ಹೀಟರ್, ಗೀಸರ್ ಹಾಗು ಫ್ರಿಡ್ಜ್ ಮನೆಯಲ್ಲಿ ಬಳಸುತ್ತಿದ್ದೀರಾ? ವಿದ್ಯುತ್ ಬಿಲ್ ವಿಪರೀತ ಬರುತ್ತಿದ್ದರೆ ಈ ಉಪಾಯ ಅನುಸರಿಸಿ ವಿದ್ಯುತ್ ಬಿಲ್ ಕಡಿಮೆ ಮಾಡಿಕೊಳ್ಳಿ.

980

ಚಳಿಗಾಲ ಬರುತ್ತಲೇ ಹೀಟರ್ ಹಾಗು ಗೀಸರ್ ನ ಉಪಯೋಗಿಸೋದು ಜಾಸ್ತಿ ಆಗುತ್ತದೆ. ಅದೇ ರೀತಿ ಬೇಸಿಗೆ ಕಾಲ ಬಂದರೆ ಏರ್ ಕಂಡೀಶನ್ ಹಾಗು ಫ್ಯಾನ್ ಬಳಸೋದು ಅಧಿಕವಾಗಿರುತ್ತದೆ. ಅದು ಇಲ್ಲದೆ ಇಂದಿನ ಕಾಲದಲ್ಲಿ ಇರೋದೇ ಒಂದುತರಹ ಕಷ್ಟ ಆಗಿಬಿಟ್ಟಿದೆ. ಅದೇ ಕಾರಣಕ್ಕೆ ಮನೆಯಲ್ಲಿ ಅದರಲ್ಲೂ ಮಾಧ್ಯಮ ವರ್ಗದ ಜನರಿಗೆ ವಿದ್ಯುತ್ ಬಿಲ್ ಕಟ್ಟೋದೇ ಒಂದು ತಲೆ ಬಿಸಿ ಆಗಿದೆ. ಈ ಎಲೆಕ್ಟ್ರಿಕ್ ಉಪಕರಣ ಸರಿಯಾದ ರೀತಿಯಲ್ಲಿ ಬಳಸುವುದು ನಿಮಗೆ ಗೊತ್ತಿದ್ದರೆ ಈ ವಿದ್ಯುತ್ ಅಧಿಕದ ಸಮಸ್ಯೆನೆ ಇರಲ್ಲ.

೫ ಸ್ಟಾರ್ ಎಲೆಕ್ಟ್ರಿಕ್ ಉಪಕರಣಗಳನ್ನು ಬಳಸಿ – ನೀವು ಯಾವುದೇ ಎಲೆಕ್ಟ್ರಿಕ್ ಉಪಕರಣಗಳಲ್ಲಿ ಹೀಟರ್, ಗೀಸರ್ ಫ್ರಿಡ್ಜ್ ಮುಂತಾದ ಗೃಹ ಉಪಯೋಗಿ ವಸ್ತುಗಳನ್ನು ಕೊಂಡುಕೊಳ್ಳುವ ಮೊದಲು ಅದು ೫ ಸ್ಟಾರ್ ಇದೆಯೇ ಎಂದು ನೋಡಿ. ಏಕೆಂದರೆ ಈ ೫ ಸ್ಟಾರ್ ಉಪಕರಣಗಳು ವಿದ್ಯುತ್ ಕಡಿಮೆ ಉಪಯೋಗಿಸುತ್ತದೆ ಹಾಗೇನೇ ವಿದ್ಯುತ್ ಬಿಲ್ ಕೂಡ ಕಡಿಮೆ ಬರುತ್ತದೆ. ಈ ತರಹದ ೫ ಸ್ಟಾರ್ ಗೃಹ ಉಪಯೋಗಿ ಎಲೆಕ್ಟ್ರಿಕ್ ಉಪಕರಣಗಳು ಎಲ್ಲ ಕಡೆಯ ಎಲೆಕ್ಟ್ರಿಕ್ ಶಾಪ್ ಗಳಲ್ಲಿ ಸಿಗುತ್ತದೆ. ಕೊಳ್ಳುವಾಗ ಇವನ್ನು ನೆನಪಿನಲ್ಲಿಟ್ಟುಕೊಂಡು ಖರೀದಿಸಿ.

