ಸರಕಾರಿ ನೌಕರಿ ಗಾಗಿ ವರ್ಷಗಳ ಕಾಲ ಪ್ರಯತ್ನ ಪಟ್ಟರು ಸಿಗಲಿಲ್ಲ. ಕೊನೆಗೆ ತನ್ನದೇ ಸ್ವಂತ ಉದ್ಯಮ ಮಾಡಿ ಯಶಸ್ಸು ಪಡೆದಿದ್ದಾರೆ?

1,124

ಜೀವನದಲ್ಲಿ ಎಲ್ಲರಿಗೂ ಒಂದು ಆಶೆ ಆಕಾಂಕ್ಷೆ ಎಂಬುವುದು ಇದ್ದೆ ಇರುತ್ತದೆ. ಅಂತಹ ಒಂದು ಆಸೆಗಳಲ್ಲಿ ಸರ್ಕಾರಿ ನೌಕರಿ ಪಡೆಯುವುದು ಕೂಡ ಒಂದು.ಅದೆಷ್ಟೋ ಜನರು ಊರು ಬಿಟ್ಟು ಮನೆ ಬಿಟ್ಟು ದೂರ ಇದ್ದುಕೊಂಡು ಕಣ್ಣಿಗೆ ಎಣ್ಣೆ ಬಿಟ್ಟು ಓದುತ್ತಾ ಇರುತ್ತಾರೆ.ಕೇವಲ ಒಂದೇ ಉದ್ದೇಶ ಅದು ಸರ್ಕಾರಿ ನೌಕರಿ ಪಡೆಯಬೇಕು ಎಂಬುವುದು. ಆದರೆ ಅದೆಷ್ಟೋ ಜನರು ನಿರಾಶೆಯಿಂದ ಹಿಂತಿರುಗಿದ್ದ ಇದೆ. ಇದರಲ್ಲಿ ನಿರಾಶೆ ಹೊಂದಿದವರ ಸಂಖ್ಯೆ ಹೆಚ್ಚು. ಇಂತಹ ಜನರ ಸಾಲಿನಲ್ಲಿ ನಿಲ್ಲುತ್ತಾರೆ ನಾವಿಂದು ತಿಳಿಯ ಹೊರಟ ಈ ವ್ಯಕ್ತಿ.

ಇವರ ಹೆಸರು ಯದ್ವಿಂದರ್ ಸಿಂಗ್ ಪಂಜಾಬ್ ಮೂಲದವರು. ಗಣಿತದಲ್ಲಿ ಮಾಸ್ಟರ್ ಡಿಗ್ರಿ ಮಾಡಿರುವ ಇವರು ತಂದೆಯ ಆಶೆ ಮಗ ಒಂದು ಸರ್ಕಾರಿ ಆಫೀಸರ್ ಆಗಬೇಕು ಎಂದು. ತಾನು ತನ್ನ ಇಡೀ ಜೀವನವನ್ನು ಕೃಷಿಯಲ್ಲಿ ಕಳೆದೆ ಮಗ ಆ ತರ ಆಗಬಾರದು ಎಂಬ ಆಸೆಯಿಂದ ಅವರು ಕನಸು ಕಂಡಿದ್ದರು. ಮಗ ಕೂಡ ಅದಕ್ಕೆ ಪಣತೊಟ್ಟು ಓದುತ್ತಿದ್ದ, ಮನೆಯಿಂದ ದೂರದಲ್ಲಿ ಇದ್ದು ಸರ್ಕಾರಿ ಪರೀಕ್ಷೆಗಳಿಗೆ ಎಲ್ಲಾ ರೀತಿಯಲ್ಲೂ ತಯಾರಿ ನಡೆಸಿದ್ದ. ಆದರೆ ಕೈ ಸಿಕ್ಕಿದ್ದು ನಿರಾಶೆ ಮಾತ್ರ ಅದೆಲ್ಲ ಬಿಟ್ಟು ಮತ್ತೆ ಮನೆಗೆ ಮರಳಿ ತಂದೆಯಂತೆ ಕೃಷಿ ಮುಂದುವರೆಸಲು ನಿರ್ಧರಿಸಿದ.

ಸಾಂಪ್ರದಾಯಿಕ ಕೃಷಿ ವಿಧಾನ ಮುಂದುವರೆಸಿದರು ಇದರಿಂದ ಅಷ್ಟೇನೂ ಲಾಭ ಬರಲಿಲ್ಲ ಅದಕ್ಕಾಗಿ ಏನಾದರೂ ಹೊಸತು ಮಾಡಬೇಕು ಎಂದು ನಿರ್ಧರಿಸಿ ಟರ್ಮರಿಕ್ (ಹರಿಶಿಣ) ಕೃಷಿ ಮಾಡಲು ನಿರ್ಧರಿಸಿದರು. ಈ ಬಾರಿ ಅವರ ಅಪೇಕ್ಷೆ ಸುಳ್ಳಾಗಲಿಲ್ಲ ಉತ್ತಮ ಲಾಭ ಬಂದಿತು. ಇದನ್ನು ಮುಂದುವರೆಸಿ ಅವರು 8 ಎಕರೆ ಜಮೀನಿನಲ್ಲಿ ಮಾಡಲು ನಿರ್ಧರಿಸಿದರು.ಆದರೆ ಬಂದ ಬೆಳೆಯನ್ನು ಮಾರಲು ಕಷ್ಟ ಆಯಿತು ಆಗಲೇ ಹೊಳೆದಿದ್ದು ಅವರಿಗೆ ಪ್ರೊಸೆಸಿಂಗ್ ಬಗ್ಗೆ. ಹೌದು ಇದರ ಬಗ್ಗೆ ಕೂಡ ಟ್ರೈನಿಂಗ್ ಪಡೆದುಕೊಂಡು ಟರ್ಮರಿಕ್ ಪೌಡರ್ ಮಾಡುವುದನ್ನು ಶುರು ಮಾಡಿದರು. ಇಲ್ಲಿಂದ ಅವರು ಮತ್ತೆ ಹಿಂದಕ್ಕೆ ನೋಡಲಿಲ್ಲ ಇದೀಗ ಅವರು ಇದೆ ಉದ್ಯಮದಿಂದ ಲಕ್ಷಾಂತರ ರೂಪಾಯಿ ಲಾಭ ಪಡೆಯುತ್ತಿದ್ದಾರೆ.

Leave A Reply

Your email address will not be published.