ಸೌರಮಾನ ಯುಗಾದಿ ಹಾಗು ಚಾಂದ್ರಮಾನ ಯುಗಾದಿ. ಜನರಲ್ಲಿ ಅತಿ ಹೆಚ್ಚು ಗೊಂದಲವಿರುವ ವಿಷಯ. ಇವೆರಡರ ಮಹತ್ವ ಏನು? ಯಾಕೆ ಎರಡೆರಡು ಯುಗಾದಿಗಳು?

1,186

ಯುಗಾದಿ ಹಬ್ಬ ಭಾರತದಲ್ಲಿ ಇದನ್ನು ಹೊಸವರ್ಷವನ್ನಾಗಿ ಆಚರಿಸುತ್ತಾರೆ. ಅದಲ್ಲದೆ ಭಾರತದ ಒಂದೊಂದು ಮೂಲೆಯಲ್ಲಿ ಒಂದೊಂದು ಹೆಸರಿನಲ್ಲಿ ಈ ಯುಗಾದಿಯನ್ನು ಆಚರಿಸಲಾಗುತ್ತದೆ. ಅಲ್ಲದೆ ಈ ಯುಗಾದಿಗೆ ಅದರದೇ ಅದ ಮಹತ್ವವಿದೆ. ನಮ್ಮ ದೇಶದಲ್ಲಿ ಚಾಂದ್ರಮಾನ ಹಾಗು ಸೌರಮಾನ ಯುಗಾದಿ ಎಂದು ಎರಡೆರಡು ಯುವಾಗಿ ಹಬ್ಬ ಬರುತ್ತದೆ. ಇದರ ಮಹತ್ವವೇನು? ಏಕೆ ಎರಡೆರಡು ಯುಗಾದಿಗಳಿವೆ? ಇಲ್ಲಿದೆ ಅದರ ಸಂಪೂರ್ಣ ಮಾಹಿತಿ.

ಇಂದು ಏಪ್ರಿಲ್ 2 ಯುಗಾದಿ ಹಬ್ಬವನ್ನು ಆಚರಿಸಲಾಗುತ್ತಿದೆ. ಇಂದು ಚಾಂದ್ರಮಾನ ಯುಗಾದಿ ಹಾಗು ಏಪ್ರಿಲ್ 14 ಬುಧವಾರ ಸೌರಮಾನ ಯುಗಾದಿ. ಯುಗಾದಿ ಒಂದು ಸಂಸ್ಕೃತ ಪದವಾಗಿದ್ದು ಯುಗ ಅಂದರೆ ವಯಸ್ಸು ಹಾಗೇನೇ ಆದಿ ಎಂದರೆ ಪ್ರಾರಂಭ ಎನ್ನುವ ಅರ್ಥ ಇದೆ. ಅಂದರೆ ಯುಗಾದಿ ಎಂದರೆ ಹೊಸ ಯುಗದ ಪ್ರಾರಂಭ ಎನ್ನುವುದು ಯುಗಾದಿಯ ಮಹತ್ವ. ಇದನ್ನು ಸಾಮಾನ್ಯವಾಗಿ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಆಚರಿಸಲಾಗುತ್ತದೆ. ಇದನ್ನು ದೇಶದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತದೆ.

ವಿವಿಧ ರಾಜ್ಯಗಳಲ್ಲಿ ಯುಗಾದಿ ಆಚರಿಸಲಾಗುತ್ತದೆ. ವಿಂದ್ಯಾಬೆಟ್ಟಗಳ ಉತ್ತರದಲ್ಲಿ ವಾಸಿಸುವವರು ಇದನ್ನು ಬರ್ಹಸ್ಪತ್ಯಮಾನ ಎಂದು ಆಚರಿಸುತ್ತಾರೆ. ವಿಂದ್ಯ ಬೆಟ್ಟಗಳ ದಕ್ಷಿಣ ಭಾಗದಲ್ಲಿ ಇದನ್ನು ಜನರು ಸೌರಮಾನ ಹಾಗು ಚಾಂದ್ರಮಾನ ಎಂದು ಆಚರಿಸುತ್ತಾರೆ. ಆಂಧ್ರಪ್ರದೇಶ, ತೆಲಂಗಾಣ ಹಾಗು ಕರ್ನಾಟಕದಲ್ಲಿ ಇದನ್ನು ಯುಗಾದಿ ಹಬ್ಬವೆಂದು ಆಚರಿಸಿದರೆ ಮಹಾರಾಷ್ಟ್ರದ ಜನರು ಇದೆ ಯುಗಾದಿಯನ್ನು ಗುಡಿ ಪಾಡ್ವ ಎಂದು ಆಚರಿಸುತ್ತಾರೆ.

