ಸಿಂಧುತಾಯಿ ಸತ್ಪಾಲ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದ ಕಾರಣ ಏನು ಗೊತ್ತೇ? ತಿಳಿದರೆ ನೀವು ಕೂಡ ಗೌರವಿಸುತ್ತಿರ.

323

ಸಿಂಧು ತಾಯಿ ಸತ್ಪಾಲ್ ಎಂದರೆ ಯಾರಿಗೂ ಗೊತ್ತೇ ಇರಲಿಲ್ಲ. ಕೇವಲ ಬೆರಳೆಣಿಕೆಯಷ್ಟು ಜನರು ಮಾತ್ರ ಇವರ ಬಗ್ಗೆ ಅರಿತಿದ್ದರು. ಆದರೆ ಅವರಿಗೆ ಯಾವಾಗ ಪದ್ಮಶ್ರೀ ಪ್ರಶಸ್ತಿ ಬಂತೋ ಆಗ ಅವರ ಬಗೆಗೆ ಎಲ್ಲರಿಗೂ ಗೊತ್ತಾಯಿತು. ಹಾಗಾದರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ ದೊರೆತ ಕಾರಣ ಏನು ಎಂಬುವುದರ ಬಗ್ಗೆ ನಿಮಗೂ ತಿಳಿಯಬೇಕು ಅದಕ್ಕೆ ಅವರ ಬಾಲ್ಯದ ದಿನಗಳ ನೆನಪಿಸಬೇಕು.

ಬಾಲ್ಯದಲ್ಲಿ ಇವರು ಅನುಭವಿಸಿದ ಕಷ್ಟಗಳ ಮೆಲುಕು ಹಾಕಬೇಕು. ಓದುವ ಸಮಯದಲ್ಲಿ ಓದಲು ಅತೀ ಹೆಚ್ಚು ಆಸಕ್ತಿ ಇದ್ದರೂ ಮನೆಯವರು ಬಲವಂತವಾಗಿ ಇವರನ್ನು ಇವರ ವಯಸ್ಸಿನ ಮೂರು ಪಟ್ಟು ಹೆಚ್ಚು ವಯಸ್ಸಿನ ವ್ಯಕ್ತಿಗೆ ಮದುವೆ ಮಾಡಿ ಕೊಟ್ಟಿದ್ದರು. ಜೀವನದಲ್ಲಿ ಅನುಭವಿಸಿದ ನರಕಯಾತನೆ ಯಾರಿಗೂ ಬರಬಾರದು ಎನ್ನುತ್ತಾರೆ ಇವರು. 9 ತಿಂಗಳ ತುಂಬು ಗರ್ಭಿಣಿ ಆಗಿದ್ದಾಗ ಅಕ್ರಮ ಸಂಬಂಧದ ಆರೋಪ ಹೊರಿಸಿ ಹೊಟ್ಟೆಗೆ ಒದ್ದು ಮನೆಯಿಂದ ಹೊರಹಾಕುತ್ತಾರೆ ಇವರ ಗಂಡ. ಹೀಗೆ ಬಾಲ್ಯದಲ್ಲೇ ಎಲ್ಲಾ ನೋವುಗಳನ್ನು ಅನುಭವಿಸಿದ ಅವರು ಜೀವನದಲ್ಲಿ ಇನ್ನೆಂದೂ ಕೂಡ ಇಂತಹ ಪರಿಸ್ಥಿತಿ ಯಾವ ಹೆಣ್ಣಿಗೂ ಬರಬಾರದು ಎಂದು ನಿರ್ಧರಿಸಿ , ಇಂತಹ ಮಕ್ಕಳನ್ನು ಸಾಕಲು ಶುರು ಮಾಡಿದರು.

ಹೀಗೆ ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಆಶ್ರಯ, ವಿಧ್ಯೆ ಕೊಟ್ಟು ಅವರನ್ನು ಸ್ವಂತ ಕಾಲ ಮೇಲ್ ನಿಲ್ಲುವಲ್ಲಿ ಇವರ ಯೋಗದಾನ ಇದೆ. ಯಾರು ಇಲ್ಲದ ಆ ಮಕ್ಕಳಿಗೆ ತಾಯಿಯಾಗಿ ಹುಟ್ಟಿ ಬಂದಿದ್ದರು ಸಿಂಧು ತಾಯಿ ಸತ್ಪಾಲ್. ಅದಕ್ಕಾಗಿ ಜನರು ಇವರನ್ನು ಸಿಂಧು ತಾಯಿ ಸಿಂಧು ತಾಯಿ ಎಂದು ಕರೆಯುತ್ತಾರೆ. ಇವರು ಅದೆಷ್ಟೋ ಅನಾಥ ಮಕ್ಕಳ ತಾಯಿ ಆಗಿದ್ದರು. ಇವರಿಗೆ 7500 ಕ್ಕಿಂತಲೂ ಹೆಚ್ಚಿನ ಪುರಸ್ಕಾರಗಳು ಸಿಕ್ಕಿದ್ದು, ಪದ್ಮಶ್ರೀ ಕೂಡ ಸಿಕಿದ್ದು ಈ ಪುರಸ್ಕಾರಗಳ ಹಣ ಎಲ್ಲವನ್ನೂ ಇವರು ಅನಾಥ ಮಕ್ಕಳ ಅಭಿವೃದ್ಧಿಗೆ ಬಳಸಿಕೊಂಡಿದ್ದರು. ಇಂತಹ ಮಹಾನ್ ತಾಯಿ ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಇವರು ಎಲ್ಲರಿಗೂ ಮಾದರಿ ಆಗಿದ್ದಾರೆ.

Leave A Reply

Your email address will not be published.