ಭಾರತ ಒಟ್ಟಾರೆ ಎಷ್ಟು ದೇಶಗಳಿಗೆ ಸಾಲ ನೀಡಿದೆ? ಚೀನಾ ಮಣಿಸಲು ಭಾರತ ಹಣೆದ ರಾಜತಾಂತ್ರಿಕ ಬಲೆ ಬಗ್ಗೆ ನೀವು ಓದಲೇ ಬೇಕು.

1,525

ಚೀನಾ ಜಗತ್ತಿನಾದ್ಯಂತ ದೇಶಗಳಿಗೆ ಸಾಲ ನೀಡುತ್ತಿದೆ, ಆ ಸಾಲ ಮರುಪಾವತಿಸಲು ಸಾಧ್ಯವಾಗದಿದ್ದರೆ, ಆ ದೇಶದ ಆಸ್ತಿ ಚೀನಾದ ಪಾಲಾಗುತ್ತದೆ. ಇದು ಚೀನಾದ ಡೆಟ್ ಟ್ರ್ಯಾಪ್. ಇದರಿಂದಾಗಿ ಚೀನಾ ಇಂದು ಜಗತ್ತಿನ ಅತಿ ದೊಡ್ಡ ಸಾಲ ನೀಡುವ ದೇಶವಾಗಿದೆ. ವರ್ಲ್ಡ್ ಬ್ಯಾಂಕ್, ಇಂಟರ್ನ್ಯಾಷನಲ್ ಮೊನೆಟೋರಿ ಫಂಡ್ ಹಾಗು OECD ಈ ಮೂರೂ ಏಜನ್ಸಿ ಗಳು ದೇಶಕ್ಕೆ ಸಾಲ ನೀಡುವ ಏಜನ್ಸಿ ಗಳಾಗಿದ್ದು ಈ ಮೂರೂ ಏಜನ್ಸಿ ಒಟ್ಟು ಸಾಲ ನೀಡಿದಕ್ಕಿಂತ ಹೆಚ್ಚಿನದ್ದು ಚೀನಾ ಇತರ ದೇಶಗಳಿಗೆ ನೀಡಿದ್ದೆ. ಅಭಿವೃದ್ಧಿ ಅಂತ ಹಣ ನೀಡಿ ದೇಶಗಳನ್ನು ತನ್ನ ಡೆಟ್ ಟ್ರ್ಯಾಪ್ ಗೆ ಬಳಿ ಯಾಗುವಂತೆ ಮಾಡುತ್ತದೆ.

ಭಾರತ ಇದನ್ನು ತಡೆಯಲು ಏನು ಮಾಡುತ್ತಿದೆ? ಭಾರತ ತನ್ನ ವಸುದೈವ ಕುಟುಂಬಕಂ ದ್ಯೇಯ ವಾಕ್ಯದೊಂಗಿದೆ ಮುನ್ನಡೆಯುತ್ತಿದೆ, ಭಾರತ ರಾಜತಾಂತ್ರಿಕವಾಗಿ ತನ್ನ ಹೆಜ್ಜೆಯನ್ನು ಇಡುತ್ತಿದೆ. ಚೀನಾದ ತರಹ ಇತರ ದೇಶಗಳನ್ನು ಸಾಲದ ಸುಳಿಯಲ್ಲಿ ಸಿಕ್ಕಿಸದೆ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುವಂತೆ ಮಾಡುತ್ತಿದೆ. ಹಾಗಾದರೆ ಭಾರತ ಎಷ್ಟು ದೇಶಗಳಿಗೆ ಸಾಲ ನೀಡಿದೆ? ಎಷ್ಟು ಮೊತ್ತದ ಸಾಲ ನೀಡಿದೆ? ಇದೆಲ್ಲದರ ಮಾಹಿತಿ ಇಲ್ಲಿದೆ ಓದಿ.

ಭಾರತ ಇಲ್ಲಿಯವರೆಗೆ ಒಟ್ಟು ೫೦೦ ಕಿಂತಲೂ ಅಧಿಕ ಪ್ರಾಜೆಕ್ಟ್ ಗಳಿಗೆ ಹಣ ಸುರಿದಿದೆ, ಇದು ಸಾಲದ ರೂಪದಲ್ಲಿ ಇತರ ದೇಶಗಳಿಗೆ ನೀಡಿದೆ. ಆದರೆ ಭಾರತದ ಸಾಲವನ್ನು ಡೆಟ್ ಟ್ರ್ಯಾಪ್ ಅಂತ ಯಾಕೆ ಯಾರು ಹೇಳಿಲ್ಲ?ಚೀನಾ ೧.೫ ಟ್ರಿಲಿಯನ್ ಗಿಂತಲೂ ಅಧಿಕ ಹಣ ಡೆಟ್ ಟ್ರ್ಯಾಪ್ ತರ ೧೫೦ ಕ್ಕೂ ಅಧಿಕ ದೇಶಗಳಿಗೆ ಸಾಲ ನೀಡಿದೆ. ಭಾರತ ಇದುವರೆಗೆ ೩೦.೬೬ ಬಿಲಿಯನ್ ಡಾಲರ್ ಸಾಲದ ರೂಪದಲ್ಲಿ ಸುಮಾರು ೬೪ ದೇಶಗಳಿಗೆ ನೀಡಿದೆ.

