ಸೌತ್ ಆಫ್ರಿಕಾ ಏಕದಿನ ಸರಣಿಗೆ ತಂಡ ಘೋಷಣೆ ಮಾಡಿದ ಬಿಸಿಸಿಐ. 4 ಹೊಸ ಆಟಗಾರರು ಆಯ್ಕೆ. ತಂಡದಲ್ಲಿ ಯಾರೆಲ್ಲ ಇದ್ದಾರೆ ಗೊತ್ತೇ??

287

ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ 3 ಓಡಿಐ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಸ್ಕ್ವಾರ್ ನಲ್ಲಿ ಯಾರೆಲ್ಲಾ ಇರುತ್ತಾರೆ ಎಂದು ಬಿಸಿಸಿಐ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕ್ಯಾಪ್ಟನ್ ಆಗಿ ಶಿಖರ್ ಧವನ್ ಅವರು ಆಯ್ಕೆಯಾಗಿದ್ದಾರೆ, ಶ್ರೇಯಸ್ ಅಯ್ಯರ್ ಅವರು ವೈಸ್ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಬ್ಯಾಟರ್ ಗಳಾದ ರಜತ್ ಪಟಿದರ್ ಮತ್ತು ರಾಹುಲ್ ತ್ರಿಪಾಠಿ ಆಯ್ಕೆಯಾಗಿದ್ದಾರೆ. ಜೊತೆಗೆ ಆಲ್ ರೌಂಡರ್ ಆಗಿರುವ ಶಾಬಾಜ್ ಅಹ್ಮದ್, ಲೆಗ್ ಸ್ಪಿನ್ನರ್ ಆಗಿರುವ ರವಿ ಬಿಶ್ನೋಯ್, ಸೀಮರ್ ಮುಖೇಶ್ ಕುಮಾರ್ ಸಹ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇವರಿಷ್ಟು ಜನ ಆಟಗಾರರು ಡೊಮೇಸ್ಟಿಕ್ ಕ್ರಿಕೆಟ್ ಮತ್ತು ಐಪಿಎಲ್ ನಲ್ಲಿ ಅದ್ಭುತವಾದ ಪ್ರದರ್ಶನ ನೀಡಿದ್ದಾರೆ.

ಈ ಹಿಂದೆ ವೆಸ್ಟ್ ಇಂಡೀಸ್ ಮತ್ತು ಹಿಂಬಾಬ್ವೆ ವಿರುದ್ಧದ ಓಡಿಐ ಸೀರಿಸ್ ಗಳಲ್ಲಿ ಭಾರತ ತಂಡವನ್ನು ನಾಯಕನಾಗಿ ಮುನ್ನಡೆಸಿ ಎರಡು ಸೀರೀಸ್ ಗಳನ್ನು ಗೆದ್ದಿದ್ದಾರೆ ಶಿಖರ್ ಧವನ್, ಈ ಪಂದ್ಯಗಳಲ್ಲಿ ಶಿಖರ್ ಧವನ್ ಅವರ ಟೀಮ್ ನಲ್ಲಿದ್ದ ಶುಬ್ಮನ್ ಗಿಲ್ ಇದೀಗ ಮತ್ತೊಮ್ಮೆ ಶಿಖರ್ ಧನ್ ಅವರ ತಂಡಕ್ಕೆ ಜೊತೆಯಾಗಲಿದ್ದಾರೆ. ಋತುರಾಜ್ ಗಾಯಕ್ವಾಡ್ ಅವರು ಬ್ಯಾಕಪ್ ಆಟಗಾರನಾಗಿ ಇರಲಿದ್ದು, 16 ಸ್ಪರ್ಧಿಗಳ ಸ್ಕ್ವಾಡ್ ನಲ್ಲಿ ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಇಬ್ಬರು ಸಹ ವಿಕೆಟ್ ಕೀಪರ್ ಗಳಾಗಿ ಇರಲಿದ್ದಾರೆ.. ಟಿ20 ಪಂದ್ಯಕ್ಕೆ ಆಯ್ಕೆಯಾಗದೆ ಇದ್ದ ಶಾರ್ದೂಲ್ ಠಾಕೂರ್ ಅವರು ಸಹ ಓಡಿಐ ನಲ್ಲಿ ಸ್ಥಾನ ಪಡೆದಿದ್ದಾರೆ. ಈ ವಾರ ಅಸ್ಟ್ರೇಲಿಯಾಗೆ ಹೊರಬೇಕಿದ್ದರು ಸಹ ದೀಪಕ್ ಚಹರ್ ಅವರು ಸೌತ್ ಆಫ್ರಿಕಾ ವಿರುದ್ಧದ ಓಡಿಐ ಸರಣಿಗೆ ಸೆಲೆಕ್ಟ್ ಆಗಿದ್ದಾರೆ.

ಇವರಷ್ಟೇ ಅಲ್ಲದೆ, ಮೊಹಮ್ಮದ್ ಸಿರಾಜ್ ಮತ್ತು ಆವೇಶ್ ಖಾನ್ ಸಹ ಆಯ್ಕೆಯಾಗಿದ್ದಾರೆ. ಈ ಮೂರು ಓಡಿಐ ಗಳಲ್ಲಿ, ಮೊದಲ ಪಂದ್ಯ ಅಕ್ಟೋಬರ್ 6ರಂದು ನಡೆಯಲಿದೆ, ಮುಂದಿನ ಪಂದ್ಯ ಅಕ್ಟೋಬರ್ 9ರಂದು ದೆಹಲಿಯಲ್ಲಿ ನಡೆಯಲಿದ್ದು, ಕೊನೆಯ ಪಂದ್ಯ ಅಕ್ಟೋಬರ್ 11ರಂದು ದೇಹಲಿಯಲ್ಲಿ ನಡೆಯಲಿದೆ. ಬಿಸಿಸಿಐ ಆಯ್ಕೆ ಮಾಡಿರುವ ತಂಡ ಹೀಗಿದೆ.. ಶಿಖರ್ ಧವನ್ (ಕ್ಯಾಪ್ಟನ್), ಋತುರಾಜ್ ಗಾಯಕ್ವಾಡ್, ಶುಬ್ಮನ್ ಗಿಲ್, ಶ್ರೇಯಸ್ ಅಯ್ಯರ್ (ವೈಸ್ ಕ್ಯಾಪ್ಟನ್), ರಜತ್ ಪಟಿದಾರ್, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಾಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ರವಿ ಬಿಶ್ನೋಯ್, ಮುಕೇಶ್ ಕುಮಾರ್, ಆವೇಶ್ ಖಮ್, ಮೊಹಮ್ಮದ್ ಸಿರಾಜ್ ಮತ್ತು ದೀಪಕ್ ಚಾಹರ್, ಈ 16 ಕ್ರಿಕೆಟಿಗರ ಸ್ಕ್ವಾಡ್ ಯಾಕೆ ಮಾಡಲಾಗಿದೆ.

Leave A Reply

Your email address will not be published.