ಸ್ಲಂ ಜೋಪಡಿ, ರಸ್ತೆ ಬದಿಯಲ್ಲಿ ಮಲಗಿ ದಿನಕಳೆದು ಬೆಳೆದ ಈ ಹುಡುಗಿ ಇದೀಗ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಯಾರಿವರು?

578

ಕನಸುಗಳು ಹೇಗಿರಬೇಕು ಎಂದರೆ ಅದು ನಿಮ್ಮನ್ನು ನಿದ್ರೆ ಮಾಡಲು ಬಿಡಬಾರದು. ಹೌದು ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬ ಮನೋಭಾವನೆಯಿಂದ ಇದ್ದಾಗ ಮಾತ್ರ ಈ ರೀತಿ ಯೋಚನೆಗಳು ಬರುತ್ತದೆ. ಬಡತನ ನಿಮ್ಮ ಅಭಿವೃದ್ದಿಯ ಹಿನ್ನಡೆಗೆ ಕುಂಟು ನೆಪ ಆಗಬಾರದು. ಬಡತನದಿಂದ ಮೇಲೆ ಬಂದೆ ದೊಡ್ಡ ಸ್ಥಾನದಲ್ಲಿ ನಿಂತು ಹೆಸರು ಮಾಡಿದ ಅದೆಷ್ಟೋ ಮಾದರಿ ವ್ಯಕ್ತಿಗಳು ನಮ್ಮ ಕಣ್ಣ ಮುಂದೆಯೇ ಇದ್ದಾರೆ. ಅಂತಹ ಸಾಲಿನಲ್ಲಿ ನಿಲ್ಲುತ್ತಾರೆ ಈ ಮಹಿಳೆ . ಬನ್ನಿ ಯಾರಿವರು ಏನಿವರ ಸಾಧನೆ ತಿಳಿಯೋಣ.

ಇವರ ಹೆಸರು ಶಹಿನಾ, ಮುಂಬೈ ನಲ್ಲಿ ನೆಲೆಸುತ್ತಾರೆ. Netflix ಎಂದರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ, ಇದರಲ್ಲಿ ಬರುವ ಅತ್ಯಂತ ಪ್ರಖ್ಯಾತ webseries ಗಳಲ್ಲಿ “Bad Boy Billionaire” ಕೂಡ ಒಂದು. ಈ web series ನೋಡುತ್ತಿರುವಾಗಲೆ ಶಾಹಿನಾ ಹಣ್ಣಿಗೆ ಬಿದ್ದಿದ್ದು ತಾವು ವಾಸ ಮಾಡುತ್ತಿದ್ದ ಜೋಪಡಿ. ಅದನ್ನು ನೋಡಿ ಅವರು ತಮ್ಮ ಕಳೆದ ದಿನಗಳನ್ನು ಟ್ವಿಟರ್ ಖಾತೆಯಲ್ಲಿ ಹಂಚಿ ಕೊಂಡಿದ್ದಾರೆ. ಬಾಲ್ಯದಲ್ಲಿ ಮುಂಬೈ ನ ಕೊಳಚೆ ಪ್ರದೇಶ ಸ್ಲಂ ನಲ್ಲಿ ನಮ್ಮದೊಂದು ಡೇರೆ ಇತ್ತು ಅದರಲ್ಲೇ ನಾನು ಮತ್ತು ನನ್ನ ಮನೆಯವರು ವಾಸ ಮಾಡುತ್ತಿದ್ದೆವು. ಪ್ರತಿಯೊಂದು ವಿಷಯದಲ್ಲೂ ಕಷ್ಟವನ್ನು ಕಂಡು ಬೆಳೆದಿದ್ದೇನೆ ಎನ್ನುತ್ತಾರೆ ಇವರು. ವಿಧ್ಯಾಭ್ಯಾಸ ಕೂಡ ತಂದೆಯವರು ಕಷ್ಟದಲ್ಲಿ ಕಳಿಸಿದ್ದರು.

ಕಾಲೇಜಿಗೆ ಹೋಗುವಾಗ ಕಂಪ್ಯೂಟರ್ ಖರೀದಿ ಮಾಡಬೇಕಿತ್ತು ಅದಕ್ಕೂ ಹಣ ಇಲ್ಲದೆ ಕಂಪ್ಯೂಟರ್ ಖರೀದಿ ಮಾಡದೆ ನಾನು ವಿಧ್ಯಾಭ್ಯಾಸ ಪೂರ್ಣ ಗೊಳಿಸಿದೆ ಎನ್ನುತ್ತಾರೆ. ಆದರೆ ಕಂಪ್ಯೂಟರ್ ಮುಂದೆ ಮೊದಲ ಬಾರಿಗೆ ಕೂತಾಗ ಇದರಲ್ಲೇ ಏನಾದರು ಮಾಡಬೇಕು ಎಂದು ನಿರ್ಧರಿಸಿ ಅಪ್ಪನನ್ನು ಮನವೊಲಿಸಿ ಕಂಪ್ಯೂಟರ್ ತರಗತಿಗೆ ಸೇರಿದರು. ಅಪ್ಪ ಲೋನ್ ಮಾಡಿ ತನ್ನನ್ನು ಕಂಪ್ಯೂಟರ್ ತರಗತಿಗೆ ಸೇರಿಸಿದ್ದರು ಎಂದು ನೆನಪಿಸುತ್ತಾರೆ. ಮಧ್ಯಾಹ್ನ ಊಟ ಮಾಡುತ್ತಿರಲಿಲ್ಲ, ಸಂಜೆ ನಡೆದುಕೊಂಡೇ ಮನೆಗೆ ಬರುತ್ತಿದ್ದರು ಇದರಲ್ಲಿ ಉಳಿದ ಹಣ ಕಂಪ್ಯೂಟರ್ ಖರೀದಿ ಮಾಡಲು ಒಟ್ಟು ಮಾಡುತ್ತಿದ್ದರು.

ಪ್ರೋಗ್ರಾಮಿಂಗ್ ಕಲಿತರು ಕೊನೆಗೆ ಡಿಸೈನಿಂಗ್ ನಲ್ಲಿ ತನ್ನನ್ನು ತಾನು ತೊಡಗಿಸಿ ಕೊಂಡರು. ಇಷ್ಟೆಲ್ಲಾ ಪರಿಶ್ರಮ ಅವರ ಕೈ ಬಿಡಲಿಲ್ಲ ಕೊನೆಗೂ ಮೈಕ್ರೋಸಾಫ್ಟ್ ಕಂಪನಿಯಲ್ಲಿ ಪ್ರಾಡಕ್ಟ್ ಡಿಸೈನ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅದೆಷ್ಟೋ ಕಷ್ಟಗಳ ಕಂಡ ನಮಗೆ ಈಗ ಸಂತಸದ ದಿನಗಳು. ಅಪ್ಪ ಅಮ್ಮ ಫ್ಲಾಟ್ ನಲ್ಲಿ ಇದ್ದಾರೆ. ಕೊಳಚೆ ಇಂದ ಇಲ್ಲಿಯವರೆಗಿನ ಪಯಣ ಸುಲಭ ಇರಲಿಲ್ಲ ಎಲ್ಲದಕ್ಕೂ ನನ್ನ ಪರಿಶ್ರಮ ಕಾರಣ ಎನ್ನುತ್ತಾರೆ. ಇವರ ಬಡತನದ ನಡುವಿನಲ್ಲಿ ಈ ಹಸಿವು ನಮಗೆಲ್ಲ ಮಾದರಿ ಆಗಬೇಕು.

Leave A Reply

Your email address will not be published.