 

ಈ ಹಣದಿಂದ ಸುಮಾರು ೫೦೦ ಕಿಂತಲೂ ಅಧಿಕ ಅಭಿವೃದ್ಧಿ ಪ್ರಾಜೆಕ್ಟ್ ಗಳು ನಡೆಯುತ್ತಿದೆ. ಇವುಗಳಲ್ಲಿ ಈಗಾಗಲೇ ೩೦೦+ ಕಾಮಗಾರಿ ಪೂರ್ಣಗೊಂಡಿದ್ದು ೨೪೦+ ಪ್ರೊಜೆಕ್ಟ್ಗಳು ನಡೆಯುತ್ತಿವೆ, ಈ ಎಲ್ಲ ಪ್ರಾಜೆಕ್ಟ್ ಗಳು ಯಾವುವು? ವಿದೇಶಗಳಲ್ಲಿ ಮೂಲಭೂತ ಸೌಕರ್ಯಕ್ಕಾಗಿ ಈ ಸಾಲ ನೀಡಲಾಗುತ್ತಿದ್ದು, ಆಸ್ಪತ್ರೆ, ಶಾಲೆ, ವ್ಯವಸಾಯ, ರೋಡ್, ಹಾಗು ಇನ್ನಿತರ ಸೌಕರ್ಯ ನಿರ್ಮಿಸಲು ಉಪಯೋಗ ಮಾಡಲಾಗುತ್ತಿದೆ. ಈ ೬೪ ದೇಶಗಳಲ್ಲಿ ಅತಿ ಹೆಚ್ಚು ಮಹತ್ವ ನಮ್ಮ ನೆರೆಹೊರೆಯ ದೇಶಗಳಿಗೆ ನೀಡಲಾಗುತ್ತಿದೆ. ಒಟ್ಟು ೩೦ ಬಿಲಿಯನ್ ಡಾಲರ್ ಅಲ್ಲಿ ಸುಮಾರು ೧೬ ಬಿಲಿಯನ್ ಡಾಲರ್ ನಮ್ಮ ನೆರೆ ದೇಶಗಳ ಅಭಿವೃದ್ಧಿಗೆ ನೀಡಲಾಗುತ್ತಿದೆ.

ಇವುಗಳಲ್ಲಿ ಬಾಂಗ್ಲಾದೇಶ, ನೇಪಾಳ,ಮಯನ್ಮಾರ್,ಭೂತಾನ್,ಶ್ರೀಲಂಕಾ ಸೇರಿಕೊಂಡಿದೆ. ಈ ದೇಶಗಳಲ್ಲಿ ಒಟ್ಟು ೯೮ಪ್ರೊಜೆಕ್ಟ್ಗಳು ನಡೆಯುತ್ತಿದ್ದು ಇದುವರೆಗೆ ೪೪ಪೂರ್ಣಗೊಂಡಿದೆ. ಈ ದೇಶಗಳಲ್ಲಿ ಚೀನಾದ ಸಯೇ ಇದ್ದರು ಕೂಡ ಭಾರತ ಪ್ರಮುಖ ಪ್ರಾಜೆಕ್ಟ್ ಗಳನ್ನೂ ಪೂರ್ಣಗೊಳಿಸುವಲ್ಲಿ ಸಫಲವಾಗಿದೆ. ಆಫ್ಘಾನಿಸ್ತಾನ್ ದಲ್ಲಿ ೩೪ಪ್ರಾಂತ್ಯಗಳಲ್ಲಿ ಸುಮಾರು ೪೦೦+ಪ್ರಾಜೆಕ್ಟ್ ನಡೆಯುತ್ತಿದೆ. ಬಾಂಗ್ಲಾದೇಶದಲ್ಲಿ ೩೧ಪ್ರಾಜೆಕ್ಟ್ ಗಳಲ್ಲಿ ೧೩ಪೂರ್ಣಗೊಂಡಿದೆ. ನೇಪಾಳದಲ್ಲಿ ೪೩ರೋಡ್ ಕನ್ಸ್ಟ್ರಕ್ಷನ್ ಪ್ರಾಜೆಕ್ಟ್ ನಡೆಯುತ್ತಿದ್ದು ೧೭ ಪೂರ್ಣಗೊಂಡಿದೆ. ೪ಪವರ್ ಟ್ರಾನ್ಸ್ಮಿಷನ್ ಪ್ರಾಜೆಕ್ಟ್ ಕೂಡ ನಡೆಯುತ್ತಿದೆ ಅದರಲ್ಲಿ ೧ಪೂರ್ಣಗೊಂಡಿದೆ. ಶ್ರೀಲಂಕಾದಲ್ಲಿ ೧೯ಪ್ರಾಜೆಕ್ಟ್ ನಡೆಯುತ್ತಿದ್ದು ೧೧ ಈಗಾಗಲೇ ಪೂರ್ಣಗೊಂಡಿದೆ. ರೈಲ್, ರೋಡ್ ಹಾಗು ಬಂದರು ಪ್ರಾಜೆಕ್ಟ್ ಕೂಡ ಮುಂದಿನ ದಿನಗಳಲ್ಲಿ ಶ್ರೀಲಂಕಾದಲ್ಲಿ ನಡೆಯಲಿದೆ. ಮಯನ್ಮಾರ್ ಅಲ್ಲಿ ೪ಪ್ರಾಜೆಕ್ಟ್ ಗಳಲ್ಲಿ ೩ಈಗಾಗಲೇ ಪೂರ್ಣಗೊಂಡಿದೆ.

