ಹೆಂಡತಿ ಕೊಟ್ರು ಬಿಸಿನೆಸ್ ಐಡಿಯಾ, ವಿದೇಶದಿಂದ ಮರಳಿದ ಪತಿ. ಇದೀಗ ವಾರ್ಷಿಕವಾಗಿ ನಡೆಸುತ್ತಿದ್ದಾರೆ ೨ ಕೋಟಿ ವ್ಯವಹಾರ.

661

ಪ್ರತಿ ಒಬ್ಬ ಮನುಷ್ಯನಿಗೂ ಜೀವನದಲ್ಲಿ ಒಂದು ಹವ್ಯಾಸ ಎಂಬುವುದು ಇದ್ದೆ ಇರುತ್ತದೆ. ಅದು ಕೆಟ್ಟ ಹವ್ಯಾಸ ಆಗಿರಬಹುದು ಅಥವಾ ಒಳ್ಳೆಯ ಹವ್ಯಾಸ ಆಗಿರಬಹುದು. ಆದರೆ ಒಳ್ಳೆಯ ಹವ್ಯಾಸಗಳು ಮನುಷ್ಯನ ಜೀವನ ರೂಪಿಸಲು ಸಹಕರಿಸುತ್ತದೆ. ಆದರೆ ನಾವು ಇಂದು ತಿಳಿಯಲು ಹೊರಟ ಈ ಘಟನೆಯಲ್ಲಿ ಒಂದು ಹವ್ಯಾಸ ಜೀವನವನ್ನೇ ಬದಲಿಸಿದೆ. ಇದೆ ಹವ್ಯಾಸದಿಂದ ಇಂದು ಕೋಟ್ಯಾಂತರ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ.

ಇವರ ಹೆಸರು ಗಗನ್ ಮತ್ತು ನಿತಿಶಾ , ಇವರ ಪತ್ನಿಗೆ ಪೈಂಟಿಂಗ್ ಎಂದರೆ ಬಹಳ ಇಷ್ಟ ವಾಗಿತ್ತು. ಇವರು ಗಂಡನ ಬಟ್ಟೆಯ ಮೇಲೆ ಪೈಂಟಿಂಗ್ ಬರೆಯುತ್ತಿದ್ದರು. ಗಗನ್ ಕೂಡ ಅದನ್ನು ಖುಷಿಯಿಂದಲೇ ಹಾಕಿಕೊಂಡು ಹೋಗುತ್ತಿದ್ದರು. ಜನರು ಕೂಡ ತುಂಬಾ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದರು. ಹಾಗಾದರೆ ಇದನ್ನೇ ಯಾಕೆ ಉದ್ಯಮವಾಗಿ ಮಾಡಬಾರದು ಎಂದು ನಿರ್ಧರಿಸಿ ಇಂಧೋರ್ ಗೆ ತೆರಳಿತು ಈ ಜೋಡಿ. ತಮ್ಮ ಆದಾಯದಲ್ಲಿ ಉಳಿಸಿದ್ದ 15ಲಕ್ಷ ಹಣವನ್ನು ಹೂಡಿಕೆ ಮಾಡಿದರು. ಈ ಹಿಂದೆ ಗಗನ್ ವಿದೇಶದಲ್ಲಿ ಬಟ್ಟೆಯ ಕಂಪನಿ ಒಂದಕ್ಕೆ ಕೆಲಸ ಮಾಡಿ ಅನುಭವ ಹೊಂದಿದ್ದರು. ಹೆಂಡತಿಗೆ ಮಾತ್ರ ಅಲ್ಲಿರುವಾಗ ಕೆಲಸ ಮಾಡಲು ಸಾಧ್ಯ ಆಗುತ್ತಿರಲಿಲ್ಲ.

ಹೀಗೆ ಆರಂಭ ಗೊಂಡ ಉದ್ಯಮ ಉತ್ತಮ ಬೇಡಿಕೆ ಬರಲು ಆರಂಭ ವಾಯಿತು. ಕೇವಲ ಬಟ್ಟೆಯಲ್ಲಿ ಇದ್ದ ಈ ವಹಿವಾಟು ಬೆಡ್ಶೀಟ್ , ದಿಂಬು ಕವರ್ ವಸ್ತುಗಳ ಮೇಲಿನ design ವರೆಗೂ ಹೋಯಿತು. ದೇಶ ಅಲ್ಲದೇ ವಿದೇಶದಿಂದ ಕೂಡ ಬೇಡಿಕೆ ಬರಲು ಆರಂಭವಾಯಿತು. ಇದೀಗ ಉತ್ತಮ ವಹಿವಾಟು ನಡೆಸುತ್ತಿದ್ದು. ವಾರ್ಷಿಕ 2 ಕೋಟಿ ರೂಪಾಯಿ ವರೆಗಿನ ಲಾಭ ಪಡೆಯುತ್ತಿದೆ ಕಂಪನಿ. ವಿದ್ಯಮಾನ (advertisement ) – ನಿಮಗೆ ಇನ್ಕಮ್ ಟ್ಯಾಕ್ಸ್ GST ಹಾಗು PF ನಂತಹ ಯಾವುದೇ ಪ್ರಕಾರದ ಕೆಲಸವಿದ್ದಲ್ಲಿ ನಮ್ಮನ್ನು ಸಂಪರ್ಕಿಸಿ – 9902427459

Leave A Reply

Your email address will not be published.