೩೫ ಬಾರಿ ಫೇಲ್: ನೆರೆಹೊರೆಯವರಿಂದ ನಗೆಪಾಟಲಿಗೀಡಾದವರು. ಈಗ ಐಪಿಎಸ್ ಪರೀಕ್ಷೆ ಪಾಸ್ ಆಗಿ ತಂದೆ ತಾಯಿ ತಲೆ ಎತ್ತುವಂತೆ ಮಾಡಿದ ಮಗ.
ತನ್ನ ಕನಸು ನನಸಾದರೆ ಒಬ್ಬ ವ್ಯಕ್ತಿ ಬಹಳ ಸಂತಸ ಪಡುತ್ತಾನೆ. ಆದರೆ ಒಬ್ಬ ವ್ಯಕ್ತಿ ತನ್ನ ಕನಸು ನನಸು ಮಾಡುವಲ್ಲಿ ವಿಫಲನಾದರೆ ಅದೇ ವ್ಯಕ್ತಿಯ ಮನೋಬಲ ಕಡಿಮೆ ಆಗುತ್ತದೆ. ಆದರೆ ಇಲ್ಲೊಬ್ಬ ೩೫ ಬಾರಿ ಫೇಲ್ ಆಗಿ ಸಮಾಜದಲ್ಲಿ ನಗೆಪಾಟಲಿಗೊಳಗಾದರು ಕೂಡ ದೃತಿಗೆಡದೆ IPS ಪರೀಕ್ಷೆ ಅಲ್ಲಿ ಪಾಸ್ ಆಗಿ ಹೆತ್ತವರು ಸಮಾಜದಲ್ಲಿ ತಲೆ ಎತ್ತಿ ಹೋಗುವಂತೆ ಮಾಡಿದ್ದಾರೆ. ಈ ವ್ಯಕ್ತಿ ಪ್ರತಿ ಯುವಕರಿಗೆ ಸ್ಪೂರ್ತಿಯಾಗಿದ್ದು ಪ್ರತಿಯೊಬ್ಬರೂ ಇವರನ್ನು ಅನುಸರಿಸಲೇ ಬೇಕು.
ಈ ಐಪಿಎಸ್ ಅಧಿಕಾರಿಯ ಹೆಸರು ವಿಜಯ್ ವರ್ಧನ್ ಆಗಿದೆ. ಇವರು ೩೫ ಬಾರಿ ಫೇಲ್ ಆದ ನಂತರ ಐಪಿಎಸ್ ಪರೀಕ್ಷೆಯಲ್ಲಿ ಪಾಸಾದವರು. ಇವರು ತಮ್ಮ ಜೀವನದಲ್ಲಿ ಕಂಡಂತಹ ಅಸಫಲತೆಯಿಂದ ಹೆದರಿ ತನ್ನ ಕನಸನ್ನು ಅರ್ಧದಲ್ಲೇ ಬಿಟ್ಟವರಲ್ಲ. ಇವರು ಐಪಿಎಸ್ ಪರೀಕ್ಷೆ ಪಾಸ್ ಮಾಡಿ ದೇಶದ ಸೇವೆ ಮಾಡಲು ನಿಂತವರು. ಹರ್ಯಾಣದ ಸಿರ್ಸಾ ಊರಿನವರಾದ ವಿಜಯ್ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಅದೇ ಊರಲ್ಲಿ ಪೂರ್ಣಗೊಳಿಸಿದರು. ತಮ್ಮ ಪದವಿ ಶಿಕ್ಷಣ ಮುಗಿದ ಮೇಲೆ UPSC ಪರೀಕ್ಷೆ ಬರೆಯಲು ನಿರ್ಧರಿಸಿದರು. ಅದಕ್ಕೆ ಅವರು ಹಾರಿಯಾಣದಿಂದ ದೆಹಲಿಗೆ ಬಂದು ನೆಲೆಸಿದರು.
ಅಲ್ಲಿ ಎಲ್ಲ ಪರೀಕ್ಷೆ ಬರೆಯುವ ವಿದ್ಯಾರ್ಥಿಯಂತೆ ತಾನು ಕೂಡ ಕೋಚಿಂಗ್ ಸೆಂಟರ್ ಗೆ ಸೇರಿಕೊಂಡರು. ಆದರೆ ಅವರಿಗೆ ತಮ್ಮ ಗುರಿ ಮುಟ್ಟುವ ಮಾರ್ಗದಲ್ಲಿ ಅನೇಕ ತೊಡಕುಗಳನ್ನು ಎದುರಿಸಬೇಕಾಯಿತು. ಎಲ್ಲ ತರಹದ ಪರೀಕ್ಷೆಗಳಲ್ಲೂ ವಿಜಯ್ ಅಪ್ಲೈ ಮಾಡಿದ್ದರು. ಆದರೆ ಎಲದರಲ್ಲೂ ಅನುತ್ತೀರ್ಣಗೊಂಡರು. ಒಟ್ಟಾರೆ ೩೫ ಬಾರಿ ಪರಿಷೆಗಳಲ್ಲಿ ಫೇಲ್ ಆದರೂ ತನ್ನ ಗುರಿ ಸಾದಿಸುವ ಛಲ ಬಿಡಲಿಲ್ಲ. ೨೦೧೮ ರಲ್ಲಿ ಇನ್ನೊಮ್ಮೆ ಪರೀಕ್ಷೆ ಬರೆದು ೧೦೪ ನೇ ರಾಂಕ್ ಪಡೆದರು. ೩೫ ಬಾರಿ ಫೇಲ್ ಆದಾಗ ಪರೀಕ್ಷೆ ಬರೆಯುವುದು ಬೇಡ ಎಂದು ಹೇಳಿದ ಎಲ್ಲರ ಬಾಯಿ ಮುಚಿಸಿವ ಹಾಗೆ ಪರೀಕ್ಷೆ ಪಾಸ್ ಆಗಿ ದೇಶದ ಸೇವೆ ಮಾಡುತ್ತಿದ್ದಾರೆ. ಇದು ಇಂದು ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಎಲ್ಲರಿಗು ಸ್ಪೂರ್ತಿಯಾಗಿದೆ.