ಈ ಎಲ್ಲ ಪ್ರಾಜೆಕ್ಟ್ ಗಳಲ್ಲಿ ಭಾರತ ದೇಶ ಸಾಲ ನೀಡಿದೆ ಆದರೆ ಚೀನಾದ ತರಹ ಡೆಟ್ ಟ್ರ್ಯಾಪ್ ಅನ್ನುವ ಸುದ್ದಿ ಕೇಳಿ ಬರಲಿಲ್ಲ. ಯಾಕೆಂದರೆ ಭಾರತ ಅಭಿವೃದ್ಧಿ ಕಡೆ ಗಮನ ಹರಿಸಿದರೆ ಚೀನಾ ಇತರ ದೇಶಗಳನ್ನು ತನ್ನ ಕಾಲೋನಿ ಗಳನ್ನಾಗಿಸಲು ಹವಣಿಸುತ್ತಿದೆ. ದಕ್ಷಿಣ ಆಫ್ರಿಕಾಗೆ ೨೦೦೧-೨೦೨೧ರ ವರೆಗೆ ೨೧ಬಿಲಿಯನ್ ಡಾಲರ್ ಸಾಲ ನೀಡಿದೆ. ಇದರಲ್ಲಿ ಗ್ಯಾಂಬಿಯಾ ದಲ್ಲಿ ಒಂದು ಆ ದೇಶದ ಸಂಸತ್ತು ನಿರ್ಮಾಣವಾಗಿದೆ, ಸೂಡಾನ್ ಅಲ್ಲಿ ಕೊಸ್ಟಿ ಪವರ್ ಪ್ರಾಜೆಕ್ಟ್, ರವಾಂಡಾದಲ್ಲಿ ನ್ಯಾಬರೊಂಗೊ ಪವರ್ ಪ್ರಾಜೆಕ್ಟ್, ಜಿಬೋಟಿ ಅಲ್ಲಿ ಆ ದೇಶದ ಮೊದಲ ಸಿಮೆಂಟ್ ಕಾರ್ಖಾನೆ ನಿರ್ಮಾಣ ಮಾಡಿದೆ, ಟಾಂಜಾನಿಯಾದಲ್ಲಿ ಸ್ವಚ್ಛ ಕುಡಿಯುವ ನೀರಿನ ಪ್ರಾಜೆಕ್ಟ್ ಪೂರ್ಣಗೊಳಿಸಿ ನೀರಿನ ಸರಬರಾಜಿಗೆ ಸಹಾಯ ಮಾಡಿದೆ.

ಇದರಿಂದ ಭಾರತಕ್ಕೆ ಏನು ಲಾಭ?ಭಾರತ ಇದರಿಂದ ಬಡ್ಡಿ ಪಡೆಯುತ್ತದೆ. ನೆರೆ ರಾಷ್ಟ್ರಗಳಿಗೆ ಸಾಲ ನೀಡುವುದರಿಂದ ಚೀನಾ ನಮ್ಮ ನೆರೆ ದೇಶಗಳ ಮೇಲೆ ಹಿಡಿತ ಸಾಧಿಸುವುದು ಕೊಂಚ ಮಟ್ಟಿಗೆ ತಪ್ಪುತ್ತದೆ. ಚೀನಾದ ರೀತಿ ನಾವು ಸಾಲ ಕೊಟ್ಟು ಆ ದೇಶಗಳ ಅಸ್ತಿ ಕಬಳಿಸುವುದಿಲ್ಲ ಇದು ನೆರೆ ರಾಷ್ಟ್ರಗಳು ಭಾರತದ ಮೇಲೆ ನಂಬಿಕೆ ಇಡುವಂತೆ ಮಾಡುತ್ತದೆ. ರಾಜತಾಂತ್ರಿಕ ರೀತಿಯಲ್ಲೂ ಇದು ಭಾರತಕ್ಕೆ ಸಹಾಯವಾಗುತ್ತದೆ.

 

 

Leave A Reply

Your email address will not be published.