ಸೌರಮಾನ ಯುಗಾದಿ ಎಂದರೆ ಏನು? ಸೌರಮಾನ ಯುಗಾದಿ ತಮಿಳಿನಲ್ಲಿ ವರುಷ ವಿರಪ್ಪು, ಚಿತಿರೈವಿಷು, ಪೂತಂಡು ಎಂದು ಆಚರಿಸಲಾಗುತ್ತದೆ. ಕೇರಳ ದ ಜನರು ಮಲಯಾಳಂ ರಾಶಿ ಚಕ್ರದ ಆದರದ ಮೇಲೆ ವಿಷು ಹೆಸರಿನೊಂದಿಗೆ ಆಚರಿಸುತ್ತಾರೆ. ಪೊಹೇಲ ಬೋಯ್ಷಾಕ್ ಮತ್ತು ನಭಾ ಪರ್ವ ಬಂಗಾಳದಲ್ಲಿ, ಮಹಾ ವಿಶುಭ ಸಂಕ್ರಾಂತಿ ಎನ್ನುವುದು ಒರಿಸ್ಸಾದ ಹೊಸ ವರ್ಷ. ಬೊಹಾಗ್ ಬಿಹು ಅಥವಾ ರೋಂಗಲಿ ಬಿಹು ಎನ್ನುವುದು ಅಸ್ಸಾಮಿಯರ ಹೊಸ ವರ್ಷ. ಬೈಸಾಕಿಯಲ್ಲಿ ಪಂಜಾಬಿಗರು ಹೊಸ ವರ್ಷವನ್ನಾಗಿ ಆಚರಿಸುತ್ತಾರೆ. ಕರ್ನಾಟಕದ ಮಂಗಳೂರಿನಲ್ಲಿ ಈ ಹಬ್ಬವನ್ನು ವಿಷು ಹಬ್ಬವೆಂದು ಆಚರಿಸುತ್ತಾರೆ.

ಒಂದು ನಕ್ಷತ್ರದ ಅಂತರ ಸರಿದೂಗಿಸಲು ಸೂರ್ಯ ಸುಮಾರು ೧೩ ದಿನಗಳನ್ನು ತೆಗೆದುಕೊಳ್ಳುತ್ತಾನೆ. ಸೂರ್ಯನನ್ನು ಕಾಣುವ ನಕ್ಷತ್ರವನ್ನು ಮಹಾನಕ್ಷತ್ರ ಎನ್ನುತ್ತಾರೆ. ಒಂದು ರಾಶಿಯನ್ನು ಆವರಿಸಲು ಸೂರ್ಯ ೩೦-೩೧ ದಿನಗಳನ್ನು ತೆಗೆದುಕೊಳ್ಳುತ್ತಾನೆ. ಕೊನೆಯಲ್ಲಿ ಸೂರ್ಯ ಮತ್ತೊಂದು ನಕ್ಷತ್ರಕ್ಕೆ ದಾಟುತ್ತಾನೆ. ಈ ದಾಟುವ ಸಮಯವನ್ನು ಸಂಕ್ರಮಣ ಎನ್ನದು ಕರೆಯುತ್ತಾರೆ. ಇದೆ ರೀತಿ ಸೂರ್ಯ ೧೨ ರಾಶಿಗಳನ್ನು ಆವರಿಸಲು 365.25 ದಿನಗಳನ್ನು ತೆಗೆದುಕೊಳ್ಳುತ್ತಾನೆ. ಸೌರ ಮಾರ್ಗದ ಪ್ರಕಾರ ( ಭೂಮಿಗೆ ಸಂಬಂಧಿಸಿದಂತೆ) ವರ್ಷದಲ್ಲಿ 365.25 ದಿನಗಳಿವೆ. ಸೂರ್ಯ ರೇವತಿ ನಕ್ಷತ್ರದಿಂದ ಅಶ್ವಿನಿ ನಕ್ಷತ್ರಕ್ಕೆ ದಾಟಿದ ಮರುದಿನವನ್ನು ಹೊಸ ವರ್ಷವೆಂದು ಪರಿಗಣಿಸಲಾಗುತ್ತದೆ.

