ಭಾರತೀಯ ಕ್ರಿಕೆಟ್ ತಂಡದ ಆಟಗಾರರ ಪತ್ನಿಯರು ಎಷ್ಟು ಓದಿದ್ದಾರೆ? ಇವಾಗ ಏನು ಕೆಲಸ ಮಾಡುತ್ತಿದ್ದಾರೆ ನಿಮಗೆ ಗೊತ್ತಾ?
ಕ್ರಿಕೆಟ್ ಮೈದಾನದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಭಾರತೀಯ ಆಟಗಾರರು ಮೈದಾನದಲ್ಲಿ ಬಹಳ ಶ್ರಮಪಟ್ಟು ತಮ್ಮ ಪಿಟ್‌ನೆಸ್ ಬಗ್ಗೆ ಗಮನ ಹರಿಸುತ್ತಾರೆ. ಇದಲ್ಲದೇ ಜಿಮ್ ಅಲ್ಲಿ ಕೂಡಾ ಬಹಳ ಬೆವರು ಹರಿಸಿ ವರ್ಕೌಟ್ ಮಾಡುತ್ತಾರೆ. ಇದರ ಪ್ರತಿಫಲವೇ ನಮಗೆ ಗಾಳಿಯಲ್ಲಿ ಹಾರಿ ಕ್ಯಾಚ್ ಪಡೆಯುವ ಜಡೇಜಾ ಕಾಣಸಿಗುವುದು, ರೋಹಿತ್ ಶರ್ಮಾ ಒಬ್ಬರೇ ಹೊಡೆ ಬಡಿ ಮೂಲಕ ೨೦೦ ರನ್ ಹೊಡೆಯುವ ಪಂದ್ಯ ಕಾಣಸಿಗುವುದು. ಭಾರತೀಯ ತಂಡದಲ್ಲಿ ಕಾಣಿಸಿಕೊಳ್ಳಲು ಪ್ರತಿಯೊಬ್ಬರೂ ಚಿಕ್ಕ ವಯಸ್ಸಿನಲ್ಲಿಯೇ ಪ್ರಾಕ್ಟೀಸ್ ಶುರು ಮಾಡ್ತಾರೆ. ಇದೇ ಕಾರಣಕ್ಕೆ ಅವರ ವಿದ್ಯಾಭ್ಯಾಸದಲ್ಲಿ ಸ್ವಲ್ಪ ತೊಡಕು ಉಂಟಾಗುತ್ತದೆ. ನಮ್ಮ ಆಟಗಾರರು ಹೇಳಿಕೊಳ್ಳುವಂತಹ ವಿದ್ಯಾವಂತರಲ್ಲ ಆದರೆ ಅವರ ಪತ್ನಿಯರು ಹೆಚ್ಚು ಕ್ವಾಲಿಪೈಡ್ ಆಗಿದ್ದಾರೆ. ಆ ವಿಷಯ ನಾವು ಇಂದು ನಿಮಗೆ ತಿಳಿಸುತ್ತೇವೆ.
ಅನುಷ್ಕಾ ಶರ್ಮಾ – ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಬಾಲಿವುಡ್ ಬೆಡಗಿ. ಇದು ತಮಗೆಲ್ಲರಿಗೂ ಗೊತ್ತು. ಅನುಷ್ಕಾ ಆರ್ಟ್ಸ್ ಅಲ್ಲಿ ಪದವೀಧರರು ಹಾಗು ಅರ್ಥಶಾಸ್ತ್ರ ದಲ್ಲಿ ಪೋಸ್ಟ್ ಗ್ರಾಡುವೇಟ್ ಮಾಡಿದ್ದಾರೆ. ವಿರಾಟ್ ಕೊಹ್ಲಿ ಕೇವಲ ೧೨ನೇ ತರಗತಿ ತನಕ ಕಲಿತಿದ್ದಾರೆ ಅಷ್ಟೇ.
ಸಾಕ್ಷಿ ಧೋನಿ – ಸಾಕ್ಷಿ ಧೋನಿ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಪತ್ನಿ. ಸಾಕ್ಷಿ ಧೋನಿ ಹೋಟೆಲ್ ಮ್ಯಾನೆಜ್‌ಮೆಂಟ್ ಕೋರ್ಸ್ ಮಾಡಿದ್ದಾರೆ. ಔರಂಗಾಬಾದ್ ನ ಇನ್ಸ್ಟಿಟ್ಯೂಟ್ ಆಪ್ ಹೋಟೆಲ್ ಮ್ಯಾನೇಜ್ಮೆಂಟ್ ಅಲ್ಲಿ ತಮ್ಮ ಕೋರ್ಸ್ ಪೂರ್ತಿ ಗೊಳಿಸಿದ್ದಾರೆ. ಧೊನಿ ಅವರ ಚಲನಚಿತ್ರದಲ್ಲೂ ಈ ವಿಷಯ ಹೇಳಲಾಗಿತ್ತು.
ರಿತಿಕಾ ಸಜ್‌ದೇಹ್ – ರಿತಿಕಾ ಇವರು ಭಾರತ ತಂಡದ ಟಿ-೨೦ ಉಪ ನಾಯಕ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಅವರ ಪತ್ನಿ. ರಿತಿಕಾ ಮದುವೆ ಮೊದಲು ಸ್ಪೋರ್ಟ್ಸ್ ಈವೆಂಟ್ ಮ್ಯಾನೇಜ್ಮೆಂಟ್ ಆಗಿ ಕೆಲಸ ಮಾಡುತ್ತಿದ್ದರು.
