ಹೊಸ ಪ್ರಿಪೇಯ್ಡ್ ಪ್ಲಾನ್ ಜಾರಿ ಮಾಡಿದ BSNL. ಕೇವಲ 94 ರುಪಾಯಿಗೆ ಸಿಗುತ್ತಿದೆ 75 ದಿನಗಳವೆರೆಗಿನ ಇಂಟರ್ನೆಟ್ ಸೇವೆ. ಎಷ್ಟು GB ಡೇಟಾ ನೀಡುತ್ತಿದೆ ಗೊತ್ತೇ?

395

BSNL ಸರಕಾರಿ ಟೆಲಿಕಾಂ ಸಂಸ್ಥೆ ಹೊಸ ಪ್ರಿಪೇಯ್ಡ್ ಯೋಜನೆ ಜಾರಿಗೆ ತಂದಿದೆ. ಇದರ ಬೆಲೆ ಕೇವಲ ೯೪ ರೂಪಾಯಿ ಹಾಗು ಇದರ ವ್ಯಾಲಿಡಿಟಿ ೭೫ ದಿನಗಳ ವರೆಗೆ ಬರಲಿದೆ. ಒಂದು ಕಡೆ JIO ಏರ್ಟೆಲ್ ಹಾಗು ಐಡಿಯಾ ತನ್ನ ಪ್ರಿಪೇಯ್ಡ್ ಯೋಜನೆ ಬೆಲೆ ಜಾಸ್ತಿ ಮಾಡುತ್ತಿದೆ. ಇನ್ನೊಂದು ಕಡೆ BSNL ಗ್ರಾಹಕರಿಗೆ ಆಕರ್ಷಕ ಕಡಿಮೆ ಬೆಳೆಯ ಯೋಜನೆಗಳನ್ನು ಜಾರಿ ಮಾಡುತ್ತಿದೆ. BSNL ನ ಎಲ್ಲ ಯೋಜನೆಯ ಬಗ್ಗೆ ಇಲ್ಲಿದೆ ಮಾಹಿತಿ.

BSNL ನ ಹೊಸ ಪ್ರಿಪೇಯ್ಡ್ ಯೋಜನೆ ತನ್ನ ಗ್ರಾಹಕರಿಗೆ ಹೊಸ ಆಕರ್ಷಕ ಆಫರ್ ಗಳನ್ನೂ ಕೂಡ ನೀಡುತ್ತಿದೆ. ಬೇರೆ ಖಾಸಗಿ ಟೆಲಿಕಾಂ ಸಂಸ್ಥೆಗಳು ಬೆಲೆ ಏರಿಸಿದ ಸಮಯದಲ್ಲಿ BSNL ಈ ಆಕರ್ಷಕ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಇದರಿಂದ BSNL ಉಳಿದ ಟೆಲಿಕಾಂ ಸಂಸ್ಥೆಗಳಿಗೆ ಕಾಂಪಿಟಿಷನ್ ಕೊಡುವ ಯೋಜನೆ ಹಾಕಿಕೊಂಡಿದೆ. BSNL ಹೊಸ ಪ್ಲಾನ್ STV – 94 ಯೋಜನೆಯ ವ್ಯಾಲಿಡಿಟಿ 75 ದಿನಗಳವರೆಗೆ ಇದೆ.ಇದರಲ್ಲಿ ಒಟ್ಟು 3GB ಗಳಷ್ಟು ಡೇಟಾ ನೀಡಲಾಗುತ್ತಿದೆ. ಇದಕ್ಕೆ ಯಾವುದೇ ದೈನಂದಿನ ಲಿಮಿಟ್ ಎನ್ನುವುದಿಲ್ಲ. ಇದಲ್ಲದೆ ೧೦೦ ನಿಮಿಷಗಳಷ್ಟು ವಾಯ್ಸ್ ಕಾಲಿಂಗ್ ಸೌಲಭ್ಯ ನೀಡುತ್ತಿದೆ ಇದು BSNL ನೆಟ್ವರ್ಕ್ ಅಲ್ಲದೆ ಎಲ್ಲ ನೆಟ್ವರ್ಕ್ ಗಳಿಗೂ ಉಚಿತವಾಗಿದೆ.

ಈ ೧೦೦ ನಿಮಿಷಗಳ ವಾಯ್ಸ್ ಕಾಲಿಂಗ್ ಮುಗಿದ ಮೇಲೆ ಪ್ರತಿ ನಿಮಿಷಕ್ಕೆ ೩೦ ಪೈಸೆ ಗಳಷ್ಟು ಚಾರ್ಜ್ ಮಾಡಲಾಗುತ್ತದೆ. ಇದಲ್ಲದೆ ೬೦ ದಿನಗಳವರೆಗೆ ಉಚಿತ ಕಾಲರ್ ಟ್ಯೂನ್ ಕೂಡ BSNL ನೀಡುತ್ತಿದೆ. ವೈಫೈ ನೆಟ್ವರ್ಕ್ ಇರುವ ಅಥವಾ ಹೆಚ್ಚು ಇಂಟರ್ನೆಟ್ ಬಳಸದ ಜನರಿಗೆ ಇದೊಂದು ಅತ್ಯುತ್ತಮ ಆಫರ್ ಆಗಿದೆ. ಇದಲ್ಲದೆ BSNL ೭೫ ರೂಪಾಯಿಗಳ ಇನ್ನೊಂದು ೫೦ ದಿನಗಳ ಯೋಜನೆ ತರುತ್ತಿದೆ. ಇದರಲ್ಲಿ ಒಟ್ಟು 2GB ಡೇಟಾ ನೀಡಲಾಗುತ್ತಿದೆ. ಇದಕ್ಕೆ ಯಾವುದೇ ಡೈಲಿ ಲಿಮಿಟ್ ಇಲ್ಲ ಕೇವಲ ೫೦ ದಿನಗಳವರೆಗೆ ಸಿಗಲಿದೆ. ಅಲ್ಲದೆ ಇದರಲ್ಲಿಯೂ ೧೦೦ ನಿಮಿಷಗಳ ಉಚಿತ ಕಾಲಿಂಗ್ ಸೇವೆ ಸಿಗಲಿದೆ.

Leave A Reply

Your email address will not be published.