ಚಾಂದ್ರಮಾನ ಯುಗಾದಿ ಎಂದರೆ ಏನು? ಚಂದ್ರನ ಸ್ಥಾನ ಬದಲಾವಣೆಯನ್ನು ಅನುಸರಿಸುವ ಮೂಲಕ ವರ್ಷದಲ್ಲಿನ ದಿನಗಳನ್ನು ಲೆಕ್ಕ ಮಾಡುವುದಕ್ಕೆ ಚಾಂದ್ರಮಾನ ಎಂದು ಕರೆಯಲಾಗುತ್ತದೆ. ಈ ವ್ಯವಸ್ಥೆಯ ಪ್ರಕಾರ ಹನ್ನೆರಡು ತಿಂಗಳು ಸೇರಿ ಒಂದು ವರ್ಷ. ಈ ವ್ಯವಸ್ಥೆಯ ಪ್ರಕಾರ ಒಂದು ವರ್ಷದಲ್ಲಿ 354 ದಿನಗಳಿವೆ. ಇದು ಸೌರಮಾನ ಹಾಗು ಚಾಂದ್ರಮಾನ ವರ್ಷಗಳ ನಡುವೆ ಹನ್ನೊಂದು ದಿನಗಳ ವ್ಯತ್ಯಾಸಕ್ಕೆ ಕಾರಣವಾಗುತ್ತದೆ. ಆದ್ದರಿಂದ ಮೂರೂ ವರ್ಷಗಳಿಗೊಮ್ಮೆ ವ್ಯತ್ಯಾಸವು ಒಂದು ತಿಂಗಳಿಗೆ ಸಮನಾಗಿರುವಾಗ ನಾವು ಒಂದು ತಿಂಗಳನ್ನು ಹೆಚ್ಚಾಗಿ ಸೇರಿಸಿ ಆ ತಿಂಗಳನ್ನು ಚಂದ್ರ ಅಧಿಕ ಮಾಸ ಎಂದು ಕರೆದು ಸೌರಮಾನಕ್ಕೆ ಸೇರಿಸುತ್ತೇವೆ. ಇದೆ ಕಾರಣಕ್ಕೆ ಸೌರ ಸಂವತ್ಸರವನ್ನು ಸ್ಥಿರ ಸಂವತ್ಸರ ಎಂದೂ ಚಂದ್ರ ಸಂವತ್ಸರವನ್ನು ಅಸ್ಥಿರ ಸಂವತ್ಸರ ಎಂದೂ ಕರೆಯುತ್ತೇವೆ.

ಕರ್ನಾಟಕದ ತುಳುನಾಡಿನಲ್ಲಿ ಸೂರ್ಯಮಾನ ಯುಗಾದಿ ಅಂದರೆ ವಿಷು ಹಬ್ಬವನ್ನು ಆಚರಿಸುತ್ತಾರೆ. ಕರ್ನಾಟಕದ ಇತರೆ ಭಾಗಗಳಲ್ಲಿ ಚಾಂದ್ರಮಾನ ಯುಗಾದಿಯನ್ನು ಆಚರಿಸುತ್ತಾರೆ. ಆ ದಿನ ಕುಟುಂಬದ ಸದಸ್ಯರೆಲ್ಲ ಬೇವು ಬೆಲ್ಲ ತಿಂದು ಹಿರಿಯರ ಆಶೀರ್ವಾದ ಪಡೆದು ನಂತರ ದಿನವನ್ನು ಪ್ರಾರಂಭಿಸುತ್ತಾರೆ. ಕೇರಳದಲ್ಲಿ ವಿಷು ಕಣಿ ಇಡುವ ಸಂಪ್ರದಾಯ ಇದೆ. ಹಾಗೇನೇ ತುಳುನಾಡಿನಲ್ಲೂ ಇದೆ ಸಂಪ್ರದಾಯ ಇದೆ. ಈ ದಿನ ವಿಷು ಕಣಿಗಳನ್ನು ಅಂದರೆ ಅದರಲ್ಲಿ ಇತ್ತ ವಸ್ತುಗಳನ್ನು ಮೊದಲು ನೋಡುವುದರಿಂದ ಜೀವನದುದ್ದಕ್ಕೂ ಸಮೃದ್ಧಿ, ಸಂತೋಷ, ಪ್ರಾಪ್ತವಾಗುತ್ತದೆ ಎನ್ನುವ ನಂಬಿಕೆಯಿದೆ. From – Brahmana Priya

Leave A Reply

Your email address will not be published.