ಬೆಲೆ ಏರಿಸಿದ್ದು ಏರ್ಟೆಲ್ ಆದರೆ ಶಾಕ್ ಸಿಕ್ಕಿದ್ದು ಜಿಯೋ ಗೆ ಏನಿದು ಸುದ್ದಿ ? ಮುಂದಕ್ಕೆ ಓದಿರಿ.

ಏರ್ಟೆಲ್ ಮತ್ತು ಜಿಯೋ ಟೆಲಿಕಾಂ ಕ್ಷೇತ್ರದ ದಿಗ್ಗಜ ಕಂಪನಿಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತದೆ. ಒಂದು ಕಾಲದಲ್ಲಿ ತನ್ನ ಪಾರುಪತ್ಯ ಸ್ಥಾಪಿಸಿದ ಕಂಪನಿ ಏರ್ಟೆಲ್. ಜಿಯೋ ಬಂದ ನಂತರ ತನ್ನ ಅನೇಕ ಗ್ರಾಹಕರನ್ನು ಇದು ಕಳೆದು ಕೊಂಡಿದೆ. ಹೌದು ಜಿಯೋ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಹುಟ್ಟು ಹಾಕಿತ್ತು. ಏರ್ಟೆಲ್ ಒಂದು ಕಾಲದಲ್ಲಿ 250 ರೂಪಾಯಿಗೆ 1 gb data ನೀಡುತ್ತಿದ್ದ ಕಂಪನಿ ಜಿಯೋ ಪ್ರವೇಶದ ನಂತರ ಟೆಲಿಕಾಂ ಚಿತ್ರಣವೇ ಬದಲಾಗಿ ಹೋಯಿತು. ಜನರ ಕೈಗೆಟಕುವ ದರದಲ್ಲಿ ಡೇಟಾ ಸಿಗಲು ಆರಂಭವಾಯಿತು.

ಆದರೆ ಇದೀಗ ತೀವ್ರ ಪೈಪೋಟಿಯಲ್ಲಿ ತೊಡಗಿದೆ ಏರ್ಟೆಲ್ ಮತ್ತು ಜಿಯೋ ಕಂಪನಿಗಳು. ಹೌದು ಆದರೆ ಇತ್ತೀಚಿನ ಬೆಳವಣಿಗೆ ಎಂಬಂತೆ ಏರ್ಟೆಲ್ ತನ್ನ ಎಲ್ಲಾ ಡೇಟಾ ಪ್ಯಾಕ್ ಮತ್ತು ರೀಚಾರ್ಜ್ ಪ್ಯಾಕ್ ಗಳ ಮೇಲಿನ ಸುಂಕ ಹೆಚ್ಚಿಸಿದ್ದು ಗ್ರಾಹಕರಿಗೆ ಬೆಲೆ ಏರಿಕೆಯ ಬರೆ ಎಳೆದಂತೆ ಆಗಿದೆ.

ನವೆಂಬರ್ 26 ರ ನಂತರ tariff ಅನ್ನು 20 ರಿಂದ 25 ಶೇಕಡಾ ಹೆಚ್ಚಳಕ್ಕೆ ಮುಂದಾಗಿದೆ. ಹೌದು ಇದರಿಂದಾಗಿ ಡೇಟಾ ಲಭ್ಯತೆ ಸ್ವಲ್ಪ ದುಬಾರಿ ಆಗುತ್ತದೆ. ಆದರೆ ಇಷ್ಟೆಲ್ಲಾ ಬೆಳವಣಿಗೆ ಆದರೂ ಇದರಿಂದ ಶಾಕ್ ಗೆ ಒಳಗಾಗಿದ್ದು ಅಂಬಾನಿ ಹೌದು ವಿಚಿತ್ರ ಎನಿಸಿದರೂ ಇದು ಸತ್ಯ ಸಂಗತಿ.

TRAI ಇತ್ತೀಚೆಗೆ ಬಿಡುಗಡೆ ಮಾಡಿದ ಅಂಕಿ ಅಂಶಗಳು ಜಿಯೋ ಗೆ ದೊಡ್ಡ ಹೊಡೆತವನ್ನು ನೀಡಿದೆ.ಏರ್ಟೆಲ್ ಕಂಪನಿ ಸೆಪ್ಟೆಂಬರ್ ತಿಂಗಳಲ್ಲಿ 2.4 ಲಕ್ಷ ಹೊಸ ಗ್ರಾಹಕರನ್ನು ಪಡೆದಿದೆ. ಆದರೆ ಅಂಬಾನಿ ಒಡೆತನದ ಜಿಯೋ 1.9 ಕೋಟಿ ಗ್ರಾಹಕರನ್ನು ಕಳ ಕೊಂಡಿದೆ. ಹೌದು ಇದು ಈ ರೀತಿಯ ಬದಲಾವಣೆ ಮೊದಲ ಬಾರಿಗೆ. ದರ ಏರಿಕೆ ಕಂಡರೂ ಏರ್ಟೆಲ್ ತನ್ನ ಗ್ರಾಹಕರನ್ನು ಹೆಚ್ಚಿಸುವಲ್ಲಿ ಯಶಸ್ವಿ ಆಗಿದೆ. ಆದರೆ ಜಿಯೋ ಗೆ ಇದು ಅತ್ಯಂತ ದೊಡ್ಡ ಪ್ರಮಾಣದ ನಷ್ಟ ಎಂದರೂ ತಪ್ಪಾಗಲಿಕ್ಕಿಲ್ಲ.

ಸೆಪ್ಟೆಂಬರ್ ಕೊನೆ ಹಂತದಲ್ಲಿ ಜಿಯೋ ತನ್ನ ಮೊದಲ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿ ಆಗಿದೆ ಆದರೆ ಎಲ್ಲಿಯವರೆಗೆ ಎಂಬ ಪ್ರಶ್ನೆ ಈಗ ಉದ್ಭವ ಆಗಿದೆ. TRAI ವರದಿ ಪ್ರಕಾರ ಜಿಯೋ 42.48 ಕೋಟಿ ಗ್ರಾಹಕರೊಂದಿಗೆ ಮೊದಲ ಸ್ಥಾನದಲ್ಲಿ ಇದೆ. ಏರ್ಟೆಲ್ ದ್ವಿತೀಯ ಸ್ಥಾನ ಸಲ್ಲಿ ಹಾಗೂ VI ತೃತೀಯ ಸ್ಥಾನ ಪಡೆದಿದೆ.

airteltelecom
Comments (0)
Add Comment