ನಿಮ್ಮ ಮನೆಯಲ್ಲಿ ತುಳಸಿ ಗಿಡ ಇದ್ದರೇ, ಅಪ್ಪಿ ತಪ್ಪಿಯೂ ಕೂಡ ಈ ಎರಡು ದಿನ ಗಿಡವನ್ನು ಯಾವುದೇ ಕಾರಣಕ್ಕೂ ಮುಟ್ಟಬೇಡಿ. ಯಾವ್ಯಾವ ದಿನಗಳು ಗೊತ್ತೇ??

ಹಿಂದೂ ಧರ್ಮದಲ್ಲಿ ಸಾಕಷ್ಟು ಜನರು ತುಳಸಿ ಗಿಡಕ್ಕೆ ಪೂಜೆ ಮಾಡುತ್ತಾರೆ, ತುಳಸಿಯನ್ನು ದೇವರ ಹಾಗೆ ಭಾವಿಸಿ ಆರಾಧನೆ ಸಹ ಮಾಡುತ್ತಾರೆ, ಏಕೆಂದರೆ ತುಳಸಿಯಲ್ಲಿ ಬಹಳಷ್ಟು ಔಷಧೀಯ ಗುಣಗಳಿವೆ, ಹಾಗೆಯೇ ಆಯುರ್ವೇದದಲ್ಲಿ ತುಳಸಿಯನ್ನು ಉಪಯೋಗಿಸುತ್ತಾರೆ. ಅಷ್ಟೇ ಅಲ್ಲದೆ ಈ ಗಿಡದಲ್ಲಿ ಲಕ್ಷ್ಮೀದೇವಿಯ ಕಾರಂಜಿ ಹೊಂದಿದೆ ಎಂದು ಸಹ ನಂಬಿಕೆ ಇದೆ. ಅದರಿಂದ ತುಳಸಿ ಗಿಡವನ್ನು ಪೂಜೆ ಮಾಡುತ್ತಾರೆ. ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ಗೌರವಾನ್ವಿತ ಸ್ಥಾನ ನೀಡಲಾಗಿದೆ, ತುಳಸಿ ಗಿಡವನ್ನು ಪ್ರತಿದಿನ ಪೂಜೆ ಮಾಡುವುದರಿಂದ ಲಕ್ಷ್ಮೀದೇವಿಯ ಆಶೀರ್ವಾದ ಸಿಗುತ್ತದೆ ಎನ್ನುವ ನಂಬಿಕೆ ಸಹ ಇದೆ.

ಮನೆಯಲ್ಲಿ ಯಾವಾಗಲೂ ಎಲ್ಲಾರು ಆರೋಗ್ಯದಿಂದ, ಸಂತೋಷದಿಂದ ಇರುವುದಕ್ಕೆ ಮನೆಯಲ್ಲಿ ಸುಖ ಶಾಂತಿ ನೆಲೆಸಬೇಕು ಎಂದರೆ, ತುಳಸಿಯನ್ನು ತಪ್ಪದೆ ಪೂಜಿಸಬೇಕು. ಆದರೆ ತುಳಸಿ ಪೂಜೆ ಮಾಡುವಾಗ ಕೆಲವು ವಿಚಾರಗಳ ಬಗ್ಗೆ ವಿಶೇಷವಾದ ಕಾಳಜಿ ಇಟ್ಟುಕೊಳ್ಳಬೇಕು. ತುಳಸಿ ಗಿಡವನ್ನು ಸಂಜೀವಿನಿ ಎಂದು ಕರೆಯುತ್ತಾರೆ, ಕೆಲವರು ತುಳಸಿ ಎಲೆಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಸೇವಿಸುತ್ತಾರೆ. ಈ ರೀತಿ ಮಾಡುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಹಾಗೆಯೇ ಅನಾರೋಗ್ಯ ಉಂಟಾಗದೆ ಇರಲು ಸಹಾಯ ಮಾಡುತ್ತದೆ ಎನ್ನುವ ನಂಬಿಕೆ ಇದೆ. ಆದರೆ ತುಳಸಿ ಗಿಡದಿಂದ ಎಲೆಗಳನ್ನು ಕೀಳುವಾಗ ಕೆಲವು ವಿಚಾರಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು, ಯಾವ ಸಮಯ, ಯಾವ ದಿನ ತುಳಸಿ ಗಿಡವನ್ನು ಮುಟ್ಟಬಾರದು ಎಂದು ಸಹ ತಿಳಿದುಕೊಳ್ಳಬೇಕು..

ಶಾಸ್ತ್ರದ ಪ್ರಕಾರ ತುಳಸಿಯನ್ನು ರಾತ್ರಿ ಮತ್ತು ಸೂರ್ಯಾಸ್ತದ ಸಮಯದಲ್ಲಿ ಮುಟ್ಟಬಾರದು, ರಾತ್ರಿ ಸಮಯದಲ್ಲಿ ತುಳಸಿ ಗಿಡವನ್ನು ಮುಟ್ಟುವುದರಿಂದ ಆರ್ಥಿಕ ವಿಚಾರದಲ್ಲಿ ತೊಂದರೆಗಳು ಉಂಟಾಗುತ್ತದೆ ಎಂದು ಹೇಳುತ್ತಾರೆ. ಹಾಗೆಯೇ ರಾತ್ರಿ ಸಮಯದಲ್ಲಿ ತುಳಸಿ ಗಿಡಕ್ಕೆ ನೀರು ಹಾಕಬಾರದು, ಹಾಗೆ ಭಾನುವಾರ ತುಳಸಿ ಗಿಡವನ್ನು ಮುಟ್ಟಬಾರದು ಎಂದು ಹೇಳುತ್ತಾರೆ. ಈ ದಿನ ತುಳಸಿ ಗಿಡಕ್ಕೆ ನೀರು ಹಾಕುವುದು ಸಹ ಒಳ್ಳೆಯದಲ್ಲ, ಭಾನುವಾರದ ದಿನ ತುಳಸಿ ಉಪವಾಸ ಇರುತ್ತಾರೆ, ಹಾಗೂ ಏಕಾದಶಿ ದಿವಸ ಕೂಡ ತುಳಸಿ ಗಿಡಕ್ಕೆ ನೀರು ಹಾಕಬಾರದು. ಈ ದಿನ ತುಳಸಿದೇವಿಯು ಮಹಾವಿಷ್ಣುವಿಗಾಗಿ ನಿರ್ವಾಣ ವ್ರತ ಮಾಡುತ್ತಾರೆ ಎಂದು ಹೇಳುತ್ತಾರೆ. ಇಲ್ಲಿ ಹೇಳಿದ ವಿಚಾರಗಳನ್ನು ಮರೆತರೆ, ಕಷ್ಟಕರವಾದ ಪರಿಸ್ಥಿತಿಗೆ ತಲುಪುತ್ತೀರಿ ಎಂದು ಹೇಳುತ್ತಾರೆ.

Comments (0)
Add Comment