ಮೈಸೂರು ಅಂಬಾರಿ ಮೆರವಣಿಗೆ ಖ್ಯಾತಿಯ ಅರ್ಜುನ ಇನ್ನಿಲ್ಲ? ಅಷ್ಟಕ್ಕೂ ನಡೆದ ಘಟನೆ ಏನು?

ಅರ್ಜುನ ಎಂದರೆ ಮೊದಲು ನೆನಪಾಗುವುದು ಮಹಾಭಾರತದ ಬಲಶಾಲಿ ಅರ್ಜುನ. ಆದರೆ ನಮ್ಮ ಮೈಸೂರು ರಾಜಮನೆತನದ ದಸರಾ ಹಬ್ಬದಲ್ಲಿ ತಾಯಿ ಚಾಮುಂಡೇಶ್ವರಿಯ ಅಂಬಾರಿ ಹೊರುವ ಅರ್ಜುನ ಕೂಡ ಅಷ್ಟೇ ಬಲಶಾಲಿ. ಕಳೆದ 8 ವರ್ಷಗಳಿಂದ ಮೈಸೂರು ದಸರಾ ದಲ್ಲಿ ತಾಯಿ ಚಾಮುಂಡೇಶ್ವರಿಯ ಅಂಬಾರಿ ಹೊತ್ತು ರಾಜ ಗಾಂಭೀರ್ಯದಲ್ಲಿ ನಡೆದ ಆ ನೆನಪುಗಳು ಇನ್ನು ನೆನಪು ಮಾತ್ರ.

ಹೌದು ಹಾಸನದ ಕಾಡಿನಲ್ಲಿ ಕಾಡಾನೆಗಳ ಕಾರ್ಯಾಚರಣೆ ವೇಳೆ ಕಾಡಾನೆ ತಿ – ವಿದು ಅರ್ಜುನ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿ ಆಗದೆ ಕೊನೆಯುಸಿರು ಎಳೆದಿದ್ದಾನೆ. ಅದೇಷ್ಟೋ ಸುಂದರ ನೆನಪುಗಳ ಬುತ್ತಿಯನ್ನು ಕಟ್ಟಿಕೊಟ್ಟ ಅರ್ಜುನ ಇಲ್ಲದಿರುವುದು ಎಲ್ಲರಿಗೂ ನೋವಿನ ಸಂಗತಿ. ದೇವರ ಸಮಾನ ರೂಪಿ ಎಂದು ಎಲ್ಲರೂ ಪೂಜಿಸುತ್ತಿದ್ದ ಅರ್ಜುನ ಇಂದೂ ತನ್ನ ಕಾರ್ಯಾಚರಣೆಯಲ್ಲಿ ಆಸುನೀಗಿದ್ದು ಕೊನೆವರೆಗೂ ಸೇವೆಯಲ್ಲಿಯೆ ಕಳೆದು ಕಣ್ಮುಚ್ಚಿಕೊಂಡಿದೆ.

ArjunElephamtForest operationMysore
Comments (0)
Add Comment