ಈ ಚಳಿಗಾಲ ಹಾಗು ಮಳೆಗಾಲದಲ್ಲಿ ನಾವುಗಳು ಮನೆಯಲ್ಲಿ ಗೀಸರ್ ಸಮಯವಾಗಿ ಬಳಸುತ್ತೇವೆ. ಅದೇ ಗೀಸರ್ ನೀವು ಖರೀದಿ ಮಾಡುವಾಗ ಲೋಕಲ್ ಗೀಸರ್ ಖರೀದಿಸಬೇಡಿ ಏಕೆಂದರೆ ಅವು ಜಾಸ್ತಿ ಹೊತ್ತು ನೀರು ಬಿಸಿಯಾಗಿರಿಸುವುದಿಲ್ಲ ಬೇಗ ಬಿಸಿ ಆದರೂ ಕೂಡ ಅಷ್ಟೇ ಬೇಗ ತಣ್ಣಗಾಗಿ ಹೋಗುತ್ತವೆ. ನೀವು ನೀರು ಬಿಸಿ ಮಾಡಲು ಗಡಿ ಗಡಿ ಸ್ವಿಚ್ ಆನ್ ಮಾಡಬೇಕಾಗುತ್ತದೆ. ಅದಕ್ಕಾಗಿ ನೀವು ಕೊಂಡು ಕೊಳ್ಳುವಾಗ ೧೦-೧೫ ಲೀಟರ್ ನೀರು ಶೇಕರಿಸಬಲ್ಲ ಹಾಗು ೪-೫ ಗಂಟೆ ತನಕ ನೀರು ಬಿಸಿ ಆಗಿರಬಲ್ಲ ಹೈ ಕೆಪ್ಯಾಸಿಟಿ ಗೀಸರ್ ಅನ್ನು ಖರೀದಿಸಲು ಮರೆಯಬೇಡಿ.

ಈ ಚಳಿಗಾಲದಲ್ಲಿ ಕೆಲವರು ಮನೆಯ ಒಳಗಡೆ ಬೆಚ್ಚನೆ ಇರಲಿ ಅಂತ ಹೀಟರ್ ಅಳವಡಿಸಿರುತ್ತಾರೆ. ಅದು ಗಂಟೆಗಳ ಕಾಲ ಚಾಲನೆಯಲ್ಲೇ ಇರುತ್ತದೆ. ಇದರಿಂದ ವಿದ್ಯುತ್ ಬಳಕೆಯು ಅಧಿಕವಾಗಿರುತ್ತದೆ. ಅದಕ್ಕಾಗಿ ಹೀಟರ್ಗಳನ್ನು ಸ್ವಲ್ಪ ಸಮಯ ಬಳಕೆ ಮಾಡಿ ಸ್ವಿಚ್ ಆಫ್ ಮಾಡಿ ಇಡೀ ನಿಮ್ಮ ಮನೆ ಒಳಗೆ ಸ್ವಲ್ಪ ಸಮಯ ಬೆಚ್ಚನೆ ಇರುತ್ತದೆ. ಅದೇ ರೀತಿ ಬ್ರೇಕ್ ನೀಡುತ್ತಾ ಹೀಟರ್ ಬಳಸಿದರೆ ವಿದ್ಯುತ್ ಬಳಕೆಯು ಕಡಿಮೆ ಇರುತ್ತದೆ ಅದೇ ರೀತಿ ಮನೆ ಕೂಡ ಬೆಚ್ಚನೆ ಇರುತ್ತದೆ. ಅಲ್ಲದೆ ಈ ಹೀಟರ್ ಬಳಕೆ ಮಾಡುವುದರಿಂದ ಅರೋಗ್ಯ ಸಮಸ್ಯೆ ಕೂಡ ಉಂಟಾಗಬಹದು ಆದ್ದರಿಂದ ಈ ವಿದ್ಯುತ್ ಉಪಕರಣ ಬಳಸುವುದು ಕಡಿಮೆ ಮಾಡಿದರೆ ವಿದ್ಯುತ್ ಬಿಲ್ ಕೂಡ ಕಡಿಮೆ ಮಾಡಬಹುದು ಅದೇ ರೀತಿ ಅರೋಗ್ಯ ಕೂಡ ಕಾಪಾಡಿಕೊಳ್ಳಬಹದು.

Leave A Reply

Your email address will not be published.