ಬೇರೆ ಎಲ್ಲರಿಗಿಂತ ಈ ರಾಶಿಯವರು ಬೆಳ್ಳಿ ಉಂಗುರ ಧರಿಸಿದರೆ ಒಳ್ಳೆಯಂತೆ: ಯಾವ ರಾಶಿಯವರು ಧರಿಸಿದರೆ ಶ್ರೀಮಂತರಾಗುತ್ತೀರಿ ಗೊತ್ತೇ??

ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದು ರಾಶಿಗು ಇಂತಹ ಲೋಹಗಳಿಂದ ಮಾಡಿದ ಉಂಗುರ ಧರಿಸಿದರೆ ಒಳ್ಳೆಯದು ಎಂದು ಹೇಳುತ್ತಾರೆ. ಪ್ರತಿ ರಾಶಿಗು ಬೇರೆ ಬೇರೆ ಲೋಹಗಳು ಇರುತ್ತದೆ. ಅದೇ ರೀತಿ ಬೆಳ್ಳಿಗೂ ಭಾರಿ ಪ್ರಾಮುಖ್ಯತೆ ಇದೆ. ಬೆಳ್ಳಿಯನ್ನು ಪವಿತ್ರವಾದ ಮತ್ತು ಸಾತ್ವಿಕ ಭಾವನೆ ಇರುವ ಲೋಹ ಎಂದು ಹೇಳಲಾಗುತ್ತದೆ. ಬೆಳ್ಳಿ ಹುಟ್ಟಿದ್ದು ಶಿವನ ಕಣ್ಣಿನಿಂದ ಎನ್ನುವ ನಂಬಿಕೆ ಸಹ ಇದೆ. ಹಾಗಾಗಿ ಬೆಳ್ಳಿಗೆ ಜ್ಯೋತಿಷ್ಯದಲ್ಲಿ ಪ್ರಾಮುಖ್ಯತೆ ಇದೆ, ಬೆಳ್ಳಿಯನ್ನು ಸಂಪತ್ತಿನ ಗ್ರಹ ಶುಕ್ರ ಮತ್ತು ಮನಸ್ಸಿನ ಅಂಶ ಎನ್ನಿಸಿಕೊಂಡಿರುವ ಚಂದ್ರನ ಸಂಕೇತ ಎಂದು ಹೇಳಲಾಗುತ್ತದೆ.

ಬೆಳ್ಳಿ ಧರಿಸುವುದರಿಂದ ಅದು ದೇಹದಲ್ಲಿರುವ ನೀರಿನ ಅಂಶವನ್ನು ಜಾಸ್ತಿ ಮಾಡುತ್ತದೆ, ಅಷ್ಟೇ ಅಲ್ಲದೆ, ದೇಹದಲ್ಲಿ ಕಫ, ಪಿತ್ತ, ವಾತ ಸಮಸ್ಯೆ ಇದ್ದರೆ ಅದು ನಿವಾರಣೆ ಆಗುವ ಹಾಗೆ ಮಾಡುತ್ತದೆ. ಇದರಿಂದ ಜನಸಾಮಾನ್ಯರ ಜೀವನದಲ್ಲಿ ಬೆಳ್ಳಿಗೆ ಮಹತ್ವ ಇದೆ. ಬೆಳ್ಳಿಯ ಬೆಲೆ ಭಾರತದಲ್ಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಗುವ ಬದಲಾವಣೆಗೆ ತಕ್ಕ ಹಾಗೆ ಇರುತ್ತದೆ. ಆಗಾಗ ಬೆಳ್ಳಿ ಬೆಲೆಯಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಚಿನ್ನ ಹಾಗೂ ಬೆಳ್ಳಿ ಬೆಲೆ ಮೇಲೆ ಡಾಲರ್ ನ ಬೆಲೆ ಪರಿಣಾಮ ಬೀರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೈಯಲ್ಲಿನ ಚಿಕ್ಕ ಬೆರೆಳಿಗೆ ಶುದ್ಧವಾದ ಬೆಳ್ಳಿಯ ಉಂಗುರ ಧರಿಸುವುದರಿಂದ ಒಳ್ಳೆಯದಾಗುತ್ತದೆ. ನೀವು ಬೆಳ್ಳಿ ಧರಿಸಿದರೆ, ಚಂದ್ರನಿಂದ ಆಗುವ ಅಶುಭ ಪರಿಣಾಮಗಳು ಸಹ ಶುಭ ಪರಿಣಾಮ ಆಗುತ್ತದೆ ಎನ್ನುವ ನಂಬಿಕೆ ಇದೆ.

ಬೆಳ್ಳಿಯನ್ನು ಮನಸ್ಸು ಸಮತೋಲನವಾಗಿ ಇರಲು, ಹಾಗೂ ಧನ ಪ್ರಾಪ್ತಿಗಾಗಿ ಧರಿಸುತ್ತಾರೆ. ಹಾಗೆಯೇ ಭಾವನಾತ್ಮಕ ವಿಚಾರಗಳಲ್ಲಿ ತೊಂದರೆ ಇರುವವರು ಬೆಳ್ಳಿ ಧರಿಸಬಾರದು ಎಂದು ಸಹ ಹೇಳಲಾಗುತ್ತದೆ. ವೃಶ್ಚಿಕ, ಮೀನಾ ಮತ್ತು ಕರ್ಕಾಟಕ ರಾಶಿಯವರು ಬೆಳ್ಳಿ ಧರಿಸಿದರೆ ಒಳ್ಳೆಯದು ಎನ್ನುವ ಒಂದು ಮಾತು ಇದೆ. ಹಾಗೆಯೇ ಸಿಂಹ ರಾಶಿ, ಮೇಷ ರಾಶಿ ಹಾಗೂ ಧನು ರಾಶಿಯವರು ಬೆಳ್ಳಿ ಧರಿಸುವುದು ಒಳ್ಳೆಯದಲ್ಲಿ ಎಂದು ಸಹ ಹೇಳುತ್ತಾರೆ. ಬೆಳ್ಳಿ ಧರಿಸುವ ಮೊದಲು ಬೆಳ್ಳಿ ಸಾರವನ್ನು ಗಂಗಾಜಲದಿಂದ ಅದನ್ನು ಸ್ವಚ್ಛ ಮಾಡಿ, ಶುದ್ಧಿ ಮಾಡಿ ನಂತರ ಧರಿಸಿ. ಈ ರೀತಿ ಮಾಡುವುದರಿಂದ ದೇಹದ ಹಾರ್ಮೋನ್ ಗಳು ಸಮತೋಲನದಲ್ಲಿ ಇರುತ್ತದೆ ಹಾಗೆಯೇ, ಮನಸ್ಸನ್ನು ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಶುದ್ಧ ಬೆಳ್ಳಿಯಿಂದ ತಯಾರಿಸಿದ ಬಳೆಗಳನ್ನು ಧರಿಸುವುದರಿಂದ, ಆರೋಗ್ಯ ಸಮಸ್ಯೆ ಉಂಟಾಗುವುದು ಕಡಿಮೆ ಆಗುತ್ತದೆ.

Comments (0)
Add Comment