ರಾಧಿಕಾ ದೋಪಾವ್ಕರ್ – ರಾಧಿಕಾ ಭಾರತದ ಟೆಸ್ಟ್ ತಂಡ ಉಪ ನಾಯಕ ಅಜಿಂಕ್ಯಾ ರಹಾನೆ ಅವರ ಪತ್ನಿ. ಇವರು ಪದವೀಧರರು. ಮುಂಬಯಿ ಯ ಗಣೇಶ್ ವಿನಾಯಕ್ ವೆಝ್ ಕಾಲೇಜ್ ಅಲ್ಲಿ ತಮ್ಮ ಪದವಿ ಪಡೆದಿದ್ದಾರೆ.
ಪ್ರೀತಿ ಅಶ್ವಿನ್ – ಭಾರತದ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ ಅವರ ಪತ್ನಿಯಾಗಿದ್ದು ಇನ್ಪೋರ್ಮೇಷನ್ ಟೆಕ್ನಾಲಜಿ ಇಂದ ಬಿ.ಟೆಕ್ ಪೂರ್ಣಗೊಳಿಸಿದ್ದಾರೆ. ಇವರು ಎಸ್‌ಎಸ್‌ಎನ್ ಕಾಲೇಜು ಇಂದ ಈ ಪದವಿ ಪಡೆದಿದ್ದಾರೆ. ಮದುವೆಗೆ ಮುನ್ನ ಇಂಜಿನಿಯರ್ ಆಗಿ ಕೆಲವು ಕಂಪೆನಿಗಳಲ್ಲಿ ಕೆಲಸ ಕೂಡಾ ಮಾಡಿದ್ದಾರೆ.
ಸಂಜನಾ ಗಣೇಶನ್ – ಭಾರತೀಯ ತಂಡದ ವೇಗಿ ಜಸ್ಪ್ರೀತ್ ಬುಮ್ರಾ ಅವರ ಪತ್ನಿ. ಇತ್ತೀಚಿಗೆ ಇವರ ಮದುವೆ ನಡೆಯಿತು. ಸಂಜನಾ ಅವರು ಪುಣೆಯ ಸಿಂಬಾಯಿಸಿಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇಂದ ಕಂಪ್ಯೂಟರ್ ಸೈನ್ಸ್ ಅಲ್ಲಿ ಬಿ.ಟೆಕ್ ಪದವಿ ಪಡೆದಿದ್ದಾರೆ. ಇವರು ಸ್ಪೋರ್ಟ್ಸ್ ಆ್ಯಂಕರ್ ಕೂಡಾ ಆಗಿದ್ದಾರೆ.
ರೀವಾ ಸೋಲಂಕಿ – ರೀವಾ ಸೋಲಂಕಿ ನಮ್ಮ ಭಾರತೀಯ ತಂಡದ ಎಡಗೈ ಸ್ಪಿನ್ನರ್ ಹಾಗು ಮಿಡಲ್ ಆರ್ಡರ್ ಬ್ಯಾಟ್ಸ್‌ಮನ್ ರವೀಂದ್ರ ಜಡೇಜಾ ಅವರ ಪತ್ನಿ. ಇವರು ಮೆಕ್ಯಾನಿಕಲ್ ಎಂಜಿನಿಯರ್. ಎಟಾಮಿಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಸೈನ್ಸ್ ರಾಜ್ ಕೋಟ ಅಲ್ಲಿ ತಮ್ಮ ವಿದ್ಯಾಭ್ಯಾಸ ಮುಗಿಸಿದ್ದಾರೆ.
ಧನಶ್ರೀ ವರ್ಮ – ಧನಶ್ರೀ ವರ್ಮಾ ಭಾರತ ತಂಡದ ಸ್ಪಿನ್ನರ್ ಯಜುವೇಂದ್ರ ಚಹಲ್ ಅವರ ಪತ್ನಿ. ಇವರು ಸಾಮಾನ್ಯವಾಗಿ ಟಿಕ್‌ಟಾಕ್ ಅಂತಹದರಲ್ಲಿ ಕಂಟೆಂಟ್ ಕ್ರಿಯೇಟರ್ ಆಗಿಕಾಣ ಸಿಗುತ್ತಾರೆ. ಇದಲ್ಲದೇ ಇವರು ಡೆಂಟಿಸ್ಟ್ ನ ಕಲಿಕೆ ಕೂಡಾ ಮಾಡಿದ್ದಾರೆ. ೨೦೧೪ ರಲ್ಲಿ ಧನಶ್ರೀ ಮುಂಬಯಿ ಯ ಡಿ ವೈ ಪಾಟೀಲ್ ಡೆಂಟಲ್ ಕಾಲೇಜ್ ಇಂದ ಪದವಿ ಪಡೆದಿದ್ದಾರೆ.
ಪ್ರಿಯಾಂಕಾ ರೈನಾ – ಪ್ರಿಯಾಂಕಾ ರೈನ ನಮ್ಮ ಭಾರತ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಅವರ ಪತ್ನಿಯಾಗಿದ್ದಾರೆ. ಇವರು ಕೂಡಾ ಬಿ.ಟೆಕ್ ಮಾಡಿದ್ದಾರೆ. ಅದಲ್ಲದೇ ಅಕ್ಸೆಂಚರ್ ಹಾಗು ವಿಪ್ರೋದಂತಹ ಕಂಪೆನಿಗಳಲ್ಲಿ ಕೆಲಸ ಮಾಡಿದ್ದಾರೆ.