ಹಿಂದಿಗೆ ಹೋಗುವ ಮುನ್ನವೇ ಬಾಲಿವುಡ್ ಅನ್ನು ಶೇಕ್ ಮಾಡಿದ ಕಾಂತಾರ: ಬಿಡುಗಡೆಗೂ ಮುನ್ನವೇ ದಾಖಲೆಗಳು ಪುಡಿ ಪುಡಿ. ಯಾವೆಲ್ಲ ದಾಖಲೆ ಉಡೀಸ್ ಗೊತ್ತೇ??
ಕನ್ನಡದಲ್ಲಿ ಈಗಾಲೇ ಅಬ್ಬರಿಸಿ ಬೊಬ್ಬಿರಿಯುತ್ತಿರುವ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಸಿನಿಮಾ ಇದೀಗ ಎಲ್ಲಾ ಭಾಷೆಗಳಲ್ಲಿ ಪ್ಯಾನ್ ಇಂಡಿಯನ್ ಲೆವೆಲ್ ನಲ್ಲಿ ರಿಲೀಸ್ ಗೆ ರೆಡಿಯಾಗಿದೆ. ಕಾಂತಾರ ಸಿನಿಮಾ ಹಿಂದಿ, ತೆಲುಗು, ತಮಿಳು ಭಾಷೆಯಲ್ಲಿ ಬಿಡುಗಡೆಯಾಗಲು ಸಿದ್ದವಾಗಿದೆ. ಕನ್ನಡದಲ್ಲಿ ಅತ್ಯಂತ ಯಶಸ್ಸು ಕಂಡ ಕಾಂತಾರ ಸಿನಿಮಾ ಅ.14ರಂದು ಹಿಂದಿ ಭಾಷೆಯಲ್ಲಿ ಡಬ್ ಆಗಿ ಬಿಡುಗಡೆಗೊಳ್ಳುತ್ತಿದೆ. 2500ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಸಿನಿಮಾ ಬಿಡುಗಡೆಗೊಳ್ಳುತ್ತಿರುವುದಾಗಿ ಹೊಂಬಾಳೆ ಫಿಲಂಸ್ ಹೇಳಿದೆ. ಈಗ “ಕಾಂತಾರ” ಚಿತ್ರವನ್ನು ಅಧಿಕ ಸಂಖ್ಯೆಯ ಚಿತ್ರಮಂದಿಗಳಲ್ಲಿ ಬಿಡುಗಡೆ ಮಾಡುವ ಮೂಲಕ ಇಡೀ ದೇಶವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡು ಹಾಗೆ ಮಾಡುತ್ತಿದ್ದಾರೆ ಕನ್ನಡದ ಹೆಮ್ಮೆಯ ನಿರ್ಮಾಪಕ ವಿಜಯ್ ಕಿರಗಂದೂರು.
ಬಾಲಿವುಡ್ ನ ಖ್ಯಾತ ಚಿತ್ರ ವಿಮರ್ಶಕ ತರಣ್ ಆದರ್ಶ್ ಸಿನಿಮಾಗೆ 4 ಸ್ಟಾರ್ ಕೊಟ್ಟಿದ್ದಾರೆ.ಅವರು ಅದೆಂತಹದ್ದೇ ಸಿನಿಮಾ ಇದ್ರೂ 3 ರಿಂದ ಮೂರುವರೆ ಸ್ಟಾರ್ ಗಳನ್ನ ಕೊಡೋದೆ ಹೆಚ್ಚು ಅಂತಹದ್ರಲ್ಲಿ ಕಾಂತಾರಗೆ 4 ಸ್ಟಾರ್ ಗಳನ್ನ ನೀಡಿದ್ದಾರೆ. ಹಿಂದಿಯಲ್ಲಿ KGF ಗಿಂತಲೂ ಉತ್ತಮ ಪ್ರತಿಕ್ರಿಯೆ ಕಾಂತಾರಗೆ ಸಿಗುತ್ತಿದೆ ಎನ್ನಲಾಗ್ತಿದೆ. ಕಾಂತಾರ ಕನ್ನಡ ವರ್ಷನ್ ಹಿಂದಿ ವಲಯದಲ್ಲಿ ಬಿಡುಗಡೆಯಾದ ದಿನದಿಂದ ₹1.3 ಕೋಟಿ ಗಳಿಸಿದೆ. ಕಾಂತಾರ’ ಕ್ರೇಜ್, ಸ್ಕ್ರೀನ್‌ಗಳ ಸಂಖ್ಯೆ ನೋಡುತ್ತಿದ್ದರೆ ಫಸ್ಟ್ ಡೇ 4ರಿಂದ 5 ಕೋಟಿ ಆದರೂ ಕಲೆಕ್ಷನ್ ಮಾಡುತ್ತದೆ ಎನ್ನುವ ಲೆಕ್ಕಾಚಾರ ನಡೀತಿದೆ.
ಇನ್ನು ಕಾಂತಾರ ಬುಕ್ ಮೈ ಶೋನಲ್ಲಿ ಅತಿಹೆಚ್ಚು ರೇಟಿಂಗ್ ಪಡೆದುಕೊಂಡ ಚಿತ್ರ ಎಂಬ ವಿಶ್ವ ದಾಖಲೆಯನ್ನು ಈಗಾಗಲೇ ಪಡೆದುಕೊಂಡಿದ್ದು, ಇಂದಿಗೆ 73000 ವೋಟ್ ಪೂರೈಸಿದೆ ಹಾಗೂ ಇನ್ನೂ ಸಹ 99% ರೇಟಿಂಗ್ ಅನ್ನೇ ಪಡೆದುಕೊಂಡಿದೆ. ಕಾಂತಾರ ಸಿನಿಮಾ ಹಿಂದಿಯಲ್ಲಿ ಭರ್ಜರಿ ಗಳಿಕೆ ಮಾಡುವ ಎಲ್ಲಾ ಸೂಚನೆ ಪ್ರೊಮೋಶನ್ ನೋಡುತ್ತಿದ್ದರೆ ಗೊತ್ತಾಗುತ್ತಿದೆ. ಇನ್ನೇನಿದ್ದರೂ ನಾರ್ತ್ ಬೆಲ್ಟ್ ನಲ್ಲಿ ಕಾಂತಾರ ಕಲರವ ಅಷ್ಟೇ. ಚಿತ್ರದ ಕುರಿತು ವ್ಯಾಪಕವಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಈ ವಾರದ ಬಾಲಿವುಡ್ ಸಿನಿಮಾಗಳಿಗೆ ಸವಾಲಾಗಬಹುದು ಎನ್ನಲಾಗುತ್ತಿದೆ.