ಸಂಸದನಾಗಿದ್ದರು ಕೂಡ ಐಪಿಎಲ್ ಅಲ್ಲಿ ದುಡಿಯುತ್ತಿರುವುದಕ್ಕೆ ಗೇಲಿ ಮಾಡಿದ ಎಲ್ಲರಿಗೂ ಖಡಕ್ ಉತ್ತರ ನೀಡಿದ ಗಂಭೀರ್. ಇವರ ಈ ಕೆಲಸ ನೋಡಿದರೆ ನೀವು ಕೂಡ ಇವರನ್ನು ಮೆಚ್ಚುತ್ತಿರ.

241

ಗೌತಮ್ ಗಂಭೀರ್ ಯಾರಿಗೆ ಗೊತ್ತಿಲ್ಲ ಹೇಳಿ ನಮ್ಮ ಬಾಲ್ಯದಲ್ಲಿ ಇವರು ಹಾಗು ವೀರೇಂದ್ರ ಸೆಹ್ವಾಗ್ ಅವರ ಆಟಗಳನ್ನು ನೋಡುವುದೇ ನಮಗೊಂದು ಹಬ್ಬ. ಅದಲ್ಲದೆ ೨೦೧೧ ರಲ್ಲಿ ವಿಶ್ವಕಪ್ ಗೆಲ್ಲುವಲ್ಲಿ ಗೌತಮ್ ಗಂಭೀರ್ ಅವರ ಪಾತ್ರ ಬಹಳಷ್ಟಿದೆ. ಧೋನಿ ಅವರಿಗೆ ಹೋಲಿಸಿದರೆ ಇವರ ಪಾತ್ರ ಮಹತ್ವದ್ದು ಅನಿಸುತ್ತದೆ. ಇವರಿಗೆ ವಿಶ್ವಕಪ್ ಗೆದ್ದಾಗ ಸಿಗಬೇಕಾದ ಗೌರವ ಸಿಕ್ಕಿರಲಿಲ್ಲ ಎನ್ನುವುದು ಸ್ವಲ್ಪ ದುಃಖದ ಸಂಗತಿ. ಇದೀಗ ಇವರು ಲೂಕ್ನೋ ತಂಡದ ಮುಖ್ಯ ತರಬೇತು ಗಾರರಾಗಿದ್ದರೆ.

ಇವರು ಇಂಡಿಯನ್ ಪ್ರೀಮಿಯರ್ ಲೀಗ್ ಅಲ್ಲಿ ತರಬೇತುದಾರರಾಗಿ ದುಡಿಯುತ್ತಿದ್ದಾರೆ. ಇವರ ಅನುಭವದಿಂದಾಗಿ ಹೊಸದಾಗಿ ಈ ಬರಿ ಆಯ್ಕೆಗೊಂಡ ಲೂಕ್ನೋ ತಂಡ ಪ್ಲೇ ಆಫ್ ತನಕ ಬಂದಿದೆ. ಇದು ದೊಡ್ಡ ಸಾಧನೆ ಅಂದರೆ ತಪ್ಪಾಗಲಾರದು. ಇನ್ನು ಇವರು ಲೂಕ್ನೋ ತಂಡದ ಮಾರ್ಗದರ್ಶಕರಲ್ಲದೆ ದೆಹಲಿಯ ಸಂಸದರು ಕೂಡ ಆಗಿದ್ದಾರೆ. ಬಿಜೆಪಿ ಪಕ್ಷದ ಮೂಲಕ ಸ್ಪರ್ದಿಸಿ ಸಂಸತ್ತಿನಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಇವರು ಸಂಸದರಾಗಿದ್ದರು ಕೂಡ ಐಪಿಎಲ್ ಅಲ್ಲಿ ಹಣಕೋಸ್ಕರ ದುಡಿಯುತ್ತಾರೆ ಎಂದು ಅನೇಕರು ಸಾಮಾಜಿಕ ಜಾಲತಾಣದಲ್ಲಿ ಟ್ರೊಲ್ ಮಾಡಿದ್ದಾರೆ.

ಇದಕ್ಕೆ ಪ್ರತ್ಯುತ್ತರವಾಗಿ ಗೌತಮ್ ಗಂಭೀರ್ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ್ದಾರೆ. ಇದು ಟೀಕಾಕಾರರನ್ನು ಬಾಯಿ ಮುಚ್ಚಿಸಿದ್ದಲ್ಲದೆ ಜನರಲ್ಲಿ ಇವರ ಬಗ್ಗೆ ಉತ್ತಮ ಭಾವನೆ ಕೂಡ ಮೂಡುವಂತೆ ಮಾಡಿದೆ. ಇವರ ಈ ಕಾರ್ಯಕ್ಕೆ ಎಲ್ಲ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಟ್ರೊಲ್ ಮಾಡುವವರಿಗೆ ಉತ್ತರಿಸುತ್ತಾ ಗಂಭೀರ್ ಅವರು ತಾನು ಪ್ರತಿ ವರ್ಷ ಸುಮಾರು ೫೦೦೦ ಜನರ ಹೊಟ್ಟೆ ತುಂಬಿಸುತ್ತೇನೆ ಅದೇ ರೀತಿ ಗ್ರಂಥಾಲಯ ಕೂಡ ಕಟ್ಟಿಸಿದ್ದೇನೆ. ಇದಕ್ಕೆ ನನಗೆ ವರ್ಷಕ್ಕೆ ೨.೭೫ ಕೋಟಿ ಹಣ ತಗುಲುತ್ತದೆ. ಇದೆಲ್ಲ ಹಣ ನನ್ನ ಕೈಯಿಂದಾನೆ ಕೊಡುತ್ತೇನೆ ಎಂದು ಹೇಳಿದ್ದಾರೆ.

ಇದಕ್ಕೆ ಸರಕಾರದ ಯಾವುದೇ ಹಣ ಬಳಕೆ ಮಾಡುತ್ತಿಲ್ಲ. ಇದಕ್ಕೆಲ ನನ್ನದೇ ಸ್ವಂತ ದುಡಿದ ಹಣ ಸುರಿಯುತ್ತಿದ್ದೇನೆ ಎಂದು ಹೇಳಿದ್ದಾರೆ ಗೌತಮ್ ಗಂಭೀರ್. ಇಷ್ಟು ಖರ್ಚು ಮಾಡಲು ನಾನು ಐಪಿಎಲ್ ಅಲ್ಲಿ ದುಡಿಯಲೇ ಬೇಕು. ಇದಕ್ಕೆ ನನಗೆ ನಾಚಿಕೆ ಇಲ್ಲ ಎಂದು ಗಂಭೀರ್ ಪ್ರತಿಕ್ರಿಯೆ ನೀಡಿದ್ದಾರೆ. ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಇವರ ಈ ಕಾರ್ಯಕ್ಕೆ ಎಲ್ಲ ಕಡೆಯಿಂದ ಶ್ಲಾಘನೆ ಸಿಗುತ್ತಿದೆ. ಅಲ್ಲದೆ ಇವರು ಸಂಸದರಾಗಿ ತಮ್ಮ ಕ್ಷೇತ್ರದಲ್ಲಿ ಗಾಳಿ ಶುದ್ಧ ಮಾಡುವ ಯಂತ್ರ ಕೂಡ ಹಾಕಿದ್ದಾರೆ. ಇವರ ಸಮಾಜ ಮೂಕಿ ಸೇವೆಗೆ ಜನರ ಪ್ರತಿಕ್ರಿಯೆ ಉತ್ತಮವಾಗಿ ಸಿಗುತ್ತಿದೆ.

Leave A Reply

Your email address will not be published.