ಉತ್ತರ ಕೊರಿಯಾ ದ ಈ ಶಿ’ಕ್ಷೆ ಬಗ್ಗೆ ನೀವು ಕೇಳಿದರೆ ನಿಮಗೂ ತಲೆ ತಿರುಗುತ್ತದೆ. ಭಾರತ ಆ ದೇಶಕ್ಕಿಂತ ಎಷ್ಟೋ ವಾಸಿ. ಅಷ್ಟಕ್ಕೂ ಏನು ಆ ವಿಚಿತ್ರ ಶಿಕ್ಷೆ?
ಉತ್ತರ ಕೊರಿಯಾ ಹೆಸರು ಕೇಳಿದ್ರೇನೇ ಯಾವ್ಡ್ಯವುದೋ ವಿಷಯಗಳು ನಮ್ಮ ತಲೆಯಲ್ಲಿ ತಿರುಗುತ್ತವೆ. ಅಲ್ಲಿನ ಕಾನೂನು ಬಗ್ಗೆ ಕೇಳಿದರೆ ಪ್ರತಿಯೊಬ್ಬರೂ ಆ ದೇಶದ ಬಗ್ಗೆ ತಮಾಷೆ ಮಾಡುವುದರ ಜೊತೆ ಸ್ವಲ್ಪ ಹೆದರಿಕೇನೂ ಆಗುತ್ತದೆ. ಅಲ್ಲಿನ ಸಂಸ್ಥಾಪಕ ಕಿಮ್ ಇಲ್ ಸಂಗ್ ಸತ್ತಿದ್ದರೂ ಅವರ ಆತ್ಮ ಅಲ್ಲಿ ಆಡಳಿತ ಮಾಡುತ್ತಿದೆ ಎಂದು ಇಂದೂ ಕೆಲವರು ನಂಬುತ್ತಾರೆ. ಇಂತಹ ವಿಚಿತ್ರ ದೇಶದ ಒಂದು ಕಾನೂನಿನ ಬಗ್ಗೆ ನಾವಿವತ್ತು ನಿಮಗೆ ಹೇಳಲಿದ್ದೇವೆ.
ಪ್ರಪಂಚ ೨೧ ನೇ ಶತಮಾನದಲ್ಲಿದ್ದರು ಉತ್ತರ ಕೊರಿಯಾ ದ ಕಾಲೆಂಡರ್ ಮಾತ್ರ ೧೦೬ ನೇ ವರ್ಷ ದ ಜುಚೆ ವರ್ಷದಲ್ಲಿದೆ. ಉತ್ತರ ಕೊರಿಯಾ ದ ಜುಚೆ ಕ್ಯಾಲೆಂಡರ್ ೧೫ ಏಪ್ರಿಲ್ ೧೯೧೨ ಇಂದ ಪ್ರಾರಂಭ ಆಗುತ್ತದೆ. ಇದು ಅಲ್ಲಿನ ಸಂಸ್ಥಾಪಕ ಕಿಮ್ ಉಲ್ ಸುಂಗ್ ನ ಜನ್ಮ ದಿನ ವಾಗಿದೆ. ಉತ್ತರ ಕೊರಿಯಾದಲ್ಲಿ ಜನರನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಮಾಧ್ಯಮಗಳ ಮೇಲಿನ ಹಿಡಿತವನ್ನು ಬಲಪಡಿಸುವುದು ಸಾಮಾನ್ಯವಾಗಿದೆ. ಜನರು ಟಿವಿಯಲ್ಲಿ ವೀಕ್ಷಿಸಲು ಕೇವಲ ಮೂರು ಟೆಲಿವಿಷನ್ ಚಾನೆಲ್‌ಗಳನ್ನು ಮಾತ್ರ ನೀಡಲಾಗಿದೆ, ಆ ಮೂರೂ ಚಾನೆಲ್ ಗಳಲ್ಲಿ ಬರುವ ಕಾರ್ಯಕ್ರಮಗಳು ಕೂಡ ಸರಕಾರದ ನಿಯಂತ್ರಣದಲ್ಲಿರುತ್ತದೆ.
೧೯೪೮ ರಿಂದಲೂ ಉತ್ತರ ಕೊರಿಯಾ ದಲ್ಲಿ ಒಂದೇ ಕುಟುಂಬ ಆಡಳಿತ ನಡೆಸುತ್ತಿದೆ. ಇಲ್ಲಿ ತಮಾಷೆಯ ವಿಷಯವೇನೆಂದರೆ ಪ್ರತಿ ವರ್ಷ ಚುನಾವಣೆ ನಡೆಯುತ್ತದೆ, ಹಾಗೇನೇ ಮತದಾರರು ಚುನಾಯಿಸಲು ಒಬ್ಬನೇ ಅಭ್ಯರ್ಥಿ ಕೂಡ ಚುನಾವಣೆಗೆ ನಿಂತಿರುತ್ತಾನೆ. ಮೇಯರ್ ಚುನಾವಣೆ ಆಗಿರಲಿ ಅಥವಾ ಗವರ್ನರ್, ವಿಧಾನಸಭಾ ಚುನಾವಣೆ ಇರಲಿ ಪ್ರತಿ ಪ್ರಾಂತ್ಯದಲ್ಲಿಯೂ ಒಬ್ಬನೇ ಅಭ್ಯರ್ಥಿ ಕಣದಲ್ಲಿರುತ್ತಾನೆ.
ತಮ್ಮ ಮಕ್ಕಳನ್ನು ಉತ್ತರ ಕೊರಿಯಾದ ಶಾಲೆಗೆ ಕಳುಹಿಸುವ ಪೋಷಕರು. ಅವರು ಮಕ್ಕಳಿಗೆ ಸ್ವಂತವಾಗಿ ಮೇಜು ಮತ್ತು ಕುರ್ಚಿಯನ್ನು ಒದಗಿಸಬೇಕು. ಅದೇ ಸಮಯದಲ್ಲಿ, ಕೆಲವು ವಿದ್ಯಾರ್ಥಿಗಳನ್ನು ಸರ್ಕಾರಿ ಕೆಲಸಗಳಲ್ಲಿ ಕೆಲಸ ಮಾಡುವಂತೆ ಮಾಡಲಾಗುತ್ತದೆ. ಕಸವನ್ನು ಎತ್ತಿಕೊಳ್ಳುವುದು ಇದರಲ್ಲಿ ಸಾಮಾನ್ಯ ವಿಷಯ. ಉತ್ತರ ಕೊರಿಯಾದಲ್ಲಿ ಮೂರು ತಲೆಮಾರಿಗೆ ಶಿಕ್ಷೆ ವಿಧಿಸುವ ನಿಯಮವು ಆ ದೇಶದ ಭಯಾನಕ ವಾಸ್ತವವನ್ನು ತೋರಿಸುತ್ತದೆ. ದೇಶದಲ್ಲಿ, ಒಬ್ಬ ವ್ಯಕ್ತಿಯು ಅಪರಾಧ ಮಾಡಿದರೆ, ಅವನ ಅಜ್ಜಿ, ಪೋಷಕರು ಮತ್ತು ಮಕ್ಕಳು ಸೇರಿದಂತೆ ಅವನ ಸಂಪೂರ್ಣ ರಕ್ತಸಂಬದಿಗಳನ್ನು ಜೈಲಿಗೆ ಕಳುಹಿಸಲಾಗುತ್ತದೆ.