ಚಿಂದಿ ಆಯುವ 11 ವರ್ಷದ ಹುಡುಗನಿಗೆ ಸಿಕ್ಕಿದ ಆ ಪೈಂಟಿಂಗ್ ! ಕೆಲ ವರ್ಷಗಳ ನಂತರ ಅದೆಷ್ಟು ಲಕ್ಷಕ್ಕೆ ಮಾರಾಟವಾಯಿತು? ಅಬ್ಬಾ ಒಂದು ಪೈಂಟಿಂಗ್ ಬೆಲೆ ಇಷ್ಟೇ?

ಅದೃಷ್ಟ ಎಂಬುವುದು ಒಮ್ಮೊಮ್ಮೆ ಅನಿರೀಕ್ಷಿತವಾಗಿ ಜೀವನದಲ್ಲಿ ಬಂದು ಬಿಡುತ್ತದೆ. ಅದಕ್ಕೆ ಉದಾಹರಣೆ ಎಂಬಂತೆ ಇದೆ ಈ ವರದಿ ,ಆತ ಒಬ್ಬ ರಸ್ತೆ ಬದಿಯಲ್ಲಿ ಚಿಂದಿ ಆಯುವ ಹುಡುಗ ,ಬಾಲ್ಯದಲ್ಲಿ ಒಂದು ಪೈಂಟಿಂಗ್ ಅನ್ನು ಕಸದ ರಾಶಿಯಿಂದ ಹೆಕ್ಕಿಕೊಂಡು ಬಂದಿದ್ದ ಆದರೆ ಈಗ ಅದರಿಂದ ಶ್ರೀಮಂತನಾಗಿದ್ದಾನೆ. ಇಂಗ್ಲೆಂಡ್‌ನಲ್ಲಿ 11 ವರ್ಷದ ಸಣ್ಣ ಹುಡುಗನೊಬ್ಬ ಕಸದ ಬುಟ್ಟಿಯಿಂದ ಸರಳವಾಗಿ ಕಾಣುವ ಪೇಂಟಿಂಗ್ ಅನ್ನು ಹೆಕ್ಕಿಕೊಂಡು ಮನೆಗೆ ಬಂದಿದ್ದ.

ವರದಿ ಪ್ರಕಾರ ಆತನ ಹೆಸರು ಮ್ಯಾಟ್ ವಿಂಟರ್ ಇಂಗ್ಲೆಂಡ್‌ನ ಕೆಂಟ್‌ನಲ್ಲಿರುವ ಕ್ರಾನ್‌ಬ್ರೂಕ್‌ನ ನಿವಾಸಿ ಎಂದು ಗುರುತಿಸಲಾಗಿದೆ .ಹೀಗೆ ಒಮ್ಮೆ ಮಹಿಳೆಯೊಬ್ಬರು ಕಸ ಎಸೆಯುವುದನ್ನು ಗಮನಿಸಿದ ಹುಡುಗ ಅವರ ಬಳಿ ಹೋಗಿ ತಾನು ಇದನ್ನು ತೆಗೆದುಕೊಳ್ಳಬಹುದೇ ಎಂದು ಹೇಳಿ ಎತ್ತಿಕೊಂಡಿದ್ದ. ಅದೇ ಕಸದಲ್ಲಿ ಸಿಕ್ಕಿದ್ದು ಈ ಪೈಂಟಿಂಗ್ ಮ್ಯಾಟ್ ಅದರ ನಿಜ ಮೌಲ್ಯವನ್ನು ಅರಿತುಕೊಳ್ಳದೆ “ನೈಟ್, ಡೆತ್ ಅಂಡ್ ದಿ ಡೆವಿಲ್” (Night Death and Devil) ಎಂಬ ಶೀರ್ಷಿಕೆಯಲ್ಲಿ ಕೆತ್ತಿದ ವರ್ಣಚಿತ್ರವನ್ನು ಇಟ್ಟುಕೊಂಡಿದ್ದರು.

13 ವರ್ಷಗಳ ಹಿಂದೆ ಕಸವೆಂದು ಎಸೆದಿದ್ದ ಈ ಪೇಂಟಿಂಗ್ ಈಗ ಲಕ್ಷಗಟ್ಟಲೆ ಬೆಲೆ ಬಾಳುತ್ತಿದೆ. ಮ್ಯಾಟ್ ವಿಂಟರ್, ಈಗ 24 ವರ್ಷದ ಹುಡುಗ, ಅವರು ಇಟ್ಟುಕೊಂಡಿರುವ ವರ್ಣಚಿತ್ರವು ಪ್ರಸಿದ್ಧ ಜರ್ಮನ್ ಕಲಾವಿದ ಆಲ್ಬ್ರೆಕ್ಟ್ ಡ್ಯೂರರ್ (Albrect Duror) ಅವರದ್ದು ಎಂದು ಗುರುತಿಸಲಾಗಿದೆ.ನವೋದಯ ಕಾಲದಲ್ಲಿ ಅಂದರೆ 1513 ರಲ್ಲಿ ರಚಿಸಲಾದ ಈ ವರ್ಣಚಿತ್ರವನ್ನು ಈಗ Rare Book Auction ಹರಾಜು ಸಂಸ್ಥೆಯು ಕನಿಷ್ಠ 22 ಲಕ್ಷ ರೂ.ಗಳ ಆರಂಭಿಕ ಬೆಲೆಯೊಂದಿಗೆ ಹರಾಜು ಮಾಡುತ್ತಿದೆ. ಇದರ ನಿರ್ದೇಶಕ ಜಿಮ್, ಡ್ಯೂರರ್ ಮಾತ್ರ ಈ ಚಿತ್ರವನ್ನು ಚಿತ್ರಿಸಬಹುದೆಂದು ಹೇಳುವ ಮೂಲಕ ಅದರ ಸತ್ಯಾಸತ್ಯತೆಯನ್ನು ದೃಢಪಡಿಸಿದರು. ಸೆಪ್ಟೆಂಬರ್ 18 ರಂದು ಹರಾಜು ನಿಗದಿಯಾಗಿದೆ. ಇದು ಸರಿಸುಮಾರು 50 ಲಕ್ಷದ ವರೆಗೂ ಕೂಡ ಮಾರಾಟ ಆಗಬಹುದು ಎಂದು ಅಂದಾಜಿಸಲಾಗಿದೆ.

Albrect durorAnticAuctionGarbageGerman artistKnight death and devilPainting
Comments (0)
Add Comment