರರಾಗಿ ನನ್ನ ಭಾವವನ್ನು ಹೊಂದುತ್ತಾರೆ. ಅರ್ಜುನ ನಮ್ಮನ್ನು ಪ್ರಪಂಚಕ್ಕೆ ಕಟ್ಟಿಹಾಕಿರುವ ಗೂಟಗಳೇ ಆಸಕ್ತಿ, ಭಯ ಮತ್ತು ಕ್ರೋಧ ಇವುಗಳು. ಯಾವಾಗ ಒಬ್ಬ ಭಗವಂತನ ಕಡೆ ಮನಸ್ಸನ್ನು ಹರಿಸುತ್ತಾನೋ ಅವನು ಇವುಗಳಿಂದ ಪಾರಾಗುತ್ತಾನೆ. ಒಂದನ್ನು ಪಡೆಯಬೇಕಾದರೆ ನಾವು ಮತ್ತೊಂದನ್ನು ತ್ಯಜಿಸಬೇಕು. ಎರಡನ್ನು ಏಕಕಾಲದಲ್ಲಿ ಇಟ್ಟುಕೊಂಡಿರುವುದಕ್ಕಾಗುವುದಿಲ್ಲ. ಪ್ರಪಂಚದ ಮೇಲೆ ಆಸಕ್ತರಾಗಿದ್ದರೆ ದೇವರ ಕಡೆಗೆ ಹೋಗಲು ಆಗುವುದಿಲ್ಲ. ದೇವರ ಮೇಲೆ ಆಸಕ್ತರಾಗಿದ್ದರೆ ಪ್ರಪಂಚದ ಮೇಲೆ ಆಸಕ್ತರಾಗಿರುವುದಕ್ಕಾಗುವುದಿಲ್ಲ.ಇದನ್ನು ಅರ್ಥಮಾಡಿಕೋ ಅರ್ಜುನ.
ಅರ್ಜುನ ನಾಲ್ಕು ಜನ ಮದ್ಯವನ್ನು ಚೆನ್ನಾಗಿ ಕುಡಿದು ಒಂದು ಹುಣ್ಣಿಮೆಯ ದಿನ ದೋಣಿಯ ಮೇಲೆ ನೌಕಾ ವಿಹಾರಕ್ಕೆ ಹೊರಟರು . ದೋಣಿಯೊಳಗೆ ಕುಳಿತು ಬೆವರು ಸುರಿಯುವತನ ಕೋಲಿನಿಂದ ಅದನ್ನು ನಡೆಸುತ್ತಿದ್ದರು. ಬಹಳ ಹೊತ್ತಾದ ಮೇಲೆ ನೋಡುತ್ತಾರೆ, ದೋಣಿ ಇದ್ದಕಡೆಯೇ ಇದೆ. ಸ್ವಲ್ಪವೂ ಮುಂದಕ್ಕೆ ಹೋಗಿರಲಿಲ್ಲ. ಇದು ಏತಕ್ಕೋ ಹೀಗೆ ಎಂದು ನೋಡಲಾಗಿ ದೋಣಿಯನ್ನು ತೀರದ ಗೂಟಕ್ಕೆ ಕಟ್ಟಿದ್ದ ಹಗ್ಗವನ್ನು ಬಿಚ್ಚದೆ ಇವರು ದೋಣಿ ನಡೆಸುತ್ತಿದ್ದುದೇ ಇದಕ್ಕೆ ಕಾರಣ ಎಂದು ಆಮೇಲೆ ಗೊತ್ತಾಯಿತು . ಆದ್ದರಿಂದ ನೀವು ಮೊದಲು ಪ್ರಪಂಚದ ಮೇಲೆ ಆಸಕ್ತಿಯನು ತ್ಯಜಿಸಬೇಕು . ಆಗಲೇ ನನ್ನ ಕಡೆಗೆ ನೀವು ಬರಲು ಸಾಧ್ಯ. ಇಲ್ಲಿ ನಿಮ್ಮನ್ನು ಸಂಸಾರಕ್ಕೆ ಬಿಗಿದಿರುವ ಗೂಟವೇ ಭಯ ತರಿಸುವುದು ಯಾವ ಸಮಯದಲ್ಲಿ ಏನಾಗುವುದೋ ಎಂಬ ಕಳವಳ, ಯಾವಾಗ ನಾವು ಪ್ರಿಯವಾಗಿರುವ ವಸ್ತುವಿಗೆ ಅಂಟಿಕೊಂಡಿರುತ್ತೇವೋ ಆಗ ಪ್ರಿಯವಾದ ವಸ್ತುವಿಗೆ ಏನಾದರೂ ಆಗಿಬಿಟ್ಟರೆ ಏನು ಗತಿ ಎಂದು ಆಗುವುದರ ಮುಂಚಿನಿಂದಲೇ ಅದನ್ನು ಮನನ ಮಾಡುತ್ತಿರುತ್ತೀರಿ!
