ಹೆಣ್ಣು ಮೀನು ಇಟ್ಟ ಮೊಟ್ಟೆಯನ್ನು 50 ದಿನಗಳ ತನಕ ಬಾಯಲ್ಲಿ ಇಟ್ಟು ಕೊಳ್ಳುತ್ತದೆ ಗಂಡು ಮೀನು? ಏನಿದು ಪ್ರಕ್ರಿಯೆ ಯಾವುದು ಆ ಮೀನು?

373

ಈ ಪ್ರಕೃತಿಯ ರಚನೆಯೇ ವಿಚಿತ್ರ ನೋಡಿ. ಕೆಲವೊಂದು ವಿಚಾರಗಳಿಗೆ ಉತ್ತರಗಳೇ ಇಲ್ಲ, ಈ ಪ್ರಾಕೃತಿಕ ಬದಲಾವಣೆ ಹೀಗೆ ಏನು ಎಂಬುದು ಯಾರಿಗೂ ತಿಳಿದಿಲ್ಲ. ಪ್ರಕೃತಿಗೆ ವಿರುದ್ದವಾಗಿ ಅದನ್ನು ಹುಡುಕುವ ಪ್ರಯತ್ನ ಕೂಡ ನಾವು ಮಾಡದೆ ಇರುವುದು ಒಳ್ಳೆಯದು. ಅಂತಹುದೇ ಒಂದು ಅದ್ಭುತದ ಬಗೆಗೆ ನಾವು ಇಂದು ತಿಳಿಯುವ. ಹೌದು ನಾವು ಇಂದು ತಿಳಿಯಲು ಹೊರಟಿರುವ ಆ ಜೀವಿ ಮೀನಿನ ಒಂದು ಪ್ರಭೇದ. ಹೌದು ಮೀನು ಎಂದರೆ ಎಲ್ಲರಿಗೂ ಗೊತ್ತಿದೆ. ಸಾಮಾನ್ಯವಾಗಿ ಮೀನುಗಳು ನೀರಿನಲ್ಲಿ ಮೊಟ್ಟೆ ಹಾಕುತ್ತವೆ ಮತ್ತು ಅದು ಸರಿ ಸುಮಾರು 40 ರಿಂದ 50 ದಿನಗಳ ನಂತರ ಮರಿಯಾಗುತ್ತದೆ. ಇದು ನೈಸರ್ಗಿಕವಾಗಿ ನಡೆಯುವಂತಹ ಕ್ರಿಯೆ.

ಆದರೆ ಇಲ್ಲಿ ಒಂದು ಪ್ರಭೇದದ ಮೀನುಗಳ ಸಂತಾನ ಉತ್ಪತ್ತಿಯ ಕಥೆಯೇ ವಿಚಿತ್ರ ಹೌದು ಬನ್ನಿ ತಿಳಿಯೋಣ ಯಾವುದು ಆ ಮೀನು ಎಂದು. ಅರೋನಾ ಎಂಬ ಜಾತಿಗೆ ಸೇರಿದ ಮೀನು ಗಂಡು ಮತ್ತು ಹೆಣ್ಣು ಸದಾ ಒಟ್ಟಾಗಿ ಇರುತ್ತದೆ. ಇಲ್ಲಿ ಹೆಣ್ಣು ಮೀನು ಮೊಟ್ಟೆ ಇಟ್ಟ ಕೂಡಲೇ ಗಂಡು ಮೀನು ಆ ಮೊಟ್ಟೆಯನ್ನು ಸಂರಕ್ಷಿಸುವ ಹೊಣೆ ಹೊರುತ್ತದೆ. ಹೌದು ಇದು ಸಾಮಾನ್ಯ ಮೀನಿನ ಹಾಗೆ ನೀರಿನಲ್ಲೇ ಮೊಟ್ಟೆಗಳನ್ನು ಬಿಡುವುದಿಲ್ಲ ಬದಲಾಗಿ ಗಂಡು ಮೀನು ಮೊಟ್ಟೆಗಳನ್ನು ತನ್ನ ಬಾಯೊಳಗೆ ಇಟ್ಟು ಕೊಳ್ಳುತ್ತದೆ. ಹೌದು ವಿಚಿತ್ರ ಎನಿಸಿದರೂ ಸತ್ಯ ಸಂಗತಿ.

ಇದು ಬರೋಬ್ಬರಿ 50 ದಿನಗಳ ಕಾಲ ಮೊಟ್ಟೆಗಳನ್ನು ಬಾಯಲ್ಲೇ ಇಟ್ಟು ಕೊಳ್ಳುತ್ತದೆ. 50 ದಿನಗಳ ನಂತರ ಮೊಟ್ಟೆಯಿಂದ ಮರಿಗಳು ಗಂಡು ಮೀನಿನ ಬಾಯಿಂದಲೇ ಹೊರ ಬರುತ್ತದೆ. ಇದು ಯಾವುದೇ ವಿಸ್ಮಯಕ್ಕೆ ಕಡಿಮೆ ಇಲ್ಲ. ಆದರೆ 50 ದಿನಗಳ ಕಾಲ ಗಂಡು ಮೀನು ಆಹಾರ ಹೇಗೆ ಸೇವಿಸುತ್ತವೆ, ಹೇಗೆ ಅಷ್ಟೊಂದು ಪ್ರಮಾಣದ ಮೊಟ್ಟೆಗಳನ್ನು ಬಾಯಲ್ಲಿ ಇರಿಸುತ್ತದೆ ಎಂಬ ಪ್ರಶ್ನೆಗಳಿಗೆ ಉತ್ತರ ಇಲ್ಲ. ಅದೇನೇ ಆಗಲಿ ಪ್ರಕೃತಿ ದತ್ತ ವಿಸ್ಮಯಗಳು ವಿಸ್ಮಯವಾಗಿಯೆ ಉಳಿಯಲಿ.

Leave A Reply

Your email address will not be published.