ಸಣ್ಣ ಪ್ರಾಯದಲ್ಲಿ ತನ್ನ ಮನೆಯ ಶೆಡ್ ನಲ್ಲಿ ಶುರು ಮಾಡಿದ ಈ ಉದ್ಯಮ ಇಂದು ಲಕ್ಷಾಂತರ ರೂಪಾಯಿ ಆದಾಯ ತರಿಸುತ್ತಿದೆ. ಯಾವುದು ಈ ಉದ್ಯಮ?
ಜೀವನದಲ್ಲಿ ಯಶಸ್ಸು ಕಾಣಲು ವಿಧ್ಯೆ ಎಂಬುವುದು ಬೇಕು. ಆದರೆ ವಿದ್ಯೆ ಒಂದೇ ಜೀವನವನ್ನು ಅಳೆಯವ ಮಾಪನ ಅಲ್ಲ. ಬದಲಾಗಿ ಯಾವ ಮಟ್ಟಕ್ಕೆ ನೀವು ಜೀವನದಲ್ಲಿ ಬೆಳೆದು ನಿಂತಿದ್ದೀರಿ ಅದರ ಮೇಲೆ ಕೂಡ ನಿಮ್ಮನ್ನು ಅಳೆಯಬಹುದು. ಅಂತೂ ಕೊನೆಗೆ ಬೇಕಾಗಿರುವುದು ಎಷ್ಟು ಸಂಪಾದನೆ ಮಾಡುತ್ತೇವೆ ಎಂಬ ಲೆಕ್ಕ. ಅದೆಷ್ಟೋ ಜನ ವಿದ್ಯೆ ಮುಗಿಸಿ ಒಳ್ಳೆಯ ಕಂಪನಿಯಲ್ಲಿ ಕೆಲ್ಸಕ್ಕೆ ಸೇರಬೇಕು, ಹಣ ಸಂಪಾದನೆ ಮಾಡಬೇಕು ಎಂದು ಯೋಚಿಸುತ್ತಾರೆ. ಅವರ ಮಧ್ಯೆ ಇಲ್ಲೊಬ್ಬ ವ್ಯಕ್ತಿ ಬಹಳ ಭಿನ್ನವಾಗಿ ಇದ್ದಾರೆ ಇವರು ಕಲಿತ ನಂತರ ಕೃಷಿಯನ್ನು ತನ್ನ ಕರಿಯರ್ ಆಗಿ ತೆಗೆದು ಕೊಳ್ಳುತ್ತಾರೆ.
ಹೌದು ಅದರಲ್ಲಿ ಯಶಸ್ಸು ಕೂಡಾ ಕಾಣುತ್ತಾರೆ ಯಾರಿವರು ಬನ್ನಿ ತಿಳಿಯೋಣ ಇವರ ಬಗ್ಗೆ. ಇವರ ಹೆಸರು ದಲ್ಜೀರ್ ಸಿಂಗ್ ಭಾರತ ಪಾಕಿಸ್ತಾನ ಗಡಿಯಲ್ಲಿ ಇರುವ ಸಣ್ಣ ಹಳ್ಳಿಯೊಂದರಲ್ಲಿ ಹುಟ್ಟಿ ಬೆಳೆದು ಅಲ್ಲೇ ವಿಧ್ಯಾಭ್ಯಾಸ ಮುಕ್ತಾಯ ಮಾಡಿ ದೊಡ್ಡ ದೊಡ್ಡ ಕಂಪನಿಯಲ್ಲಿ ಕೆಲಸ ಹುಡುಕುವುದು ಬಿಟ್ಟು ಮೂಲ ಕಸುಬಾದ ಕೃಷಿಯನ್ನೇ ಆಯ್ಕೆ ಮಾಡಿಕೊಂಡರು . ತನ್ನ ಮನೆಯಲ್ಲೇ ಇದ್ದ ಹಳೆಯ ಶೆಡ್ ನಲ್ಲಿ ಮಶ್ರೂಮ್ ಕೃಷಿ ಮಾಡುವ ನಿರ್ಧಾರ ಮಾಡುತ್ತಾರೆ.
ಹೀಗೆ 1999 ರಿಂದ ಈ ಕೆಲಸ ಶುರು ಮಾಡಿದರು ಇದರಿಂದಾಗಿ ಅವರಿಗೆ 5ರಿಂದ 6 ತಿಂಗಳ ಬೆಲೆಯಲ್ಲಿ 14 ರಿಂದ 15ಲಕ್ಷ ಆದಾಯ ಬರುತ್ತದೆ ಎನ್ನುತ್ತಾರೆ. ಅನೇಕ ಜನರಿಗೆ ಉದ್ಯೋಗ ಕೂಡ ನೀಡಿದ್ದು, ಇತರರಿಗೆ ಮಾದರಿಯಾಗಿ ಅವರಿಗೂ ಮಶ್ರೂಮ್ ಬೆಲೆಯನ್ನು ಬೆಳೆಸುವ ಬಗೆಗೆ ತರಭೇತಿ ನೀಡುತ್ತಾ ಇದ್ದಾರೆ. ಇದರಿಂದಾಗಿ ಅದೆಷ್ಟೋ ಜನರು ಬದುಕು ಕಟ್ಟಿಕೊಂಡಿದ್ದಾರೆ. ಹಾಗೆಯೇ ಇವರ ಈ ಅಸಾಧಾರಣ ಸೇವೆಗೆ ಕೃಷಿ ಇಲಾಖೆಯಿಂದ ಸಮ್ಮಾನ ಕೂಡ ದೊರಕಿದ್ದು, ಮಾದರಿ ಕೃಷಿಕ ಆಗಿ ಕೆಲಸ ಮಾಡುತ್ತಿದ್ದಾರೆ.