ಅಪ್ರಿಯವಾಗಿರುವುದು ನಮಗೆ ಬಂದು ಬಿಟ್ಟರೆ ಏನು ಗತಿ, ಯಾವುದೋ ಗುಣಪಡಿಸಲಾಗದ ಖಾಯಿಲೆ , ಅಪಕೀರ್ತಿ, ಕಷ್ಟ ಇವುಗಳು ಬಂದರೆ ಏನು ಮಾಡುವುದು ಎಂದು ಅನವರತ ಚಿಂತಿಸುತ್ತಿರುತ್ತೀರಿ! ಈ ಭಯ ಯಾರನ್ನೂ ಬಿಟ್ಟಿಲ್ಲ ಶ್ರೀಮಂತ ನಾಗಿರಲಿ, ಬಡವನಾಗಿರಲಿ ಪಂಡಿತನಾಗಿರಲಿ, ಪಾಮರನಾಗಿರಲಿ, ಆಳಾಗಿರಲಿ, ಅರಸಾಗಿರಲಿ, ಈ ಭಯ ಕಾಡುತ್ತಿರುವುದು ಇದಕ್ಕೆ ಅಂಜುವವನು ದೇವರ ಕಡೆ ಹೋಗಲಾರ, ದೇವರ ಕಡೆಗೆ ಹೊರಟ ಯಾತ್ರಿಕನಲ್ಲಿ ನೋಡು ಅರ್ಜುನ ಒಂದು ಗುಣವ ನಿರ್ಭಯ. ಅವನು ಯಾರಿಗೂ ಅಂಜುವುದಿಲ್ಲ, ಯಾವು ದನ್ನೂ ಲಕ್ಷಿಸುವುದಿಲ್ಲ ಅಂಜಿಕೆಗೆ ಅಂಜಿಕೆಯನ್ನು ತರುವ ಭಗವಂತ ನನ್ನು ಅವನು ಕೈಹಿಡಿದಿರುವನು. ಈ ಸಂಸಾರ ನಾಯಿ ನರಿಗಳ ಕೂಗಿಗೆ ಅವನು ಅಂಜುವವನಲ್ಲ ಅವನು ಅದರಂತೆಯೇ ಅವನು ಕ್ರೋಧ ದಿಂದ ಪಾರಾಗಿರುವನು.
ಯಾವಾಗ ನಮ್ಮಲ್ಲಿ ಕ್ರೋಧ ಬರುವುದೂ ಆಗ ನೀವು ಕರ್ತವ್ಯ ಮೂಢ ರಾಗುತ್ತೀರಿ, ಮಾಡಬಾರದ ಕೆಲಸವನ್ನು ಮಾಡುತ್ತೀರಿ! ಆಡಬಾರದ ಮಾತನು ಆಡುತ್ತೀರಿ ಈ ನಿಮ್ಮ ಕೆಲಸದಿಂದ ಮುಂದೆ ನಮಗೇನಾ ಗುವುದು ಎಂಬುದನ್ನು ಕೂಡ ನೀವು ಚಿಂತಿಸುವುದಿಲ್ಲ. ನಿಮ್ಮಲ್ಲಿ ಲೌಕಿಕ ಬಯಕೆಗಳಿದ್ದರೆ ನಿಮಗೂ ಆ ಬಯಕೆಯನ್ನು ಈಡೇರಿಸಿಕೊಳು ವುದಕ್ಕೂ ಮಧ್ಯದಲ್ಲಿ ಆತಂಕಗಳು ಬಂದರೆ ನಿಮಗೆ ಅವುಗಳ ಮೇಲೆ ಕೋಪ ಬರುವುದು .ಆದರೆ ನನ್ನ ಶ್ರೇಷ್ಠ ಭಕ್ತನಾದವನಿಗೆ ಲೋಕದ ಬಯಕೆಗಳೇ ಇಲ್ಲ . ನಾನು ಅವನಿಗೆ ಯಾವುದನ್ನಾದರೂ ಕೊಡಲಿ , ಯಾವುದನ್ನಾದರೂ ಕಿತ್ತುಕೊಂಡು ಬಿಡಲಿ ಅವುಗಳ ಹಿಂದೆಲ್ಲ ನನ್ನ ಆಟವನ್ನು ನೋಡುವನು. ಕೊಟ್ಟರೆ ಕುಣಿದಾಡುವುದಿಲ್ಲ, ಕಿತ್ತುಕೊಂಡರೆ ಒದ್ದಾಡುವುದಿಲ್ಲ. ಧನ್ಯವಾಗಲಿ ನನ್ನ ನಾಮ ಎನ್ನುವನು ಈ ಎರಡು ಸಮಯಗಳಲ್ಲಿಯೂ ನನ್ನ ಮೇಲೆಯೇ ತನ್ನ ಮನಸ್ಸನ್ನಲ್ಲಾ ಇಟ್ಟಿರುವನು,
ಅರ್ಜುನ ಒಂದು ನೀರಿಗೆ ಬಟ್ಟೆಯನ್ನು ಅದ್ದಿದರೆ ಅದು ಎಲ್ಲಾ ರಂಧ್ರಗಳಿಂದಲೂ ನೀರನ್ನು ಹೇಗೆ ಹೀರಿಕೊಳ್ಳುವುದೋ ಹಾಗೆ ಭಗವಂತ ನನ್ನು ಹೀರಿಕೊಂಡು ತುಂಬಿಕೊಂಡಿರುವನು. ಅವನ ಮನಸ್ಸೆಲ್ಲಾ ಯಾವಾಗಲೂ ದೇವರ ಕಡೆಯೇ ಹರಿಯುತ್ತಿರುವುದು. ನದಿ ಎಡೆಬಿಡದೆ ಹಗಲು ರಾತ್ರಿ ಸಾಗರದ ಕಡೆ ಹೇಗೆ ಹರಿಯುತ್ತಿ ರುವುದೋ ಹಾಗೆ ಅವನ ಮನಸ್ಸು ಸದಾ ದೇವರ ಕಡೆ ಹರಿಯುತ್ತಿರುವುದು ,ಉತ್ತರಮುಖಿ ಯಾವಾಗಲೂ ಉತ್ತರ ದಿಕ್ಕನ್ನೇ ತೋರುತ್ತಿರುತ್ತದೆ, ಅದನ್ನು ಎಷ್ಟೇ ತಲೆಕೆಳಗು ಮಾಡಲಿ, ಯಾವ ದಿಕ್ಕಿಗೆ ಹಿಡಿದರೂ , ಅದು ಮಾತ್ರ ಉತ್ತರವನ್ನೇ ತೋರುತ್ತದೆ. ಅದರಂತೆಯೇ ಭಕ್ತನ ಮನಸ್ಸು , ಅವನಿಗೆ ಯಾವ ಬಡತನ ಬರಲಿ, ಕಷ್ಟ ಬರಲಿ, ರೋಗ ರುಜಿನ ಬರಲಿ , ಇದರಿಂದ ಪಾರುಮಾಡು ಎಂದು ಕೇಳುವುದಿಲ್ಲ ಇವುಗಳೆಲ್ಲಾ ನಮ್ಮ ಕರ್ಮಾನುಸಾರ ಪ್ರಾಪ್ತವಾಗುವುವು. ಆದರೆ ನನ್ನ ಮನಸ್ಸು ಮಾತ್ರ ದೇವರ ಕಡೆಗೆ ಅನುಗಾಲವೂ ಹರಿಯಲಿ ಎಂದು ಬೇಡುವನು. ಭಕ್ತ ನನ್ನನ್ನೇ ಆಶ್ರಯಿಸಿರುವನು .
ಈ ಪ್ರಪಂಚದಲ್ಲಿ ನಿಮಗೆಲ್ಲರಿಗೂ ಒಂದು ಅಶ್ರಯಸ್ಥಾನವಿದೆ ಯಾರಾ ದರೂ ನಿಮ್ಮನ್ನು ಅಟ್ಟಿಸಿಕೊಂಡು ಬಂದರೆ, ನೀವು ಆಶ್ರಯದ ಬಿಲದ ಕಡೆಗೆ ಹೋಗುವಿರಿ. ಕಷ್ಟಕಾಲಕ್ಕಾಗಲಿ ಎಂದು ದುಡ್ಡು ಕೂಡಿಡುವಿರಿ, ನೆಂಟರಿಷ್ಟರನ್ನು ಮಾಡಿಕೊಂಡಿರುವಿರಿ. ಆದರೆ ಭಕ್ತನ ಏಕಮಾತ್ರ ಆಶ್ರಯವೇ ನನ್ನ ಪಾದಪದ್ಮಗಳು, ಸಂಸಾರದ ಉರಿಬಿಸಿಲಿನ ತಾಪ ದಿಂದ ಅವನಿಗೆ ಆಶ್ರಯವನ್ನು ನೀಡುವುದೇ ನನ್ನ ವಟವೃಕ್ಷ. ಶ್ರೇಷ್ಠ ಭಕ್ತನಾದವನಿಗೆ ಇದಲ್ಲದೆ ಇನ್ನಾವುದೂ ಬೇಕಾಗುವುದಿಲ್ಲ. ಕೀಟ ಒಂದು ಗೂಡಿನಲ್ಲಿ ಭ್ರಮರವನ್ನು ಚಿಂತಿಸುತ್ತ ಚಿಂತಿಸುತ್ತ ಕೊನೆಗೆ ಕೀಟತ್ವವನ್ನು ತ್ಯಜಿಸಿ ಭ್ರಮರವಾಗಿ ಹೊರಬರು ವುದು. ಒಂದು ದೊಡ್ಡ ಅಗ್ನಿಕುಂಡದ ಮಧ್ಯದಲ್ಲಿ ಒಂದು ಕಪ್ಪು ಇದ್ದಿಲನ್ನು ಎಸೆದರೆ ಕ್ರಮೇಣ ಅದೂ ಕೂಡ ಧಗಧಗಿಸುತ್ತಿರುವ ಕೆಂಡವಾಗುವುದು , ಅದರಂತೆಯೇ ಭಕ್ತ ಅವನನ್ನು ಚಿಂತಿಸುತ್ತ ಅವನ ಭಾವವನ್ನು ಪಡೆಯುತ್ತಾನೆ. ನದಿಯೊಂದು ಸಾಗರಕ್ಕೆ ಸೇರಿದರೆ, ತನ್ನ ನಾಮರೂಪಗಳನ್ನು ಕಳೆದುಕೊಂಡು ಸಾಗರದಲ್ಲಿ ಒಂದಾಗಿ, ಸಾಗರದ ಧರ್ಮವನ್ನು ಪಡೆಯುವುದು .ಭಕ್ತನ ಜೀವ ನದಿಯೂ ಹೀಗೆಯೇ. ಸಂಸಾರದ ಮಾರ್ಗದಲ್ಲಿ ಹರಿದು ದೇವರನ್ನು ಸೇರಿ ಅವನಲ್ಲಿ ಒಂದಾಗುವುದು.
ಯಾರು ಹೇಗೆ ನನ್ನಲ್ಲಿ ಶರಣು ಹೊಂದುವರೋ ಹಾಗೆಯೇ ಅವರಿಗೆ ಪ್ರತಿಫಲ ನೀಡುತ್ತೇನೆ. ಪಾರ್ಥ! ಎಲ್ಲರೂ ಸಕಲ ವಿಧಗಳಲ್ಲಿಯೂ ನನ್ನ ದಾರಿಯನ್ನು ಅನುಸರಿಸುತ್ತಾರೆ ಅರ್ಜುನ ಧರ್ಮದ ಮೂಲಕ ಹೇಳಬೇಕೆಂದರೆ ಒಬ್ಬ ಹಿಂದೂವಿನಂತೆ ಆ ಪರಮ ಭಕ್ತನಾಗಿ ಅವನು ನನ್ನ ಕಡೆಗೆ ಬರಬಹುದು ,
ನೀವೆಲ್ಲರೂ ಪೋಸ್ಟಿನ ಪೆಟ್ಟಿಗೆಗೆ ಕಾಗದ ಹಾಕುವಿರಿ. ಸರ್ಕಾರದ ಅಂಚೆಯವನು ಅದನ್ನು ತೆಗೆದುಕೊಂಡು ಎಲ್ಲಿಗೆ ಕಳುಹಿಸಬೇಕೊ ಅಲ್ಲಿಗೆ ಕಳುಹಿಸುವನು. ಇದರಂತೆಯೇ ಬೇರೆ ಬೇರೆ ದೇವತೆಗಳೆಲ್ಲ ಒಂದೇ ಭಗವಂತನ ಬೇರೆ ಬೇರೆ ಪೋಸ್ಟ್ ಪಟ್ಟಿಗೆಗಳು ಇರುವಂತೆ, ನನ್ನ ಬಳಿಗೆ ಮಹಮ್ಮದೀಯ ಅಥವಾ ಕ್ರಿಸ್ತನಂತೆ ಬರಬಹುದು. ಒಬ್ಬ ಆ ಸತ್ಯವನ್ನು ಒಂದು ಸ್ಥಿತಿ, ಅದು ಒಂದು ವ್ಯಕ್ತಿಯಲ್ಲ ಎನ್ನಬಹುದು . ಅಂತೂ ಯಾವ ಹೆಸರಿನಿಂದಲಾದರೂ ಬರಲಿ, ಹೇಗಾದರೂ ಬರಲಿ , ಇವರೆಲ್ಲ ನನ್ನೆಡೆಗೆ ಹೊರಟಿರುವವರು ಎನ್ನುವನು ನಮ್ಮ ಕೃಷ್ಣ, ಅರ್ಜುನ ಇಲ್ಲಿ ನೀವು ಹೊರಟ ಸ್ಥಳಗಳು ಬೇರೆ ಬೇರೆ, ಆದರೆ ತಲಪುವ ಸ್ಥಳಗಳೆಲ್ಲ ಒಂದೇ. – Krishnasakha